ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ; ಗೋವಾದಲ್ಲಿ ಸಿಟಿ ರವಿ ಕೊಟ್ಟ ಸುಳಿವು ಏನು..?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ; ಗೋವಾದಲ್ಲಿ ಸಿಟಿ ರವಿ ಕೊಟ್ಟ ಸುಳಿವು ಏನು..?

ಬೆಂಗಳೂರು: ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಸಿಎಂ ಬಿಎಸ್​ವೈ ಅವರೇ ಇಂದು ಸಂಜೆ ಹೈಕಮಾಂಡ್​​ನಿಂದ ಮಹತ್ವದ ಸಂದೇಶ ಹೊರ ಬರಲಿದೆ ಎಂದಿದ್ದಾರೆ. ಇದರ ಮಧ್ಯೆ ಗೋವಾದಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನೀಡಿರುವ ಹೇಳಿಕೆ ನಾಯಕತ್ವ ಬದಲಾವಣೆ ಬಗ್ಗೆ ಉಂಟಾಗಿರುವ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದೆ.

ಬಿಎಸ್​ ಯಡಿಯೂರಪ್ಪಗೆ ಬಿಜೆಪಿ ಎಲ್ಲಾ ಅವಕಾಶಗಳನ್ನೂ ನೀಡಿದೆ. 4 ಬಾರಿ ಸಿಎಂ ಆಗುವ ಅವಕಾಶ ನೀಡಿದೆ. ಉಪಮುಖ್ಯಮಂತ್ರಿಯಾಗಿಯೂ ಜನಸೇವೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಕಾಂಗ್ರೆಸ್​ನಲ್ಲೂ ಯಾರಿಗೂ ಇಷ್ಟು ಅವಕಾಶ ನೀಡಿಲ್ಲ. ಸಿಎಂ ಯಡಿಯೂರಪ್ಪ ಜನಪ್ರಿಯ ನಾಯಕರಿದ್ದಾರೆ. ಹೈಕಮಾಂಡ್ ಸೂಚನೆಯನ್ನು ಎಲ್ಲರೂ ಪಾಲಿಸಲೇಬೇಕು ಅಂತಾ ಸಿಟಿ ರವಿ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಕ್ಕಾ ಅನ್ನೋ ಸಂದೇಶವನ್ನ ಸಿಟಿ ರವಿ ಸಾರಿದ್ರಾ ಅನ್ನೋ ಪ್ರಶ್ನೆ ಹುಟ್ಟುಹಾಕಿಕೊಂಡಿದೆ.

The post ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ; ಗೋವಾದಲ್ಲಿ ಸಿಟಿ ರವಿ ಕೊಟ್ಟ ಸುಳಿವು ಏನು..? appeared first on News First Kannada.

Source: newsfirstlive.com

Source link