ಇನ್ನೂ ಸಂದೇಶ ಬಂದಿಲ್ಲ, ಇವತ್ತು ಅಥವಾ ನಾಳೆ ಬೆಳಗ್ಗೆ ಗೊತ್ತಾಗಲಿದೆ -ಬಿಎಸ್​ವೈ

ಇನ್ನೂ ಸಂದೇಶ ಬಂದಿಲ್ಲ, ಇವತ್ತು ಅಥವಾ ನಾಳೆ ಬೆಳಗ್ಗೆ ಗೊತ್ತಾಗಲಿದೆ -ಬಿಎಸ್​ವೈ

ಬೆಂಗಳೂರು: ನನಗೆ ಹೈಕಮಾಂಡ್​ನಿಂದ ಇದುವರೆಗೆ ಯಾವುದೇ ಸಂದೇಶ ಬಂದಿಲ್ಲ ಅಂತಾ ಸಿಎಂ ಬಿಎಸ್​ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ನಾಯಕತ್ವ ಬದಲಾವಣೆ ಚರ್ಚೆಯ ಬಗ್ಗೆ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ.. ಇದುವರೆಗೂ ನನಗೆ ಯಾವುದೇ ಸಂದೇಶ ಬಂದಿಲ್ಲ. ಇಂದು ಸಂಜೆ ವೇಳೆಗೆ ಹೈಕಮಾಂಡ್​ ಬಗ್ಗೆ ಸಂದೇಶ ಬರುವ ವಿಶ್ವಾಸ ಇದೆ. ಇವತ್ತು ಅಥವಾ ನಾಳೆ ಬೆಳಗ್ಗೆ ಎಲ್ಲವೂ ಗೊತ್ತಾಗಲಿದೆ  ಅಂತಾ ಹೇಳಿದರು.

ನಾನು ಸಿಎಂ ಆಗಿ ಕೊನೆ ಕ್ಷಣದವರೆಗೂ ನನ್ನ ಕೆಲಸವನ್ನ ಮಾಡುತ್ತೇನೆ. ಹೈಕಮಾಂಡ್​​ ಸಂದೇಶ ಏನು ಹೇಳುತ್ತೆ ಅನ್ನೋದ್ರ ಮೇಲೆ ನಾನು ನಿರ್ಧಾರ ಮಾಡುತ್ತೇನೆ. ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ. ಅವರು ಸಿಎಂ ಸ್ಥಾನದಿಂದ ಮುಂದುವರಿ ಅಂದ್ರೆ ಮುಂದುವರಿಯುತ್ತೇನೆ. ಬೇಡ ಅಂದರೆ ರಾಜೀನಾಮೆ ನೀಡುತ್ತೇನೆ ಎಂದರು.

The post ಇನ್ನೂ ಸಂದೇಶ ಬಂದಿಲ್ಲ, ಇವತ್ತು ಅಥವಾ ನಾಳೆ ಬೆಳಗ್ಗೆ ಗೊತ್ತಾಗಲಿದೆ -ಬಿಎಸ್​ವೈ appeared first on News First Kannada.

Source: newsfirstlive.com

Source link