ಮತ್ತೊಮ್ಮೆ ಮಾನವೀಯತೆ ಮೆರೆದ ಕಿಚ್ಚ ಸುದೀಪ್; ಪ್ರವಾಹ ಸಂತ್ರಸ್ತರಿಗೆ ನೆರವು

ಮತ್ತೊಮ್ಮೆ ಮಾನವೀಯತೆ ಮೆರೆದ ಕಿಚ್ಚ ಸುದೀಪ್; ಪ್ರವಾಹ ಸಂತ್ರಸ್ತರಿಗೆ ನೆರವು

ಅದೇ ಯಾರೇ ಅಪರಿಚಿತರು ಕಷ್ಟ ಎಂದು ಬರ್ಲಿ ಕೈಲಾದ ಸಹಾಯವನ್ನ ಮಾಡೋರು ಕಿಚ್ಚ ಸುದೀಪ್.. ಕೆಲವು ವರ್ಷಗಳಿಂದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ವತಿಯಿಂದ ಅನುಪಮ ಸೇವಾ ಕಾರ್ಯಗಳನ್ನ ಮಾಡ್ತಿದ್ದಾರೆ.. ಈಗ ವರುಣ ದೇವನ ರೌದ್ರ ನರ್ತನಕ್ಕೆ ಒಳಗಾಗಿರೋ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೇರವಾಗಲು ಮುಂದಾಗಿದ್ದಾರೆ..

blank

ಬಹುಭಾಷ ನಟ ಕಿಚ್ಚ ಸುದೀಪ್.. ತನ್ನ ವಿಶಿಷ್ಠ ಅದ್ಭುತ ನಟನೆಯಿಂದ ಚಿತ್ರಪ್ರೇಮಿಗಳ ಮನಸು ಕನಸು ಕದ್ದಿರೋ ಮಾಣಿಕ್ಯ.. ನಟನೆ, ನಿರೂಪಣೆ, ನಿರ್ದೇಶನ, ನಿರ್ಮಾಣ, ಗಾಯನ, ಆಟ, ಪಾಠ ಎಲ್ಲದ್ರಲೂ ಕಿಚ್ಚ ರನ್ನ ಚಿನ್ನ.. ಈ ಎಲ್ಲದಕ್ಕಿಂತ ಒಂದು ಕೈ ಜಾಸ್ತಿ ಕಿಚ್ಚ ಸುದೀಪ್​​​ ಉಪಕಾರದ ಗುಣ..

ಮುಂಬರುವ ಸುದೀಪ್ ಅವರ ಬರ್ತ್​​​ಡೇ ಸಲುವಾಗಿ ಈಗಾಲೇ ಅದ್ಭುತ ಕಾರ್ಯಗಳಿಗೆ ನೀಲಿ ನಕ್ಷೆ ಹಾಕಿ ಕಾರ್ಯ ಸನ್ನದರಾಗಿದ್ದಾರೆ.. ಕೆಲವು ವರ್ಷಗಳಿಂದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ವತಿಯಿಂದ ಅನುಪಮ ಸೇವಾ ಕಾರ್ಯಗಳನ್ನ ಮಾಡುತ್ತಿರೋ ಬಾದ್​​​ ಷಾ ಸುದೀಪ್ ಈ ಬಾರಿ ತಮ್ಮ ಬರ್ತ್​ಡೇಗೆ ಹಲವಾರು ಚಿನ್ನದಂತ ಕೆಲಸಗಳನ್ನ ಮಾಡೋ ಯೋಜನೆ ಹಾಕಿಕೊಂಡಿದ್ದಾರೆ. ಅದ್ಭುತ ಟೀಮ್ ಒಂದನ್ನ ಕಟ್ಟಿರೋರೋ ಸುದೀಪ್ ತಮ್ಮ ಬಳಗದಿಂದ ಈ ಬಾರಿಯ ಸೆಪ್ಟೆಂಬರ್ 2ನೇ ತಾರೀಖ್​​ನ ತಮ್ಮ ಜನ್ಮ ದಿನದ ಸಲುವಾಗಿ ಮಹತ್ತರ ಕೆಲಸವೊಂದಕ್ಕೆ ಮುಂದಾಗಿದ್ದಾರೆ..

blank

ಹತ್ತಾರು ಜನಕ್ಕೆ ಒಳ್ಳೆದಾಗುವ ಹಾಗೆ ಮೊದಲು ಮಾನವನಾಗು ಅನ್ನೋ ಮಾತಿನ ಹಾಗೇ ಸುದೀಪ್ ಬಳಗ 12 ಅದ್ಭುತ ಕಾರ್ಯಗಳನ್ನ ಮಾಡಲು ಹೊರಟ್ಟಿದೆ. ಆ ಕೆಲಸಗಳ ಬಗ್ಗೆ ಈ ಹಿಂದೆ ನಾವು ನಿಮಗೆ ವಿಸ್ತ್ರುತವಾಗಿ ಹೇಳಿದ್ವಿ. ಈಗ ಆ ಕೆಲಸಗಳು ಪ್ರಗತಿಯಲ್ಲಿವೆ. ಆದ್ರೆ ಆ 12 ಮಹತ್ಕಾರ್ಯಗಳು ಕಾರ್ಯರೂಪದಲ್ಲಿ ಇರುವಾಗಲೇ ತುರ್ತಾಗಿ ನೆರೆ ಸಂತ್ರಸ್ಥರಿಗೆ ನೆರವಾಗಲು ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಮುಂದಾಗಿದೆ..

ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಪ್ರವಾಹ ಉಂಟಾಗಿರೋ ಕಾರಣ ಆಯ ಭಾಗಗಳಲ್ಲಿ ಸುದೀಪ್ ಬಳಗ ಹೋಗಿ ನೆರೆಯಲ್ಲಿ ಸಿಲುಕಿರೋ ಜನಕ್ಕೆ ಸಹಾಯ ಮಾಡಲು ಮುಂದಾಗಿದೆ.  ಬೆಳಗಾವಿಯಲ್ಲಿ ಈ ಗುರುವಾರದಿಂದ ಕಿಚ್ಚನ ಆಸರೆ ಕೇಂದ್ರ ಎಂಬ ಹೆಸರಿನಲ್ಲಿ ಕೆಲಸ ಶುರು ಮಾಡುತ್ತಿದೆ ಸುದೀಪ್ ಸ್ನೇಹ ಬಳಗ. ನೆರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಿಚ್ಚನ ಆಸರೆ ಕೇಂದ್ರ ಕೇಂದ್ರ ತೆರೆದು ದಿನಕ್ಕೆ ಎರಡು ಬಾರಿ ಊಟ ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ಯೋಜನೆ ರೂಪಿಸಲಾಗಿದೆ..

blank

ಒಟ್ಟಿನಲ್ಲಿ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಶ್ಲಾಘನಿಯ ಕೆಲಸಕ್ಕೆ ಮುಂದಾಗಿದೆ.

The post ಮತ್ತೊಮ್ಮೆ ಮಾನವೀಯತೆ ಮೆರೆದ ಕಿಚ್ಚ ಸುದೀಪ್; ಪ್ರವಾಹ ಸಂತ್ರಸ್ತರಿಗೆ ನೆರವು appeared first on News First Kannada.

Source: newsfirstlive.com

Source link