ಮೊದಲ ಟಿ20 ಪಂದ್ಯ: ಟಾಸ್​ ಸೋತ ಭಾರತ, ಪೃಥ್ವಿ-ವರುಣ್​ ಪದಾರ್ಪಣೆ

ಮೊದಲ ಟಿ20 ಪಂದ್ಯ: ಟಾಸ್​ ಸೋತ ಭಾರತ, ಪೃಥ್ವಿ-ವರುಣ್​ ಪದಾರ್ಪಣೆ

ಟೀಮ್​ ಇಂಡಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್​​ ಗೆದ್ದ ಶ್ರೀಲಂಕಾ ಫೀಲ್ಡಿಂಗ್​​ ಆಯ್ದುಕೊಂಡಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ಗೆ ಟೀಮ್ ಇಂಡಿಯಾ ಪರ ಪೃಥ್ವಿ ಶಾ ಮತ್ತು ವರುಣ್​ ಚಕ್ರವರ್ತಿ ಪದಾರ್ಪಣೆ ಮಾಡಿದ್ದು, ಕನ್ನಡಿಗ ದೇವದತ್​ ಪಡಿಕ್ಕಲ್​ ಮತ್ತು ಋತುರಾಜ್​ ಗಾಯಕ್ವಾಡ್​ಗೆ ಮತ್ತೆ ನಿರಾಸೆಯಾಗಿದೆ.

ಈಗಾಗಲೇ ಏಕದಿನ ಸರಣಿಯನ್ನ 2-1 ಅಂತರದಲ್ಲಿ ಗೆದ್ದಿರುವ ಟೀಮ್​ ಇಂಡಿಯಾ, ಚುಟುಕು ಸರಣಿಯ ಮೇಲೂ ಕಣ್ಣಿಟ್ಟಿದೆ. ಇನ್ನು ಸರಣಿ ಸೋತಿರುವ ಲಂಕಾ, ಈ ಸರಣಿಯನ್ನಾದರೂ ಗೆದ್ದು ಮರ್ಯಾದೆ ಉಳಿಸಿಕೊಳ್ಳಲು ನಿರ್ಧರಿಸಿದೆ.

ಭಾರತ ತಂಡ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್​ ಕಿಶಾನ್​, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್​ (ಕೀಪರ್​​), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ವರುಣ್​ ಚಕ್ರವರ್ತಿ, ಯುಜುವೇಂದ್ರ ಚಹಲ್​.

ಶ್ರೀಲಂಕಾ: ಅವಿಷ್ಕಾ ಫರ್ನಾಂಡೊ, ಮಿನೋಸ್​ ಭಾನುಕ (ಕೀಪರ್​), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ (ಕ್ಯಾಪ್ಟನ್​), ಆಶೆನ್ ಬಂಡರಾ, ವನಿಂದು ಹಸರಂಗ, ಚಮಿಕಾ ಕರುಣರತ್ನ, ಇಸುರು ಉಡಾನ, ಅಕಿಲಾ ಧನಂಜಯ.

The post ಮೊದಲ ಟಿ20 ಪಂದ್ಯ: ಟಾಸ್​ ಸೋತ ಭಾರತ, ಪೃಥ್ವಿ-ವರುಣ್​ ಪದಾರ್ಪಣೆ appeared first on News First Kannada.

Source: newsfirstlive.com

Source link