ಟೀಂ ಇಂಡಿಯಾದಲ್ಲಿ ‘ರಿಪ್ಲೇಸ್​​’ ಗೊಂದಲ.. ಇಂಗ್ಲೆಂಡ್​ ಫ್ಲೈಟ್​ ಹತ್ತೋದು ಈ ಐವರಾ..?

ಟೀಂ ಇಂಡಿಯಾದಲ್ಲಿ ‘ರಿಪ್ಲೇಸ್​​’ ಗೊಂದಲ.. ಇಂಗ್ಲೆಂಡ್​ ಫ್ಲೈಟ್​ ಹತ್ತೋದು ಈ ಐವರಾ..?

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಹತ್ತಿರವಾಗ್ತಿದ್ರೆ. ಇತ್ತ ಟೀಮ್ ಇಂಡಿಯಾ ದಿನೇ ದಿನೇ ಗೊಂದಲದ ಗೂಡಾಗಿ ಮಾರ್ಪಡ್ತಿದೆ. ಅದು ಕೂಡ ಇಂಜುರಿ ರಿಪ್ಲೇಸ್​ಮೆಂಟ್ ವಿಚಾರದಲ್ಲಿ.. ಅದ್ಯಾಕೆ.. ಬನ್ನಿ ನೋಡ್ಕೊಂಡು ಬರೋಣ.

ಇಂಗ್ಲೆಂಡ್​ನ ಪ್ರತಿಷ್ಠಿತ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗ್ತಿದ್ರೆ, ಮತ್ತೊಂದೆಡೆ ಮೂವರು ಆಟಗಾರರ ಇಂಜುರಿ ತಂಡದ ಹಿನ್ನಡೆಗೆ ಕಾರಣವಾಗ್ತಿದೆ. ಇದೇ ಇಂಜುರಿ ಟೀಮ್ ಇಂಡಿಯಾದಲ್ಲಿ ಗೊಂದಲ ಸೃಷ್ಟಿಸ್ತಿದೆ.
ಹೌದು, ಶುಭ್​​ಮನ್ ​ಗಿಲ್​, ವಾಷಿಂಗ್ಟನ್ ಸುಂದರ್, ಬ್ಯಾಕ್ ಆಪ್ ಪ್ಲೇಯರ್ ಅವೇಶ್​ ಖಾನ್ ಇಂಜುರಿಯಿಂದ ಬದಲಿ ಆಟಗಾರರನ್ನ ಇಂಗ್ಲೆಂಡ್​ಗೆ ಕಳಹಿಸಲು ಟೀಮ್ ಮ್ಯಾನೇಜ್​ಮೆಂಟ್ ಮನವಿ ಮಾಡಿತ್ತು. ಹೀಗಾಗಿ ರಿಪ್ಲೇಸ್​ಮೆಂಟ್ ಆಟಗಾರರಾಗಿ ವೇಗಿ ಭುವನೇಶ್ವರ್ ಕುಮಾರ್, ಪೃಥ್ವಿ ಶಾ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಇಂಗ್ಲೆಂಡ್​ ಫ್ಲೈಟ್​ ಹತ್ತಲಿದ್ದಾರೆ ಎನ್ನಲಾಗ್ತಿತ್ತು. ಆದ್ರೀಗ ಈ ಮೂವರ ಜೊತೆಗೆ ಮತ್ತಿಬ್ಬರು ಆಟಗಾರರ ಹೆಸರು ಮುಂಚೂಣಿಗೆ ಬಂದಿದೆ. ಈ ಪೈಕಿ ಓರ್ವ ಬ್ಯಾಟ್ಸ್​ಮನ್ ಹಾಗೂ ಆಫ್​ ಸ್ಪಿನ್ನರ್​​ ಬೌಲರ್ ಆಗಿದ್ದಾರೆ.

ಲಂಕಾದಿಂದ ಇಂಗ್ಲೆಂಡ್​ಗೆ ಹಾರುವರಾ ಸೂರ್ಯ ಕುಮಾರ್?
ದೇಶಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಯಾದವ್, ಈಗ ಸಿಕ್ಕ ಅವಕಾಶಗಳನ್ನ ಸದ್ಭಳಕೆ ಮಾಡಿಕೊಳ್ತಿದ್ದಾರೆ. ಅಲ್ಲದೆ ಲಂಕಾ ಪ್ರವಾಸದ ಏಕದಿನ ಸರಣಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಹಾಮ್​ಸ್ಟ್ರಿಂಗ್ ಇಂಜುರಿಯಿಂದ ಬಳಲ್ತಿರುವ ಉಪ ನಾಯಕ ರಹಾನೆ ಸ್ಥಾನಕ್ಕೆ ಸೂರ್ಯಕುಮಾರ್​ ಆಯ್ಕೆಗೆ ಚಿಂತನೆ ನಡೆಸ್ತಿದೆ.

