ಉಡುಪಿಯಲ್ಲಿ ಸರಣಿ ಕಳ್ಳತನ – ಮೂರು ಮನೆಗೆ ಕನ್ನ ಹಾಕಿದ ಖದೀಮರು

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮೂಳೂರಿನಲ್ಲಿ ಸರಣಿ ಕಳ್ಳತನವಾಗಿದೆ. ಮೂಳೂರು ಪರಿಸರದ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದಾರೆ.

ಕಾಪು ಸಮೀಪದ ಮೂಳೂರು ಗ್ರಾಮದ ಈಸ್ಟ್ ವೆಸ್ಟ್ ನರ್ಸರಿ ಬಳಿಯ ಮಹಮ್ಮದ್ ರಫೀಕ್, ಮಧುರಾ ಕಾಂಪೌಂಡ್ ನ ಇಬ್ರಾಹಿಂ ಮತ್ತು ಶೆಹನಾಜ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ನಗ-ನಗದನ್ನು ದೋಚಿದ್ದಾರೆ. ಬಾಗಿಲು ಒಡೆದು ಮನೆಗೆ ನುಗ್ಗಿ ಸಿಕ್ಕ ಎಲ್ಲಾ ವಸ್ತುಗಳನ್ನು ಕದ್ದಿದ್ದಾರೆ. ಅಲ್ಲದೇ ಬೀರೂ ಒಡೆದು, ಚಿನ್ನಾಭರಣ ಲೂಟಿ ಮಾಡಿದ್ದಾರೆ.

ಮೂರು ಮನೆಗಳಲ್ಲೂ ಯಾರೂ ಇಲ್ಲದ್ದನ್ನು ತಿಳಿದು ಒಂದೇ ತಂಡದವರು ಈ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗಿದೆ. ಕಾಪು ಸರ್ಕಲ್ ಪ್ರಕಾಶ್, ಎಸ್.ಐ ರಾಘವೇಂದ್ರ .ಸಿ, ಕ್ರೈಂ ಎಸ್‍ಐ ತಿಮ್ಮೇಶ್ ಬಂದು ತನಿಖೆ ಮಾಡಿದ್ದಾರೆ. ಬೆರಳಚ್ಚು ಮತ್ತು ಶ್ವಾನದಳ ಪಡೆ ಹಾಗೂ ಪೊಲೀಸ್ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ:ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

The post ಉಡುಪಿಯಲ್ಲಿ ಸರಣಿ ಕಳ್ಳತನ – ಮೂರು ಮನೆಗೆ ಕನ್ನ ಹಾಕಿದ ಖದೀಮರು appeared first on Public TV.

Source: publictv.in

Source link