ದೆಹಲಿಯಲ್ಲಿ ಮುರುಗೇಶ್ ನಿರಾಣಿ.. ಇತ್ತ ಚಾಮುಂಡೇಶ್ವರಿ ಮೊರೆ ಹೋದ ಸಹೋದರ ಹನುಮಂತ ನಿರಾಣಿ

ದೆಹಲಿಯಲ್ಲಿ ಮುರುಗೇಶ್ ನಿರಾಣಿ.. ಇತ್ತ ಚಾಮುಂಡೇಶ್ವರಿ ಮೊರೆ ಹೋದ ಸಹೋದರ ಹನುಮಂತ ನಿರಾಣಿ

ಮೈಸೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆಯ ಬಿರುಗಾಳಿ ಎದ್ದ ಬೆನ್ನಲ್ಲೆ ಸಿಎಂ ಸ್ಥಾನದ ಆಕಾಂಕ್ಷಿಗಳಿಂದ ಪೂಜೆ, ಪುನಸ್ಕಾರಗಳು ಜೋರಾಗಿಯೇ ನಡೀತಿದೆ.

ಇನ್ನು ಸಿಎಂ ಬದಲಾವಣೆಯ ನಂತರ ಮುಂದಿನ ಸಿಎಂ ರೇಸ್​ನ ಪ್ರಬಲ ಅಭ್ಯರ್ಥಿ ಎಂದೇ ಗುರುತಿಸಿಕೊಳ್ಳುತ್ತಿರುವ ಸಚಿವ ಮುರುಗೇಶ್​ ನಿರಾಣಿ, ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇತ್ತ ಮುರುಗೇಶ್ ನಿರಾಣಿ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯರು ಆಗಿರುವ ಹನುಮಂತ ನಿರಾಣಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ನಿನ್ನೆ ರಾತ್ರಿ ಚಾಮುಂಡಿ ಬೆಟ್ಟಕ್ಕೆ ತೆರಳಿದ ಹನುಮಂತ ನಿರಾಣಿ,  ಮುರುಗೇಶ್ ನಿರಾಣಿಯವರ ಹೆಸರಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನು ಇವರಿಬ್ಬರ ನಡೆಗಳು ರಾಜಕೀಯ ವಲಯದಲ್ಲಿ ತೀವ್ರ ಕೂತೂಹಲ ಉಂಟುಮಾಡಿದೆ.

The post ದೆಹಲಿಯಲ್ಲಿ ಮುರುಗೇಶ್ ನಿರಾಣಿ.. ಇತ್ತ ಚಾಮುಂಡೇಶ್ವರಿ ಮೊರೆ ಹೋದ ಸಹೋದರ ಹನುಮಂತ ನಿರಾಣಿ appeared first on News First Kannada.

Source: newsfirstlive.com

Source link