ಸುಂದರ್ ಬದಲಿ ಆಟಗಾರ ಜಯಂತ್ ಅಥವಾ ಗೌತಮ್?
ಸದ್ಯದ ಮೂಲಗಳ ಪ್ರಕಾರ ಕನ್ನಡಿಗ ಕೃಷ್ಣಪ್ಪ ಗೌತಮ್​, ಲಂಕಾದಿಂದ ನೇರವಾಗಿ ಇಂಗ್ಲೆಂಡ್​ಗೆ ಪ್ರಯಾಣ ಬೆಳಸ್ತಾರೆ ಎನ್ನಲಾಗ್ತಿತ್ತು. ಆದ್ರೀಗ ಆಲ್​ರೌಂಡರ್ ಕೃಷ್ಣಪ್ಪ ಗೌತಮ್ ಜೊತೆ ಜಯಂತ್ ಯಾದವ್ ಹೆಸರು ಕೂಡ ಕೇಳಿ ಬರ್ತಿದೆ. ಅದ್ರಲ್ಲೂ ಬೌಲಿಂಗ್ ಜೊತೆಗೆ ಟೆಸ್ಟ್ ಕ್ರಿಕೆಟ್​ಗೆ ಬೇಕಾದ ಬ್ಯಾಟಿಂಗ್ ಸ್ಕಿಲ್​ ಹೊಂದಿರುವ ಕಾರಣ ಜಯಂತ್​​ಗೆ ಇಂಗ್ಲೆಂಡ್ ಕಳುಹಿಸಲು ಯೋಚನೆಯಲ್ಲಿದೆ ಎನ್ನಲಾಗ್ತಿದೆ. ಆದ್ರೆ, ಇವರಿಬ್ಬರಲ್ಲಿ ಯಾರ್ ಇಂಗ್ಲೆಂಡ್​ಗೆ ಹಾರರ್ತಾರೆ ಅನ್ನೋದೇ ಈಗ ಗೊಂದಲದ ಸೃಷ್ಟಿಗೆ ಕಾರಣ.
ಒಟ್ನಲ್ಲಿ.. ಸದ್ಯ ಇಂಜುರಿ ರಿಪ್ಲೇಸ್​ಮೆಂಟ್​ ವಿಚಾರದಲ್ಲಿ ಒಟ್ಟು ಐವರು ಆಟಗಾರರ ಹೆಸರು ಕೇಳಿ ಬರ್ತಿದ್ದು.. ಇವರಲ್ಲಿ ಎಷ್ಟು ಮಂದಿ ಇಂಗ್ಲೆಂಡ್​ ಪ್ಲೈಟ್ ಹತ್ತುವರು ಅನ್ನೋದನ್ನ ಇನ್ನಷ್ಟೇ ಗೊತ್ತಾಗಬೇಕಿದೆ.

ಲಂಕಾ ಸರಣಿಯಲ್ಲಿ ಪೃಥ್ವಿ ಶಾ

 • ಪಂದ್ಯ 03
 • ರನ್ 105
 • ಬೆಸ್ಟ್ 49
 • ಸರಾಸರಿ 35.00

ಟೆಸ್ಟ್​ ಕ್ರಿಕೆಟ್​ನಲ್ಲಿ ಭುವನೇಶ್ವರ್

 • ಪಂದ್ಯ 21
 • ವಿಕೆಟ್​ 63
 • ಬೆಸ್ಟ್​ 6/82
 • ಸರಾಸರಿ 26.09

ಪ್ರಥಮ ದರ್ಜೆಯಲ್ಲಿ ಕೆ.ಗೌತಮ್

 • ಪಂದ್ಯ 42
 • ರನ್ 1045
 • ವಿಕೆಟ್ 166
 • ಶತಕ 01

ಲಂಕಾ ಸರಣಿಯಲ್ಲಿ ಸುರ್ಯಕುಮಾರ್

 • ಪಂದ್ಯ 03
 • ರನ್ 124
 • ಅರ್ಧಶತಕ 01
 • ಸರಾಸರಿ 62.00

ಟೆಸ್ಟ್ ಕ್ರಿಕೆಟ್​ನಲ್ಲಿ ಜಯಂತ್​

 • ಪಂದ್ಯ 4
 • ರನ್ 228
 • ವಿಕೆಟ್ 11
 • ಸರಾಸರಿ 45.60

The post ಟೀಂ ಇಂಡಿಯಾದಲ್ಲಿ ‘ರಿಪ್ಲೇಸ್​​’ ಗೊಂದಲ.. ಇಂಗ್ಲೆಂಡ್​ ಫ್ಲೈಟ್​ ಹತ್ತೋದು ಈ ಐವರಾ..? appeared first on News First Kannada.

Source: newsfirstlive.com

Source link