ನಾನು ಹೆಣ್ಣು ಪೀಡಕನಾ? ಹೆಣ್ಣು ನಿಂದಕನಾ? -ಚಕ್ರವರ್ತಿ ಹೀಗ್ಯಾಕೆ ಅಂದ್ರು..?

ನಾನು ಹೆಣ್ಣು ಪೀಡಕನಾ? ಹೆಣ್ಣು ನಿಂದಕನಾ? -ಚಕ್ರವರ್ತಿ ಹೀಗ್ಯಾಕೆ ಅಂದ್ರು..?

ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್​ ಅವರ ಮಾತುಗಳು, ಅವರ ನೇರ ನುಡಿ ಖಡಕ್​ ಆಗಿಯೇ ಇರುತ್ತೆ. ಚಕ್ರವರ್ತಿ ಮಾಡಿರುವ ತಪ್ಪುಗಳನ್ನ ಕಿಚ್ಚ ಎಳೆ ಎಳೆಯಾಗಿ ಬಿಚ್ಚಿಟ್ಟರು. ಚಕ್ರವರ್ತಿ ಅವರೇ ನಿಮ್ಮಿಂದ ನನಗೆ ಈ ವಾರ ಎರಡು ವಿಷಯಕ್ಕೆ ನೋವಾಗಿದೆ ಎನ್ನುತ್ತಲೇ ಮಾತು ಶುರು ಮಾಡಿದ್ರು ಸುದೀಪ್​.

ಮೊದಲಿಗೆ ಅವರು ತೆಗೆದುಕೊಂಡ ಟಾಪಿಕ್​ ಚಕ್ರವರ್ತಿ, ಪ್ರಶಾಂತ್​ ಬಗ್ಗೆ ವೈಯಕ್ತಿಕವಾಗಿ ಮಾತ್ನಾಡಿದ್ದು. ಈ ಬಗ್ಗೆ ಕಳೆದ ವಾರವೇ ಸುದೀಪ್​ ಖಡಕ್​ ಆಗಿ ವಾರ್ನ್​ ಮಾಡಿದ್ರು. ಇದಾದ್ಮೇಲೆ ಕುಚುಕು ಗೆಳೆಯರಿಬ್ಬರು ಮತ್ತೆ ಮಾತ್ನಾಡಲು ಶುರು ಮಾಡಿದ್ರು. ತಮ್ಮ ತಮ್ಮ ತಪ್ಪುಗಳ ಬಗ್ಗೆ ಪರಾಮರ್ಶೆ ಮಾಡಿದ್ರು.

blank

ಆಗ ಪ್ರಶಾಂತ್​, ನಾನು ಕಾರ್​ ತೆಗೆದುಕೊಂಡಿದ್ರ ಬಗ್ಗೆ ಮಾತ್ನಾಡಬಾರ್ದಿತ್ತು. ಸುದೀಪ್​ ಸರ್​ ಈ ಬಗ್ಗೆ ಹೇಳಿದಾಗ, ನೀನು ಹಿಂಗೆಲ್ಲ ನನ್​ ಬಗ್ಗೆ ಮಾತಾಡಿದಿಯಾ ಅಂತಾ ನಂಗೆ ತುಂಬಾ ನೋವಾಯ್ತು. ನಿನ್ನ ಜೊತೆ ಮಾತನಾಡಲೇ ಬಾರದು ಅಂತಾ ನನ್ನ ಮಗನ ಮೇಲೆ ಆಣೆ ಮಾಡಿ ಡಿಸೈಡ್​ ಮಾಡ್ಕೊಂಡಿದ್ದೆ ಅಂತಾರೆ. ಇನ್ನೂ ಏನೇನ್​ ಹೇಳಿದಿಯಾ.. ಯಾರ್​ ಯಾರಿಗೆ ಹೇಳಿದಿಯಾ ಅಂತ ಪ್ರಶ್ನೆ ಮಾಡ್ತಾರೆ. ಆಗ ಚಕ್ರವರ್ತಿ, ಇಲ್ಲ ಕಣೋ ಕೋಪದಲ್ಲಿ ಮಾತ್ನಾಡಿದೆ. ಯಾರ್​ ಮುಂದೇನು ಹೇಳಿಲ್ಲ. ಅದು ಆ್ಯಕ್ಚವಲಿ ಅರವಿಂದ್​ಗೆ ಹೇಳಿಲ್ಲ. ಮಂಜುಗೆ ಹೇಳಿದ್ದು ಅಂತಾರೆ.

