ವಿಶ್ವಕಪ್ ಟಿ20 ​​ತಂಡಕ್ಕೆ ಕನ್ನಡಿಗ ಮನೀಶ್​ ಪಾಂಡೆ ಡೌಟ್

ವಿಶ್ವಕಪ್ ಟಿ20 ​​ತಂಡಕ್ಕೆ ಕನ್ನಡಿಗ ಮನೀಶ್​ ಪಾಂಡೆ ಡೌಟ್

ಟೀಮ್​ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಮನೀಶ್​ ಪಾಂಡೆ ಕ್ರಿಕೆಟ್​ ಕರಿಯರ್,​​ ಸದ್ಯ ಅತಂತ್ರಕ್ಕೆ ಸಿಲುಕಿದೆ. ಅದರಲ್ಲೂ ವೈಟ್​ಬಾಲ್​ ಕ್ರಿಕೆಟ್​​​ನಲ್ಲಿ ಕನ್ನಡಿಗನ ಚಾಪ್ಟರ್​ ಕ್ಲೋಸ್​ ಅಂತಾನೇ ಹೇಳಲಾಗ್ತಿದೆ. ಇದಕ್ಕೆ ಕಾರಣ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ತೋರಿದ ಕಳಪೆ ಪ್ರದರ್ಶನ.

ಕೇವಲ ಲಂಕಾ ಸರಣಿಯಷ್ಟೇ ಅಲ್ಲ.. ಕಳೆದೆರಡು ವರ್ಷಗಳಿಂದ ಟಿ20, ಏಕದಿನ ತಂಡದ ಅವಿಭಾಜ್ಯ ಅಂಗವಾಗಿದ್ದ ಮನೀಶ್​ರದ್ದು, ಇದೇ ಕಳಪೆ ಪ್ರದರ್ಶನ. ಪ್ರಮುಖ ಬ್ಯಾಟ್ಸ್​ಮನ್ ಆಗಿ ಗುರುತಿಸಿಕೊಂಡಿದ್ದ ಪಾಂಡೆಗೆ, ಚಾನ್ಸ್​ ಮೇಲೆ ಚಾನ್ಸ್​ ಸಿಕ್ಕರೂ ಮತ್ತದೇ ವೈಫಲ್ಯ ತೋರಿದ್ದಾರೆ. ಇದೀಗ ಮನೀಶ್​​ರ ಕ್ರಿಕೆಟ್​ ದಾರಿ, ಡೆಡ್​ ಎಂಡ್​​ಗೆ ಬಂದು ಬಿಟ್ಟಿದೆ ಎನ್ನಲಾಗ್ತಿದೆ.

2015 ರಿಂದ 29 ಏಕದಿನ ಪಂದ್ಯಗಳನ್ನಾಡಿರುವ ಮನೀಶ್,​​ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಎಡವುತ್ತಿದ್ದಾರೆ. ಸದ್ಯ ತಂಡದಲ್ಲಿ ಏರ್ಪಟ್ಟಿರೋ ಕಾಂಪಿಟೇಷನ್​​ನಲ್ಲೂ, ಕನ್ನಡಿಗನ ಫ್ಲಾಪ್​ ಶೋ, ಮತ್ತೊಬ್ಬ ಆಟಗಾರನಿಗೆ ಲಾಭವಾಗ್ತಿದೆ. ಇನ್ನು ತಂಡದಲ್ಲಿ ಶ್ರೇಯಸ್​​ ಅಯ್ಯರ್​​​ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಇದರ ಜೊತೆಗೆ ಸೂರ್ಯಕುಮಾರ್​ ಯಾದವ್​ ಅದ್ಭುತ ಪ್ರದರ್ಶನ ತೋರಿದ್ದು, ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ, ಕನ್ನಡಿಗ ಮನೀಶ್​.

T20 ವಿಶ್ವಕಪ್ ​​ತಂಡಕ್ಕೆ ಕನ್ನಡಿಗ ಮನೀಶ್​ ಡೌಟ್..?
ಟಿ20 ವಿಶ್ವಕಪ್​​ ಆಯ್ಕೆಗೆ ಶ್ರೀಲಂಕಾ ಸರಣಿಯೇ ಪ್ರಮುಖವಾದದ್ದು. ಬಳಿಕ 2ನೇ ಹಂತದ IPL​ ಕೂಡ ಅಷ್ಟೇ ಇಂಪಾರ್ಟ್​ಟೆಂಟ್​. ಆದರೆ ಲಂಕಾ ಎದುರು ಮಂಕಾದ ಪಾಂಡೆಗೆ ಅಯ್ಯರ್, ಸೂರ್ಯ ಜೊತೆಗೆ ಸಂಜು ಸ್ಯಾಮ್ಸನ್,​ ಇಶಾನ್​ ಕಿಶನ್​ ಕೂಡ ಪೈಪೋಟಿಯಲ್ಲಿದ್ದಾರೆ. ಹಾಗಾಗಿ ಸಿಕ್ಕ ಅವಕಾಶವನ್ನ ಕೈಚೆಲ್ತಿದ್ದು ಟಿ20 ವಿಶ್ವಕಪ್​ ರೇಸ್​ಗಿರಲಿ, ಮತ್ತೆ ತಂಡದಲ್ಲಿ ಸ್ಥಾನ ಪಡೆಯೋದು ಕೂಡ ಅನುಮಾನವೇ.

ಲಂಕಾ ಸರಣಿ ಎದುರು ಮನೀಶ್​ ಪ್ರದರ್ಶನ

  • ಪಂದ್ಯ 03
  • ರನ್​ 74
  • ಸರಾಸರಿ 24.67
  • S/R 82.22

ಏಕದಿನದಲ್ಲಿ ಮನೀಶ್​ ಪ್ರದರ್ಶನ

  • ಪಂದ್ಯ 29
  • ರನ್​ 566
  • 50/100 02/01
  • ಸರಾಸರಿ 33.29

ಇದನ್ನೂ ಓದಿ: ಕನ್ನಡಿಗ ಮನೀಶ್ ಪಾಂಡೆಗೆ ಸ್ಥಾನಕ್ಕೆ ಕುತ್ತು.. T20 ವಿಶ್ವಕಪ್​ಗೂ​ ಡೌಟ್

ಇದನ್ನೂ ಓದಿ: ಮೊದಲ ಟಿ20 ಪಂದ್ಯ: ಪೃಥ್ವಿ-ವರುಣ್​ ಪದಾರ್ಪಣೆ; ಕನ್ನಡಿಗನಿಗೆ ಮತ್ತೆ ನಿರಾಸೆ

The post ವಿಶ್ವಕಪ್ ಟಿ20 ​​ತಂಡಕ್ಕೆ ಕನ್ನಡಿಗ ಮನೀಶ್​ ಪಾಂಡೆ ಡೌಟ್ appeared first on News First Kannada.

Source: newsfirstlive.com

Source link