ಟೋಕಿಯೋ ಒಲಿಂಪಿಕ್ಸ್​​: ಹೊರ ಬಿದ್ದ ಸಾನಿಯಾ-ಅಂಕಿತಾ ಜೋಡಿ

ಟೋಕಿಯೋ ಒಲಿಂಪಿಕ್ಸ್​​: ಹೊರ ಬಿದ್ದ ಸಾನಿಯಾ-ಅಂಕಿತಾ ಜೋಡಿ

ಟೆನ್ನಿಸ್​​ ಮಹಿಳಾ ಡಬಲ್ಸ್ ಸ್ಪರ್ಧೆಯಲ್ಲಿ ನಿರೀಕ್ಷೆ ಹುಟ್ಟು ಹಾಕಿದ್ದ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಜೋಡಿ ಮೊದಲ ಯತ್ನದಲ್ಲೇ ಮುಗ್ಗರಿಸಿದೆ. ಉಕ್ರೇನ್​ನ ಕಿಚೆನೊಕ್​ ಸಹೋದರಿಯರ ವಿರುದ್ಧದ ಪಂದ್ಯದಲ್ಲಿ ಸೋಲುಂಡಿದ್ದಾರೆ.

ಇದೇ ಮೊದಲ ಬಾರಿ ಸಾನಿಯಾ ಮಿರ್ಜಾ ಜೊತೆಗೂಡಿ ಕಣಕ್ಕಿಳಿದಿದ್ದ ಅಂಕಿತಾ ರೈನಾ ಮೊದಲ ಸೆಟ್​ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಈ ಪ್ರದರ್ಶನದೊಂದಿಗೆ ಮೊದಲ ಸೆಟ್ ಅನ್ನು 6-0 ಅಂತರದಲ್ಲಿ ವಶಪಡಿಸಿದ್ದ ಈ ಜೋಡಿ 2 ಹಾಗೂ 3ನೇ ಸುತ್ತಿನಲ್ಲಿ ಮಂಕಾಯಿತು. ಪರಿಣಾಮ 6-0, 6-7, 8-10ರ ಅಂತರದಲ್ಲಿ ಭಾರತೀಯ ಜೋಡಿ ಸೋಲಿಗೆ ಶರಣಾಯಿತು.

The post ಟೋಕಿಯೋ ಒಲಿಂಪಿಕ್ಸ್​​: ಹೊರ ಬಿದ್ದ ಸಾನಿಯಾ-ಅಂಕಿತಾ ಜೋಡಿ appeared first on News First Kannada.

Source: newsfirstlive.com

Source link