ಇದೇ ವಿಷಯದ ಬಗ್ಗೆ ಸುದೀಪ್​ ಮಾತ್ನಾಡಿ, ಚಕ್ರವರ್ತಿ ಅವರೇ ನೀವು ಪ್ರಶಾಂತ್​ ಅವರಿಗೆ ಹೇಳ್ತೀರಾ.. ಅದೇಲ್ಲ ಏನ್​ ಇಲ್ಲ ಕಣೋ ಮೂರೇ ಲೈನ್​ ಹೇಳಿದೆ ನಾನು ಅಂತಿರಾ. ಓಕೆ ಅದನ್ನ ಅಲ್ಲಿಗೆ ಬಿಟ್ಟಿದ್ರು ಆಗ್ತಿತ್ತು. ಆದರೆ ಅಲ್ಲಿಂದ ನೀವು ಒನ್​ ಲೈನ್​ ಕಂಟಿನ್ಯೂ ಮಾಡ್ತೀರ. ಅದು ಆ್ಯಕ್ಚವಲಿ ಅರವಿಂದ್​ಗೆ ಅಲ್ಲ ಕಣೋ ಮಂಜುಗೆ ಹೇಳಿದ್ದೆ ಅಂತಿರಾ.. ನಿಮ್ಮ ವ್ಯಕ್ತಿತ್ವಗಳು ಬೀಳ್ತಾ ಇದೆ ಅಂದಾಗ ಅದನ್ನು ಕಾಪಾಡುವ ಜವಾಬ್ದಾರಿ ನಂದು. ನೀವೆಲ್ಲ ಟಾಸ್ಕ್​ನಲ್ಲಿ ಇನ್ವಾಲ್ವ್​​​ ಆಗಿ ಅಂತಾ ಹೇಳಿ ಹೋಗೋನು​ ನಾನು, ನಿಮ್ಮ ವ್ಯಕ್ತಿತ್ವದ ಬಗ್ಗೆ ಕಾಳಜಿ ಇದೆ. ನಾನೇ ಇಲ್ಲಿ ಸುಳ್ಳು ಹೇಳ್ತೀದಿನಿ ಅನ್ನೂ ರೀತಿ ಮಾಡ್ಬೀಟ್ರೀ ಅಂತಾರೆ.

blank

ಚಕ್ರವರ್ತಿ ಉತ್ತರಿಸಿ, ಇಲ್ಲಾ ಸರ್​ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಬೇಕು ಅಂತಾ ಅಲ್ಲ. ಅಷ್ಟು ಡೀಪ್ ಮೀನಿಂಗ್​ನಲ್ಲಿ ನಾನು ಮಾತ್ನಾಡಿಲ್ಲ. ಇಟ್​ ವಾಸ್​ ಅ ಕ್ಯಾಜ್ವಲ್​ ಟಾಕ್​. ನಂಗು ಕನ್ಫ್ಯೂಸನ್​ ಇತ್ತು. ಅರವಿಂದ್​ ಅಥವಾ ಮಂಜು ಅಂತಾ ಅದಕ್ಕೆ ಹಂಗೆ ಹೇಳಿದೆ.

