ಜೊಲ್ಲೆ ಮೊಟ್ಟೆ ಡೀಲ್​: ಶಶಿಕಲಾ, ಪರಣ್ಣ ಮುನವಳ್ಳಿ ರಾಜೀನಾಮೆಗೆ ಹೆಚ್ಚಿದ ಒತ್ತಡ

ಜೊಲ್ಲೆ ಮೊಟ್ಟೆ ಡೀಲ್​: ಶಶಿಕಲಾ, ಪರಣ್ಣ ಮುನವಳ್ಳಿ ರಾಜೀನಾಮೆಗೆ ಹೆಚ್ಚಿದ ಒತ್ತಡ

ಕೊಪ್ಪಳ: ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ಕಾಂಗ್ರೆಸ್ ಮಹಿಳಾ ಘಟಕ ಪ್ರತಿಭಟನೆ ನಡೆಸಿ ಪ್ರಕರಣದಲ್ಲಿ ಭಾಗಿಯಾದ ಸಚಿವೆ ಮತ್ತು ಶಾಸಕರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಶಾಸಕ ಪರಣ್ಣ ಮುನವಳ್ಳಿ ಕ್ಷೇತ್ರದ ಗಂಗಾವತಿಯ ಕಿನ್ನಾಳ ಗ್ರಾಮದಲ್ಲಿ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಮಾಡಿದ ಮಹಿಳಾ ಕಾಂಗ್ರೆಸ್​ ನಾಯಕಿಯರು ಜೊಲ್ಲೆ ಮತ್ತು ಪರಣ್ಣ ಮುನವಳ್ಳಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

blank

ಇನ್ನು ಮೊಟ್ಟೆಯ ಮೇಲೆ ಸಚಿವೆ ಮತ್ತು ಶಾಸಕರ ಹೆಸರು ಬರೆದು ಪ್ರತಿಭಟನೆ ನಡೆಸಿದ್ದು ಗ್ರಾಮದ ಮನೆ ಮನೆಗಳಿಗೆ ತೆರಳಿ ಗರ್ಭಿಣಿಯರಿಗೆ ಹಾಗೂ ಅಪೌಷ್ಟಿಕ ಮಕ್ಕಳಿಗೆ ಮೊಟ್ಟೆ ನೀಡಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ನಿಮಗೆ ಮೊಟ್ಟೆ ಕೊಡಲು ಆಗದಿದ್ದರೆ ಹೇಳಿ ನಾವು ಕೊಡುತ್ತೇವೆ ಆದರೆ ಗರ್ಭಿಣಿಯರ ಮೊಟ್ಟೆಯ ಮೇಲೆ ಡೀಲ್​ ಮಾತ್ರ ಮಾಡಬೇಡಿ. ಈ ಪ್ರಕರಣದಿಂದ ಈಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತಪಡಿಸಿದರು.

The post ಜೊಲ್ಲೆ ಮೊಟ್ಟೆ ಡೀಲ್​: ಶಶಿಕಲಾ, ಪರಣ್ಣ ಮುನವಳ್ಳಿ ರಾಜೀನಾಮೆಗೆ ಹೆಚ್ಚಿದ ಒತ್ತಡ appeared first on News First Kannada.

Source: newsfirstlive.com

Source link