ಜಮ್ಮು-ಕಾಶ್ಮೀರದಲ್ಲಿ ಮೂವರು ಲಷ್ಕರ್​​​ ಉಗ್ರರ ಎನ್​ಕೌಂಟರ್

ಜಮ್ಮು-ಕಾಶ್ಮೀರದಲ್ಲಿ ಮೂವರು ಲಷ್ಕರ್​​​ ಉಗ್ರರ ಎನ್​ಕೌಂಟರ್

ಬಂಡಿಪೋರಾ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್‌-ಇ-ತಯಬಾ(ಎಲ್​​ಇಟಿ) ಸಂಘಟನೆಯ ಮೂವರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಕಾಶ್ಮೀರದ ಐಜಿಪಿ ವಿಜಯ್‌ ಕುಮಾರ್‌ ಅವರು, ಬಂಡಿಪೋರಾದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಸೇನೆ ನಡೆಸಿದ ಎನ್​​ಕೌಂಟರ್​​​ನಲ್ಲಿ ಎಲ್‌ಇಟಿ ಉಗ್ರ ಶಕೀರ್‌ ಸೇರಿದಂತೆ ಒಟ್ಟು ಮೂವರು ಹತ್ಯೆಯಾಗಿದ್ದಾರೆ ಎಂದಿದ್ದಾರೆ.

2018ರಲ್ಲಿ ಶಕೀರ್​​ ಅಮೃತಸರದಲ್ಲಿನ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದ. ಶಕೀರ್​ ಸೇರಿದಂತೆ ಮೂವರು ಉಗ್ರರು ಬಂಡಿಪೋರಾದ ಶೋಕಬಾಬ ಅರಣ್ಯದಲ್ಲಿ ಇರುವ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ಶುರು ಮಾಡಿದೆವು. ಈ ವೇಳೆ ನಮ್ಮ ಸೇನೆ ಗುಂಡೇಟಿಗೆ ಮೂವರು ಉಗ್ರರು ಬಲಿಯಾದರು ಎಂದು ತಿಳಿಸಿದರು.

ಇದನ್ನೂ ಓದಿ: 79 ನೇ ಆವೃತ್ತಿಯ ಮನ್​ಕಿ ಬಾತ್; ಒಲಿಂಪಿಕ್ಸ್​ನಲ್ಲಿ ಭಾರತದ ಜಯ ಸ್ಮರಿಸಿದ ಪ್ರಧಾನಿ

ಇನ್ನು, ಉಗ್ರರ ದಾಳಿಯಲ್ಲಿ ಒಬ್ಬ ಯೋಧ ಗಾಯಗೊಂಡಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಪ್ರದೇಶದಲ್ಲಿ ಇನ್ನೂ ಮೂವರು ಉಗ್ರರು ಇರುವ ಶಂಕೆ ಇದೆʼ ಎಂದು ಹೇಳಿದರು.

The post ಜಮ್ಮು-ಕಾಶ್ಮೀರದಲ್ಲಿ ಮೂವರು ಲಷ್ಕರ್​​​ ಉಗ್ರರ ಎನ್​ಕೌಂಟರ್ appeared first on News First Kannada.

Source: newsfirstlive.com

Source link