ಹಿಮಾಚಲ ಪ್ರದೇಶದಲ್ಲಿ ಭೀಕರ ಭೂಕುಸಿತ; 9 ಮಂದಿ ಪ್ರವಾಸಿಗರು ದುರ್ಮರಣ

ಹಿಮಾಚಲ ಪ್ರದೇಶದಲ್ಲಿ ಭೀಕರ ಭೂಕುಸಿತ; 9 ಮಂದಿ ಪ್ರವಾಸಿಗರು ದುರ್ಮರಣ

ನವದೆಹಲಿ: ಮುಂಗಾರು ಪ್ರವೇಶ ತುಸು ತಡವಾದರೂ ಅಬ್ಬರ ಮಾತ್ರ ಹಿಂದಿಗಿಂತಲೂ ಭಾರೀ ಜೋರಾಗಿದೆ. ಇದರ ಪರಿಣಾಮ ದೇಶದ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಅದರಲ್ಲೂ ಹಿಮಾಚಲ ಪ್ರದೇಶದಲ್ಲಂತೂ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದೆ.

ಇನ್ನು, ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತಕ್ಕೆ 9 ಜನ ಬಲಿಯಾಗಿದ್ದಾರೆ. ಹಿಮಾಚಲದ ಕಿನೌರ್ ಜಿಲ್ಲೆಯಲ್ಲಿ ಪ್ರವಾಸಿಗರು ಎರಡು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಪ್ರವಾಸಿಗರು ಕಾರುಗಳ ಮೇಲೆ ಬೆಟ್ಟದ ದೊಡ್ಡ ಕಲ್ಲುಗಳು ಕುಸಿದ ಪರಿಣಾಮ ಅವಾಂತರ ಸೃಷ್ಟಿಯಾಗಿದೆ. ಬೆಟ್ಟದಿಂದ ರಭಸವಾಗಿ ಬಂಡೆಗಳು ಉರುಳಿ ಬೀಳುತ್ತಿರುವ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದೆ.

ಇನ್ನು, 9 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಹಾಗೆಯೇ ತೀವ್ರವಾಗಿ ಗಾಯಗೊಂಡು ಇಬ್ಬರಿಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

The post ಹಿಮಾಚಲ ಪ್ರದೇಶದಲ್ಲಿ ಭೀಕರ ಭೂಕುಸಿತ; 9 ಮಂದಿ ಪ್ರವಾಸಿಗರು ದುರ್ಮರಣ appeared first on News First Kannada.

Source: newsfirstlive.com

Source link