ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾದಲ್ಲಿ ಪ್ರಭಾಸ್ ಜೊತೆ ಅಮಿತಾಬ್ ಬಚ್ಚನ್

ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾದಲ್ಲಿ ಪ್ರಭಾಸ್ ಜೊತೆ ಅಮಿತಾಬ್ ಬಚ್ಚನ್

ಬಾಹುಬಲಿ ಚಿತ್ರದ ನಂತರ ಡಾರ್ಲಿಂಗ್ ಪ್ರಭಾಸ್ ಪ್ಯಾನ್​ ಇಂಡಿಯಾ ಸ್ಟಾರ್ ಆದ್ರು, ಸಾಲು ಸಾಲು ಸಿನಿಮಾಗಳಲ್ಲೂ ಬ್ಯುಸಿಯಾದ್ರು.. ಈಗಾಗಲೇ ಅನೇಕ ಬಿಗ್ ಬಜೇಟ್ ಸಿನಿಮಾಗಳಲ್ಲಿ ಬ್ಯುಸಿ ಇರೋ ಪ್ರಭಾಸ್ ಹೊಸದೊಂದು ಸಿನಿಮಾ ಸೆಟ್​​​ನಲ್ಲಿ ನಿಂತಿದ್ದಾರೆ.. ಬಾಹುಬಲಿಗೆ ಬಾಲಿವುಡ್ ಬಿಗ್​ ಸಾಥ್ ನೀಡುತ್ತಿದ್ದಾರೆ, ದೀಪಿಕಾ ಪಡುಕೋಣೆ ಕೂಡ ಮೇರ ಥೇರ ಸಾಥ್ ರೇಹತಾವೂ ಎಂದಿದ್ದಾರೆ..

blank

ಟಾಲಿವುಡ್​​ನ ಡಾರ್ಲಿಂಗ್ ಪ್ರಭಾಸ್ ಬಿಗ್ ಬಜೆಟ್ ಮೂವಿಗಳಲ್ಲಿ ಬಣ್ಣಹಚ್ಚುತ್ತಿದ್ದಾರೆ.. ಸಲಾರ್, ರಾಧೆ ಶ್ಯಾಮ್, ಹಾಗೂ ಆಧಿಪುರುಷ್.. ಈ ಮೂರು ಸಿನಿಮಾಗಳ ಒಟ್ಟು ಬಜೆಟ್​ ಬರೋಬ್ಬರಿ ಸಾವಿರ ಕೋಟಿ.. ಈಗ ಮತ್ತೊಂದು ಸಿನಿಮಾದಲ್ಲಿ ಪ್ರಭಾಸ್ ತಮ್ಮನ ತಾವು ತೊಡಗಿಸಿಕೊಂಡಿದ್ದಾರೆ.. ಆ ಹೊಸ ಸಿನಿಮಾಕ್ಕೆ ಬಾಲಿವುಡ್​​ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅಭಿನಯ ಹಾಗೂ ಆಶೀರ್ವಾದ ಎರಡು ಸಿಕ್ಕಿದೆ..

blank

ಪ್ರಭಾಸ್ ನಟನೆಯ ‘ಪ್ರಾಜೆಕ್ಟ್​ ಕೆ’ ಹೆಸರಿನ ಸಿನಿಮಾದ ಒಂದು ಪ್ರಮುಖ ಪಾತ್ರ ನಿರ್ವಹಿಸಲು ಬಾಲಿವುಡ್​​ನ ಬಿಗ್​ ಬಿ ಅಮಿತಾಬ್​ ಬಚ್ಚನ್​ ಇಂದು ಟಾಲಿವುಡ್​ಗೆ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಹೈದರಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಅಮಿತಾಬ್​ ಬಚ್ಚನ್​ರ ಮೊದಲ ದೃಶ್ಯಕ್ಕೆ ಡಾರ್ಲಿಂಗ್​ ಪ್ರಭಾಸ್​ ಕ್ಲಾಪ್​ ಮಾಡಿರೋ ವಿಶೇಷ.. ಈ ಮೊದಲು ಟಾಲಿವುಡ್​​​ನಲ್ಲಿ ಅಮಿತಾಭ್, ಚಿರಂಜೀವಿ ಜೊತೆ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿದ್ದರು..

blank

‘ಮಹಾನಟಿ’ ಸಿನಿಮಾವನ್ನು ನಿರ್ದೇಶನ ಮಾಡಿ ಗೆದ್ದಿದ್ದ ನಾಗ್​ ಅಶ್ವಿನ್​ ‘ಪ್ರಾಜೆಕ್ಟ್​ ಕೆ’ ಸಿನಿಮಾಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.. 25ಕ್ಕೂ ಹೆಚ್ಚು ಅದ್ಧೂರಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವೈ ಜಯಂತಿ ಫಿಲ್ಮ್​ ಈ ಚಿತ್ರವನ್ನ ನಿರ್ಮಾಣ ಮಾಡ್ತಿದೆ.. ಪ್ರಭಾಸ್​ಗೆ ನಾಯಕಿಯಾಗಿ ಬಾಲಿವುಡ್​ನ ಬಳುಕೋ ಬಳ್ಳಿ, ಕರ್ನಾಟಕದ ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಮಿಂಚಲಿದ್ದಾರೆ.

blank

ಮೂಲಗಳ ಪ್ರಕಾರ ‘ಪ್ರಾಜೆಕ್ಟ್​ ಕೆ’ ಸಿನಿಮಾ ಮೊದಲ ಮಹಾಯುದ್ಧ ಮತ್ತು 2ನೇ ಮಹಾಯುದ್ಧಕ್ಕೆ ಸಂಬಂಧಿಸಿದ್ದಾಗಿದೆ.. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ಪ್ರಭಾಸ್​​​ ಬತ್ತಳಿಕೆಯಲ್ಲಿ ಈಗ ಹೊಸದೊಂದು ಸಿನಿ ಬಂದಿದೆ.. ಪ್ರಭಾಸ್ ಜೊತೆಗೆ ಅಮಿತಾಭ್ , ದೀಪಿಕಾ ಬಂದು ನಿಂತಿರೋ ಕಾರಣ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳು ಶುರುವಾಗುತ್ತಿವೆ.

blank

The post ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾದಲ್ಲಿ ಪ್ರಭಾಸ್ ಜೊತೆ ಅಮಿತಾಬ್ ಬಚ್ಚನ್ appeared first on News First Kannada.

Source: newsfirstlive.com

Source link