ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಪ್ರಿಯಾ ಮಲಿಕ್

ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಪ್ರಿಯಾ ಮಲಿಕ್

ಇಡೀ ಭಾರತ ಒಲಿಂಪಿಕ್ಸ್​ನಲ್ಲಿ ವೇಟ್​​ಲಿಫ್ಟರ್​ ಮೀರಾ ಬಾಯಿ ಚಾನು ಗೆದ್ದ ​ಬೆಳ್ಳಿ ಪದಕದ ಸಂಭ್ರಮದಲ್ಲಿರುವಾಗಲೇ, ಇನ್ನೊಂದು ಚಿನ್ನದ ಪದಕ ಭಾರತಕ್ಕೆ ಸಂದಿದೆ. ಆದ್ರೆ ಅದು ಒಲಿಂಪಿಕ್ಸ್​ನಲ್ಲಿ ಅಲ್ಲ. ಬದಲಾಗಿ ಹಂಗೇರಿಯಲ್ಲಿ ನಡೆದ ವಿಶ್ವ ಕೆಡೆಟ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ.

ಹಂಗೇರಿಯಲ್ಲಿ ನಡೆಯುತ್ತಿರುವ ವಿಶ್ವ ಕೆಡೆಟ್‌ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಭಾರತದ ಪ್ರಿಯಾ ಮಲಿಕ್​ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಹಿಳೆಯರ 73 ಕೆ.ಜಿ ತೂಕದ ವಿಭಾಗದ ಫೈನಲ್ ಪಂದ್ಯದಲ್ಲಿ ಬೆಲಾರಸ್ ನ ಕುಸ್ತಿ ಪಟು ಕ್ಸೆನಿಯಾ ಪಟಪೋವಿಚ್ ಅವರನ್ನು ಪ್ರಿಯಾ 5-0 ಅಂತರದಿಂದ ಸೋಲಿಸಿದ್ದಾರೆ.

ನಿನ್ನೆಯಷ್ಟೇ ಟೊಕಿಯೋ ಒಲಿಂಪಿಕ್ಸ್​ನ 49 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ ಸ್ಪರ್ದೆಯಲ್ಲಿ ಮೀರಾ ಬಾಯಿ ಚಾನು ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದ್ರು. ಇನ್ನು ಇದೀಗ ಚಿನ್ನದ ಸಾಧನೆ ಮಾಡಿರುವ ಪ್ರಿಯಾ ಮಲಿಕ್​ಗೆ ಶುಭಾಶಯಗಳ ಮಾಹಾಪೂರವೇ ಹರಿದು ಬರುತ್ತಿದೆ.

 

The post ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಪ್ರಿಯಾ ಮಲಿಕ್ appeared first on News First Kannada.

Source: newsfirstlive.com

Source link