ಸುದೀಪ್​, ಚಕ್ರವರ್ತಿ ಅವರೇ ಡೀಪ್​ ಮೀನಿಂಗ್​ ಅಲ್ಲ. ನೀವು ಮಾತ್ನಾಡುವ ಮಾತು ಯಾವ ರೀತಿ ಪೋಟ್ರೇ ಆಗ್ಬಹುದು ಅಂತಾ ಒಂದ್​ ಸಾರಿ ಯೋಚನೆ ಮಾಡಿ. ಒಂದ್​ ವೇಳೆ ನೀವು ಹೇಳಿದ್ದನ್ನಾ ಪ್ರಶಾಂತ್​ ಅವರು ಹೇಗೆ ತೂಗೋಬಹುದು. ಅವರಿಗೆ ಸುದೀಪ್​ ಸುಳ್ಳು ಹೇಳಿದ್ರಾ ಅಂತಾ ಅನ್ಸಲ್ವಾ. ಈ ವೇದಿಕೆ ಮೇಲೆ ನಿಂತ್ಕೊಂಡು ನಾನು ನಿಮ್ಮನಿಮ್ಮಲ್ಲಿ ಕನ್​​ಫ್ಯೂಸ್ ಕ್ರೀಯೆಟ್​ ಮಾಡ್ತಿದ್ದಿನಿ ಅಂತಾ ಪೋಟ್ರೇ ಆಗಲ್ವಾ. ಇದು ಪ್ರಶಾಂತ್​ ನಿಮ್ಮ ನಡುವಿನ ವಿಷಯ ಅಲ್ಲ. ಈಗ ನಿಮ್ಮ ನನ್ನ ನಡುವೆ ಇರೋದು. ನೀವು ಎಕ್ಸ್​​ಟ್ರಾ ಸೇರ್ಸೋದ್ರಿಂದ ನಿಮ್ಮ ವ್ಯಕ್ತಿತ್ವ ಬಿದ್ದೋಗುತ್ತೆ ಅಂತಾರೆ.

ಇದ್ರಿಂದ ಆಕ್ರೋಶಗೊಂಡ ಚಕ್ರವರ್ತಿ, ಬ್ರೇಕ್​ನಲ್ಲಿ ಮನೆಯವರ ಮುಂದೆ ಅಸಮಾಧಾನ ಹೊರ ಹಾಕ್ತಾರೆ. ನಾನು ಇಲ್ಲಿ ಟಾರ್ಗೆಟ್​ ಆಗ್ತೀದ್ದಿನಿ ಅಂತಾ ಅನಿಸುತ್ತಿದೆ. ಪ್ರತಿ ವಾರ ನಂದೇ ತಪ್ಪ ನಂದೇ ತಪ್ಪು ಅಂತಾರೆ. ನಾನೇ ಒಬ್ಬ ಅಪರಾಧಿನಾ.. ನಾನು ಇಮೇಜ್​ ಕಳ್ಕೋತ್ತಿದ್ದಾನಾ.. ಕ್ಯಾಜವಲ್​ ಆಗಿ ಮಾತಾಡಿದ್ದನ್ನ ಇಷ್ಟು ದೊಡ್ಡದು ಮಾಡ್ತಿದ್ದಾರೆ. ನಾನು ಸರ್​ಗೆ ಅವಮಾನ ಮಾಡ್ತೀನಿ ಅಂತಾ ಅವರು ಚಿಂತೆ ಮಾಡಿದ್ರೇ ನನ್ನ ತಪ್ಪಾ. ನಾನೇ ಇಲ್ಲಿ ಪರಮ ಪಾಪಿನಾ ಅನ್ನೋತರಹ ಆಡ್ತಿದ್ದಾರೆ ಅಂತಾರೆ.

blank

ಸುದೀಪ್​ ಅವರ ಮುಂದೆ ಕೂಡ ವಿಷಯ ಪ್ರಸ್ತಾಪಿಸಿ, ಪ್ರತಿವಾರ ನಂಗೆ ಕ್ಲಾಸ್​ ತಗೊಂಡಿದ್ದಿರ. ಪ್ರತಿ ವಾರನೂ ನಾನು ಒಬ್ಬ ಹೆಣ್ಣು ನಿಂದಕ ಅಂತಾ ಮಾಡಿದ್ದಿರ. ಪ್ರತಿ ವಾರ ನಾನು ಸ್ತ್ರೀ ಪಿಡಕ ಅಂತಾ ತೋರ್ಸಿದ್ದಿರಿ. ನನಗೆ ಅಂತಾ ಒಂದು ಎಪಿಸೋಡ್​ ಮೀಸಲಿದೆ. ಇಲ್ಲಿ ಎಲ್ಲಾ ಕೂತಿರುವ ಹಿಮಾಲಯದ ಸಾಧು ಸಂತರ ನಡುವೆ ನಾನೋಬ್ಬ ಪರಮ ಪಾಪಿ. ನಿಮ್ಮ ಬಾಯಲ್ಲಿ ನಾನು ಯಾವಾಗಲೂ ಕ್ರಿಮಿನಲ್ ಆಗಿದ್ದೀನಿ.

