ಮೃತ ಗರ್ಭಿಣಿಯ ವಿಧಿವಿಧಾನಕ್ಕೆ ಪ್ರವಾಹ ಅಡ್ಡಿ; ಆರೈಕೆ ಕೇಂದ್ರದಲ್ಲಿ ಕಣ್ಣೀರಿಟ್ಟ ಕುಟುಂಬ

ಮೃತ ಗರ್ಭಿಣಿಯ ವಿಧಿವಿಧಾನಕ್ಕೆ ಪ್ರವಾಹ ಅಡ್ಡಿ; ಆರೈಕೆ ಕೇಂದ್ರದಲ್ಲಿ ಕಣ್ಣೀರಿಟ್ಟ ಕುಟುಂಬ

ಬಾಗಲಕೋಟೆ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ‌ ಮುಂದುವರಿದ ಕಾರಣ ‘ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತುಂಬು ಗರ್ಭಿಣಿ ಅಂತ್ಯಸಂಸ್ಕಾರ ಮುಗಿಸಿ ಬಂದ ಕೂಡಲೇ ಮನೆಗೆ ಮಳೆ ನೀರು ನುಗ್ಗಿದ ಪರಿಣಾಮ ಕುಟುಂಬವೊಂದು ಊರು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಘಟಪ್ರಭಾ ನದಿ ಪ್ರವಾಹದಿಂದ ಈಗ ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

ಹೌದು, ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಹೀಗೊಂದು ಮನಕಲುಕುವ ಘಟನೆ ನಡೆದಿದೆ. ಐದು ದಿನಗಳ ಹಿಂದೆ ತುಂಬು ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದರು. ತುಂಬು ಗರ್ಭಿಣಿ ಅಂತ್ಯಸಂಸ್ಕಾರ ನೆರವೇರಿಸಿ ಇಡೀ ಕುಟುಂಬ ಮನೆ ಸೇರುವಷ್ಟರಲ್ಲಿ ಪ್ರವಾಹ ಬಂದೊದಗಿದೆ. ಹೀಗಾಗಿ ಮರುದಿನದ ಬೂದಿ ಬಳಿಯುವ ಕಾರ್ಯವೂ ನೆರವೇರಿಸಲಾಗದೆ ಕುಟುಂಬ ಕಾಳಜಿ ಕೇಂದ್ರ ಸೇರಿದೆ.

ಲಕ್ಷ್ಮೀ ಕವಳ್ಳಿ (22) ಎಂಬ ಮಹಿಳೆ ಹೆರಿಗೆ ನೋವು ತಾಳಲಾರದೆ ಮೃತಪಟ್ಟಿದ್ದರು. ಪ್ರವಾಹದ ಕಾರಣ ಅಂತ್ಯಸಂಸ್ಕಾರದ ಬಳಿಕ ವಿಧಿವಿಧಾನ ನೆರವೇರಿಸೋಕೆ ಗೋವಿಂದ ಕವಳ್ಳಿ ಎಂಬುವವರ ಕುಟುಂಬ ಪರದಾಡಿದೆ.

ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶಕ್ಕೆ ಸಿಎಂ ಭೇಟಿ -ಪರಿಹಾರ ನೀಡೋ ಭರವಸೆ ಕೊಟ್ಟ ಬಿಎಸ್​ವೈ

ತಂದೆ, ತಾಯಿ, ಸಹೋದರ, ಒಬ್ಬ ಮಗ ಸೇರಿದಂತೆ ಒಟ್ಟು ಒಬ್ಬತ್ತು ಜನರಿರುವ ಕುಟುಂಬ ಇದು. ಉಟ್ಟ ಬಟ್ಟೆಯಲ್ಲಿ ಕಾಳಜಿ ಕೇಂದ್ರಕ್ಕೆ ತೆರಳಿದ ಕುಟುಂಬಕ್ಕೆ ಬಂಧುಗಳು ಸಾಂತ್ವನ ಹೇಳುತ್ತಿದ್ದಾರೆ. ಸದ್ಯ ಕಾಳಜಿ ಕೇಂದ್ರಕ್ಕೂ ಪ್ರವಾಹ ನುಗುತ್ತಿದ್ದೂ ಜೀವ ಕಳೆದುಕೊಳ್ಳುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.

The post ಮೃತ ಗರ್ಭಿಣಿಯ ವಿಧಿವಿಧಾನಕ್ಕೆ ಪ್ರವಾಹ ಅಡ್ಡಿ; ಆರೈಕೆ ಕೇಂದ್ರದಲ್ಲಿ ಕಣ್ಣೀರಿಟ್ಟ ಕುಟುಂಬ appeared first on News First Kannada.

Source: newsfirstlive.com

Source link