ಹಾಕಿ: ಒಲಂಪಿಕ್ಸ್ ಇತಿಹಾಸದಲ್ಲೇ ಹೀನಾಯ ಸೋಲುಂಡ ಭಾರತ -ಕ್ವಾರ್ಟರ್​ ಫೈನಲ್​ ಆಸೆ ಇನ್ನೂ ಜೀವಂತ!

ಹಾಕಿ: ಒಲಂಪಿಕ್ಸ್ ಇತಿಹಾಸದಲ್ಲೇ ಹೀನಾಯ ಸೋಲುಂಡ ಭಾರತ -ಕ್ವಾರ್ಟರ್​ ಫೈನಲ್​ ಆಸೆ ಇನ್ನೂ ಜೀವಂತ!

ಪುರುಷರ ಹಾಕಿ ವಿಭಾಗದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ 1-7 ಗೋಲುಗಳ ಅಂತರದಲ್ಲಿ ಸೋಲನುಭವಿಸುವ ಮೂಲಕ ಆಘಾತಕ್ಕೆ ಒಳಗಾಗಿದೆ. ಭಾನುವಾರ (ಜುಲೈ 25ರಂದು) ಎ ಗುಂಪಿನ 2ನೇ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಆಸಿಸ್​, ಸತತ 2ನೇ ಗೆಲುವು ದಾಖಲಿಸಿತು.

blank

ಪಂದ್ಯದ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾ, 10 ನಿಮಿಷದಲ್ಲೇ ಗೋಲು ದಾಖಲಿಸಿತು. ಮೊದಲ ಕ್ವಾಟರ್​​ನಲ್ಲಿ 1-0 ಮತ್ತು ಪಂದ್ಯದ ಮೊದಲಾರ್ಧದಲ್ಲಿ 4-0 ಗೋಲುಗಳ ಮುನ್ನಡೆ ಸಾಧಿಸಿದ್ದ ಕಾಂಗರೂ ಪಡೆಗೆ ಭಾರತ ತಿರುಗೇಟು ನೀಡುವಲ್ಲಿ ಎಡವಿತು. ಇನ್ನುಳಿದ ಅರ್ಧ ಅವಧಿಯಲ್ಲಿ ಎದುರಾಳಿ ತಂಡಕ್ಕೆ ಮೂರು ಗೋಲು ಬಿಟ್ಟುಕೊಟ್ಟ ಭಾರತ, 1 ಗೋಲನ್ನಷ್ಟೇ ಗಳಿಸುವಲ್ಲಿ ಶಕ್ತವಾಯ್ತು.

ಇತ್ತ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಗೋಲ್​ ಕೀಪರ್​ ಪಿ.ಆರ್​.ಶ್ರೇಜೇಶ್​​​​, ಈ ಹೇಳಿಕೊಳ್ಳುವ ಆಟವಾಡಲಿಲ್ಲ. ಆಸ್ಟ್ರೇಲಿಯಾ ಪರ ಬ್ಲೇಕ್ ಗವರ್ಸ್ ಎರಡು, ಡೇನಿಯಲ್ ಬೀಲ್, ಜೆರೆಮಿ ಹೇವರ್ಡ್, ಆಂಡ್ರ್ಯೂ ಫ್ಲಿನ್ ಒಗಿಲ್ವಿ, ಜೋಶುವಾ ಬೆಲ್ಟ್ಜ್ ಹಾಗೂ ಟಿಮ್ ಬ್ರಾಂಡ್ ತಲಾ ಒಂದು ಗೋಲು ಗಳಿಸಿದರು. ಭಾರತದ ಪರ ದಿಲ್ ಪ್ರೀತ್ ಸಿಂಗ್ 34ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.

blank

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತ 3-2 ಗೋಲುಗಳು ಅಂತರದ ಗೆಲುವು ಸಾಧಿಸಿತ್ತು. ಮನ್ ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡವು ಜುಲೈ 27ರಂದು ಸ್ಪೇನ್​ ವಿರುದ್ಧ ಭಾರತ ಸೆಣಸಾಡಲಿದೆ. ಸದ್ಯ ಎರಡು ಪಂದ್ಯಗಳಲ್ಲಿ ಒಂದು ಗೆಲುವು, ಒಂದು ಸೋಲು ದಾಖಲಿಸಿರುವ ಭಾರತಕ್ಕೆ, ಕ್ವಾರ್ಟರ್​ ಫೈನಲ್​ ಆಸೆ ಇನ್ನೂ ಜೀವಂತವಾಗಿದೆ.

ಪುರುಷರ ಹಾಕಿ ವಿಭಾಗದಲ್ಲಿ ಆರು ತಂಡಗಳಂತೆ ಎರಡು ಗುಂಪುಗಳನ್ನು ವಿಂಗಡಿಸಲಾಗಿದೆ. ಎರಡೂ ಗುಂಪಿನಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನ ಪಡೆದ ತಂಡಗಳು, ಕ್ವಾರ್ಟರ್​​ಗೆ ಪ್ರೇವೇಶಿಲಿವೆ. ‘ಎ’ ಗುಂಪಿನಲ್ಲಿ ಭಾರತ ಹೊರತಾಗಿ ಆಸ್ಟ್ರೇಲಿಯಾ, ಅರ್ಜೇಂಟೀನಾ, ಸ್ಪೇನ್, ನ್ಯೂಜಿಲೆಂಡ್ ಹಾಗೂ ಆತಿಥೇಯ ಜಪಾನ್ ತಂಡಗಳಿವೆ.

The post ಹಾಕಿ: ಒಲಂಪಿಕ್ಸ್ ಇತಿಹಾಸದಲ್ಲೇ ಹೀನಾಯ ಸೋಲುಂಡ ಭಾರತ -ಕ್ವಾರ್ಟರ್​ ಫೈನಲ್​ ಆಸೆ ಇನ್ನೂ ಜೀವಂತ! appeared first on News First Kannada.

Source: newsfirstlive.com

Source link