ನೀವು ಮಾಡಿರುವ ಕೆಲಸಗಳೇ ನನ್ನ ಬಾಯಲ್ಲಿ ಬಂದಿದ್ದೇ ಹೊರತು. ನಾನ್ ಹುಟ್ಟಿಸಿಕೊಂಡು ಹೇಳ್ತಿಲ್ಲ. ಸ್ವಾಮಿ ನೀವು ಕೊಟ್ಟಿರುವ ಬೇಜಾರನ್ನ ಬೇಜಾರಲ್ಲಿ ಹೇಳದೇ ಅದಕ್ಕೇನು ತುಪ್ಪಾ ಹಚ್ಚಿ ಹೇಳಲಾ? ನಿಮ್ಮ ಬಗ್ಗೆ ಗೌರವ ಇದೆ ಅದನ್ನ ಕಾಪಾಡಿಕೊಳ್ಳಿ.. ನಿಮಗೆ ಇರುವ ತಿಳುವಳಿಕೆಯನ್ನ ನಾಲ್ಕು ಜನಕ್ಕೆ ಉಪಯೋಗವಾಗ್ಲಿ ಎಂದು ಕಿವಿ ಮಾತು ಹೇಳ್ತಾರೆ ಸುದೀಪ್​.

ಇಷ್ಟಕ್ಕೆ ಸುಮ್ಮನಾಗದ ಚಕ್ರವರ್ತಿ ಮತ್ತೆ ತಮ್ಮ ವಾದವನ್ನು ಮುಂದುವರೆಸಿ, ನಿಮ್ಮ ಬಗ್ಗೆ ಅಗೌರವವಾಗಿ ಮಾತ್ನಾಡಬೇಕು. ನಿಮ್ಮನ್ನ ಕೇಳಗೆ ಮಾಡಬೇಕು ಅಂತಾ ನಾನು ಆ ಮಾತುಗಳನ್ನ ಹೇಳಿಲ್ಲ. ಅಷ್ಟು ಡೀಪ್ ಮಿನಿಂಗ್​ ಇಟ್ಕೊಂಡು ನಾನ್​ ಮಾತ್ನಾಡಿಲ್ಲ. ನಾನು ಯಾರಿಗೂ ಹೆದ್ರಲ್ಲ. ಅದನ್ನ ನಾನು ಬೇಕು ಅಂತಾ ಹೇಳಿಲ್ಲ ಅಂತಾರೆ.

ಇದಕ್ಕೆ ಸುದೀಪ್​, ಎಲ್ಲವನ್ನು ಜನ ನೋಡಿರ್ತಾರೆ. ಅದನ್ನು ನಾನು ಸ್ಪೇಸಿಫಿಕ್​ ಆಗಿ ಹೇಳಬೇಕಿಲ್ಲ. ಆದರೆ ನಿಮ್ಮ ಜವಾಬ್ದಾರಿಗಳನ್ನು ನೆನಪಿಸಿ. ನಿಮ್ಮ ಅನಿಸಿಕೆಗಳನ್ನ ಜನಕ್ಕೆ ಮುಟ್ಟಿಸಬೇಕು ಅನ್ನೋದಕ್ಕೆ ನಾನು ಟಾಪಿಕ್​ ತೆಗೆತಿನಿ ಹೊರತು ನಿಮ್ಮನ್ನ ಕೆಟ್ಟವರನ್ನಾಗಿ ಮಾಡ್ಬೇಕು ಅನ್ನೋದು ನನ್ನ ಉದ್ದೇಶ ಅಲ್ಲ. ಇದ್ರಿಂದ ನಂಗೆನೂ ಲಾಭ ಇಲ್ಲ ಅಂತೇಳಿ ಮನವರಿಕೆ ಮಾಡಿಕೊಡ್ತಾರೆ.

The post ನಾನು ಹೆಣ್ಣು ಪೀಡಕನಾ? ಹೆಣ್ಣು ನಿಂದಕನಾ? -ಚಕ್ರವರ್ತಿ ಹೀಗ್ಯಾಕೆ ಅಂದ್ರು..? appeared first on News First Kannada.

Source: newsfirstlive.com

Source link