ಗೃಹ ರಕ್ಷಕ ದಳದಿಂದ ಮಹತ್ವದ ಹೆಜ್ಜೆ; ಒಂದು ಲಕ್ಷ ಗಿಡ ನೆಡುವ ಗುರಿ

ಗೃಹ ರಕ್ಷಕ ದಳದಿಂದ ಮಹತ್ವದ ಹೆಜ್ಜೆ; ಒಂದು ಲಕ್ಷ ಗಿಡ ನೆಡುವ ಗುರಿ

ಬೆಂಗಳೂರು: ಕರ್ನಾಟಕ ರಾಜ್ಯ ಗೃಹ ರಕ್ಷಕದಳದ ವತಿಯಿಂದ ಇಂದು ವನಮಹೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು.

ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಬಿ ಇ ಎಲ್ ಆವಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಿ ಇ ಎಲ್ ನ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕಿ ಹೇಮಾ ಆರ್ ರಾವ್ ಮತ್ತು ಬೆಂಗಳೂರು ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಗೋಪಾಲಕೃಷ್ಣ ಬಿ ಗೌಡರ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

blank

ಬಳಿಕ ಬೆಂಗಳೂರು ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಗೋಪಾಲಕೃಷ್ಣ ಬಿ ಗೌಡರ್ ಮಾತನಾಡಿ, ವನಮಹೋತ್ಸವ ಹಿನ್ನೆಲೆ ಬಿ ಇಎಲ್ ಆವರಣದಲ್ಲಿ ಇಂದು 400 ಗಿಡಗಳನ್ನ ನೆಡಲಾಗಿದೆ. ಬಿಇಎಲ್ ಅಂದರೆ ಈ ದೇಶದ ಹೆಮ್ಮೆ. ಬಿಇಎಲ್ ಟೌನ್ ಶಿಪ್ ನಲ್ಲಿನ ಹಸಿರು ನೋಡಿದರೆ ಮನೋಲ್ಲಾಸ ವಾಗುತ್ತದೆ. ಇಲ್ಲಿ ವರ್ಷವಿಡೀ ಸಸಿ ನೆಡುವ ಕೆಲಸ ನಡೆಯುತ್ತಿರುತ್ತವೆ. ಇಂತಹ ಒಂದು ಮಹಾ ಸಂಸ್ಥೆ ನಮ್ಮ ಗೃಹರಕ್ಷಕ ದಳದೊಂದಿಗೆ ಕಳೆದ 30 ವರ್ಷಗಳಿಂದಲೂ ಸಹಯೋಗ ಮತ್ತು ಸಹಕಾರವನ್ನು ನೀಡುತ್ತಾ ಬರುತ್ತಿರುವ ಬಿಇಎಲ್ ಆಡಳಿತ ವರ್ಗಕ್ಕೆ ಧನ್ಯವಾದವನ್ನು ತಿಳಿಸಿದರು.

blank

ಜೊತೆಗೆ ಗೃಹ ರಕ್ಷಕ ದಳದಿಂದ ಪ್ರತಿ ಗೃಹಕ್ಷಕರು 4 ರಿಂದ 5 ಗಿಡಗಳನ್ನ ರಸ್ತೆ ಬದಿ, ಸರ್ಕಾರಿ ಕಛೇರಿಗಳು ಆಸ್ಪತ್ರೆಗಳ ಶಾಲೆಗಳಲ್ಲಿ ನೆಡುವಂತೆ ಕರೆ ನೀಡಲಾಗಿದೆ. ಒಂದು ಲಕ್ಷ ಗಿಡ ನೆಡುವ ಗುರಿ ಹೊಂದಿದ್ದೇವೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಶ್ರೀಘ್ರದಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದರು. ಶ್ರೀಮತಿ ಹೇಮ ರಾಘವೇಂದ್ರ ರಾವ್ ರವರು ಮಾತನಾಡಿ, ಗೃಹರಕ್ಷಕ ದಳದ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿದರು. ಗೃಹರಕ್ಷಕ ದಳದ ಮಹಿಳೆಯರ ಘಟಕವು ಬಿಇಎಲ್ ನಲ್ಲಿ ಪ್ರಥಮವಾಗಿ ಆರಂಭವಾಗಿದ್ದು ನಮಗೆ ಹೆಮ್ಮೆ ತರುವಂತ್ತಾಗಿದೆ. ರಾಜ್ಯದ ಆರಕ್ಷಕ ಸಿಬ್ಬಂದಿಯ ಸರಿಸಮನಾಗಿ ಗೃಹರಕ್ಷಕ ದಳವು ಸಲ್ಲಿಸುತ್ತಿರುವ ಸೇವೆ ಅನನ್ಯವಾದದ್ದು ಎಂದರು.

blank

ಕಾರ್ಯಕ್ರಮದಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಎಂ ಗುರುರಾಜ್, ಸಂರಕ್ಷಣಾಧಿಕಾರಿ ಜೀತೇಂದ್ರ ಸಿಂಗ್, ಡಾ.ಶಂಕರಪ್ಪ ಕೆ ಜೆ ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳು, ಕಾರ್ಮಿಕ ನಾಯಕರು ತೋಟಗಾರಿಕೆ ಸಿಬ್ಬಂದಿ, ಭಾಗಿಯಾಗಿದ್ದರು.

The post ಗೃಹ ರಕ್ಷಕ ದಳದಿಂದ ಮಹತ್ವದ ಹೆಜ್ಜೆ; ಒಂದು ಲಕ್ಷ ಗಿಡ ನೆಡುವ ಗುರಿ appeared first on News First Kannada.

Source: newsfirstlive.com

Source link