ಬೆಂಗಳೂರಿನಲ್ಲಿ ಧಾರಕಾರ ಮಳೆ- ವಾಹನ ಸವಾರರು ಹೈರಾಣು

ಬೆಂಗಳೂರಿನಲ್ಲಿ ಧಾರಕಾರ ಮಳೆ- ವಾಹನ ಸವಾರರು ಹೈರಾಣು

ಬೆಂಗಳೂರು: ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ಜೋರು ಮಳೆಯಾಗುತ್ತಿದೆ. ಇಂದು ಸಂಜೆ 7 ಗಂಟೆಯಿಂದ ಗುಡುಗು ಸಹಿತ ಧಾರಕಾರ ಮಳೆಯಾಗುತ್ತಿದೆ. ನಗರದ ಕಾರ್ಪೊರೇಷನ್ ಸರ್ಕಲ್​​, ಕೆ.ಆರ್​​ ಮಾರುಕಟ್ಟೆ, ಮೆಜೆಸ್ಟಿಕ್​​, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ, ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್‌, ರಾಜಾಜಿನಗರ, ಶ್ರೀರಾಂಪುರ, ಶೇಷಾದ್ರಿಪುರ, ಆನಂದ್​​ ರಾವ್​ ಸರ್ಕಲ್​​, ಅರಮನೆ ರಸ್ತೆ, ಎಂಜಿ ರಸ್ತೆ, ಯಶವಂತಪುರ, ಮಲ್ಲೇಶ್ವರ ಸೇರಿ ಹಲವೆಡೆ ಮಳೆಯಾಗಿದೆ.

ಇನ್ನು, ಭಾರೀ ಮಳೆಯಿದಾಗಿ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ನಗರದ ಹಲವು ಅಂಡರ್ ಪಾಸ್​ನಲ್ಲಿ ನೀರು ನಿಂತು ಸಂಪೂರ್ಣ ಜಲಾವೃತವಾಗಿದೆ. ಇದರ ಪರಿಣಾಮ ಕೆಲ ಕಾಲ ವಾಹನ ಸಂಚಾರವನ್ನು ಸಹ ಬಂದ್ ಮಾಡಲಾಗಿದೆ.

The post ಬೆಂಗಳೂರಿನಲ್ಲಿ ಧಾರಕಾರ ಮಳೆ- ವಾಹನ ಸವಾರರು ಹೈರಾಣು appeared first on News First Kannada.

Source: newsfirstlive.com

Source link