ರಾಜ್ಯದ ಯಾವ ನಾಯಕರಿಗೂ ಸಿಗದ ಸ್ಥಾನಮಾನ ನನಗೆ ಸಿಕ್ಕಿದೆ, ಸಂತೃಪ್ತನಾಗಿದ್ದೇನೆ- ಬಿಎಸ್​​ವೈ

ರಾಜ್ಯದ ಯಾವ ನಾಯಕರಿಗೂ ಸಿಗದ ಸ್ಥಾನಮಾನ ನನಗೆ ಸಿಕ್ಕಿದೆ, ಸಂತೃಪ್ತನಾಗಿದ್ದೇನೆ- ಬಿಎಸ್​​ವೈ

ಬೆಳಗಾವಿ: ನಮ್ಮ ರಾಜ್ಯದಲ್ಲಿ ಬೇರೆ ಯಾವ ನಾಯಕರಿಗೂ ಸಿಗದ ಎಲ್ಲಾ ಅನುಕೂಲಗಳು ಹಾಗೂ ಸ್ಥಾನಮಾನಗಳು ನನಗೆ ಸಿಕ್ಕಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಅಮಿತ್ ಶಾ ಅವರಿಗೆ ಧನ್ಯವಾದ ತಿಳಿಸುತ್ತೇನೆ. ನನಗೆ ಏನೂ ಕೊರತೆ ಇಲ್ಲ. ಆದ್ದರಿಂದ ಸಂತೃಪ್ತಿ ಹಾಗೂ ಸಮಾಧಾನದಿಂದ ಇದ್ದೇನೆ. ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರು ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಸಿಎಂ ಬಿಎಸ್​​ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ತಿಳಿಸಿದ್ದಾರೆ.

ಪ್ರವಾಹದಿಂದ ಹಾನಿಗೊಳಗಾಗಿದ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಿಎಂ, ನಾಯಕತ್ವ ಬದಲಾವಣೆ ಆದರೆ ರಾಜ್ಯದಲ್ಲಿ ಪಕ್ಷಕ್ಕೆ ಏನೂ ಆಗೋದಿಲ್ಲ. ಮುಂದಿನ ಒಂದೂವರೆ ವರ್ಷ ರಾಜ್ಯದಲ್ಲಿ ಓಡಾಟ ಮಾಡಿ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯವನ್ನು ಮಾಡುತ್ತೇವೆ. ಎಲ್ಲರೂ ಒಟ್ಟಾಗಿ ಹೋಗುತ್ತೇವೆ. ನಾನು ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯೆ ಕೊಡೋದಿಲ್ಲ. ಸಿದ್ದರಾಮಯ್ಯರಂತಹ ನೂರು ಜನ ಬಂದರೂ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೈಕಮಾಂಡ್ ಸೂಚನೆಯನ್ನ ಎಲ್ರೂ ಪಾಲಿಸಲೇಬೇಕು -ನಾಯಕತ್ವ ಬದಲಾವಣೆ ಬಗ್ಗೆ ಸಿ.ಟಿ.ರವಿ ಉತ್ತರ

ಬೆಳಗಾವಿಗೆ ಸಿಎಂ ಆಗಮಿಸಿದರೂ ಸಚಿವೆ ಶಶಿಕಲಾ ಜಿಲ್ಲೆ ಅವರು ಯಾಕೆ ಬಂದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸಿಎಂ, ನನಗೆ ಆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಪ್ರವಾಹ ಹಾಗೂ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಇದ್ದರೂ ನಾಯಕತ್ವ ಬದಲಾವಣೆ ಅಗತ್ಯವಿದೆಯಾ ಎಂಬ ಪ್ರಶ್ನೆಗೆ, ಕಾದು ನೋಡೋಣ.. ಏನು ಸಂದೇಶ ಬರುತ್ತೋ ಕಾದು ನೋಡೋಣ ಎಂದರು.

ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶಕ್ಕೆ ಸಿಎಂ ಭೇಟಿ -ಪರಿಹಾರ ನೀಡೋ ಭರವಸೆ ಕೊಟ್ಟ ಬಿಎಸ್​ವೈ

ಇದನ್ನೂ ಓದಿ: ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿ ಸಿಎಂ ನೆರೆ ವೀಕ್ಷಣೆ.. ಎಲ್ಲಿಯೂ ಕಾಣಿಸಿಕೊಳ್ಳದ ಸಚಿವೆ

The post ರಾಜ್ಯದ ಯಾವ ನಾಯಕರಿಗೂ ಸಿಗದ ಸ್ಥಾನಮಾನ ನನಗೆ ಸಿಕ್ಕಿದೆ, ಸಂತೃಪ್ತನಾಗಿದ್ದೇನೆ- ಬಿಎಸ್​​ವೈ appeared first on News First Kannada.

Source: newsfirstlive.com

Source link