Good News​​: ಸೆ.19ರಿಂದ ಆರಂಭವಾಗುತ್ತೆ ರದ್ದಾಗಿದ್ದ ಐಪಿಎಲ್​ ತೇರು!

Good News​​: ಸೆ.19ರಿಂದ ಆರಂಭವಾಗುತ್ತೆ ರದ್ದಾಗಿದ್ದ ಐಪಿಎಲ್​ ತೇರು!

ಕ್ರಿಕೆಟ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕೊರೊನಾದಿಂದ ರದ್ದಾದ ಐಪಿಎಲ್​ ಅನ್ನು ಮರು ಆಯೋಜನೆಗೆ ದಿನಾಂಕವನ್ನ ಬಿಸಿಸಿಐ ಪ್ರಕಟಿಸಿದ್ದು, ವೇಳಾಪಟ್ಟಿ ಸಂಪೂರ್ಣ ಬದಲಾವಣೆ ಮಾಡಿದೆ. ಯುಎಇನಲ್ಲಿ 2ನೇ ಹಂತದ ಐಪಿಎಲ್​​ ತೇರನ್ನು ಎಳೆಯೋಕೆ ಮುಂಬೈ ಇಂಡಿಯನ್ಸ್​ – ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಹಣಾಹಣಿ ನಡೆಯಲಿದೆ.

ಸೆಪ್ಟೆಂಬರ್​​ 19ರಿಂದ ಕಲರ್​​​ ಫುಲ್​ ಲೀಗ್​ ಆರಂಭವಾಗಲಿದ್ದು, ಅಕ್ಟೋಬರ್ 15ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಬಿಸಿಸಿಐ ಹೇಳಿದೆ. ಅಕ್ಟೋಬರ್ 8ಕ್ಕೆ ಲೀಗ್​ ಪಂದ್ಯಗಳು ಕೊನೆಗೊಳ್ಳಲಿದ್ದು, ಅಕ್ಟೋಬರ್ 10ರಂದು ಮೊದಲ ಕ್ವಾಲಿಫೈಯರ್​ ಪಂದ್ಯ ನಡೆಯಲಿದೆ. ಇನ್ನು ಎಲಿಮಿನೇಟರ್ ಪಂದ್ಯ 11ರಂದು ಮತ್ತು 13ರಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಫೈನಲ್​ ಪಂದ್ಯ 15ರಂದು ನಡೆಯಲಿದೆ.

ಆಟಗಾರರಿಗೆ ಕೊರೊನಾ ತಗುಲಿದ್ದ ಕಾರಣ ಮೇ 3ರಂದು ಆರ್​ಸಿಬಿ – ಕೆಕೆಆರ್​ ಪಂದ್ಯವನ್ನ ರದ್ದುಪಡಿಸಲಾಗಿತ್ತು. ಬಳಿಕ SRH ತಂಡದ ಆಟಗಾರರಿಗೂ ಸೋಂಕು ದೃಢವಾಗಿದ್ದ ಕಾರಣ ಟೂರ್ನಿ ರದ್ದುಪಡಿಸಿತ್ತು. ಭಾರತದಲ್ಲಿ ಕೊರೊನಾ ತೀವ್ರಗೊಂಡ ಪರಿಣಾಮ, ಇಡೀ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಿತು. ಆದರೆ ಅಕ್ಟೋಬರ್ 18ರಿಂದ ಟಿ20 ವಿಶ್ವಕಪ್​ ಆರಂಭವಾಗುವ ಕಾರಣ, ಅಕ್ಟೋಬರ್​ 10ಕ್ಕೆ ಐಪಿಎಲ್​ ಅನ್ನು ಮುಗಿಸಿಕೊಳ್ಳುವಂತೆ ಐಸಿಸಿ, ಬಿಸಿಸಿಐ ಸೂಚಿಸಿತ್ತು. ಇದೀಗ ಟೂರ್ನಿ 15ರವರೆಗೂ ನಡೆಯಲಿದ್ದು, ಐಸಿಸಿ ಯಾವ ನಿರ್ಧಾರಕ್ಕೆ ಬರುತ್ತೆ ಅನ್ನೋದು ಗೊಂದಲ ಉಂಟಾಗಿದೆ.

The post Good News​​: ಸೆ.19ರಿಂದ ಆರಂಭವಾಗುತ್ತೆ ರದ್ದಾಗಿದ್ದ ಐಪಿಎಲ್​ ತೇರು! appeared first on News First Kannada.

Source: newsfirstlive.com

Source link