ಕಾರ್ಮಿಕ ಇಲಾಖೆ, ಕಾರ್ಮಿಕ ಒಕ್ಕೂಟದಿಂದ 700 ಫುಡ್ ಕಿಟ್ ವಿತರಣೆ

ಕಾರ್ಮಿಕ ಇಲಾಖೆ, ಕಾರ್ಮಿಕ ಒಕ್ಕೂಟದಿಂದ 700 ಫುಡ್ ಕಿಟ್ ವಿತರಣೆ

ಬೆಂಗಳೂರು: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಾರ್ಮಿಕ ಪರ ಸಂಘಟನೆಗಳ ಒಕ್ಕೂಟದಿಂದ ಇಂದು ವಿವಿಧ ವರ್ಗದ ಬಡ ಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಉಚಿತ ಆಹಾರ ಕಿಟ್​​ಗಳ ವಿತರಣೆ ಮಾಡಲಾಯಿತು.

ಕೆಂಗೇರಿ ಉಪನಗರದ ಬಂಡೆ ಮಠದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕಾರ್ಮಿಕ ಇಲಾಖೆ ಬೆಂಗಳೂರು ಉಪವಿಭಾಗದ ಅಧಿಕಾರಿ, ಕೆಜಿ ಮುಕುಂದ್, ಕಾರ್ಮಿಕ ಸಂಘಟನೆ ಒಕ್ಕೂಟದ ಅಧ್ಯಕ್ಷ ಪ್ರಸನ್ನ ಗೌಡ, ಸ್ಥಳೀಯ ಮುಖಂಡ ನಾಗರಾಜ್, ಅನುಪಮಾ ಫುಡ್ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಿದರು.

700ಕ್ಕೂ ಹೆಚ್ಚು ವಿವಿಧ ವರ್ಗದ ಬಡ ಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಫುಡ್ ಕಿಟ್​​ಗಳನ್ನ ವಿತರಣೆ ಮಾಡಲಾಯಿತು. ರಾಜ್ಯದ ಹಲವು ಕಡೆ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ವೇಳೆ ಗಲಾಟೆ ನೂಕು ನುಗ್ಗುಲು, ಲಾಠಿ ಚಾರ್ಜ್ ಆಗಿದ್ದ ಹಿನ್ನೆಲೆ, ಇಲ್ಲಿ ವ್ಯವಸ್ಥಿತವಾಗಿ ಕೂಪನ್ ವಿತರಣೆ ಮಾಡಿ ದೊಡ್ಡ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಯಿತು.

blank

ನ್ಯೂಸ್ ಜೊತೆ ಮಾತನಾಡಿದ ಕಾರ್ಮಿಕ ಅಧಿಕಾರಿ ಕೆ.ಜಿ.ಮುಕುಂದ್, ಇಲಾಖೆಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನ ಜಾರಿಗೆ ತರಲಾಗಿದೆ. ಈ ಎಲ್ಲಾ ಯೋಜನೆಗಳ ಮಾಹಿತಿಯನ್ನ ಇಲಾಖೆಯಿಂದ ಪಡೆದು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದ್ರು.

ಇನ್ನು ಕರ್ನಾಟಕ ಕಾರ್ಮಿಕ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಸನ್ನ ಗೌಡ ಮಾತನಾಡಿ ಇಂದು 700 ಕಿಟ್​​ಗಳನ್ನ ಮಾತ್ರ ವಿತರಣೆ ಮಾಡಲಾಗಿದೆ. ಆದರೆ ಸಾವಿರಾರು ಸಂಖ್ಯೆಯ ಕಾರ್ಮಿಕರು ಇದ್ದಾರೆ ಅವರೆಲ್ಲರಿಗೂ ಫುಡ್ ಕಿಟ್​​ಗಳು ವ್ಯವಸ್ಥಿತವಾಗಿ ತಲುಪಿಲ್ಲ, ಸಚಿವರು ಎಲ್ಲರಿಗೂ ಫುಡ್ ಕಿಟ್ ಸಿಗುವಂತೆ ಮಾಡಬೇಕು. ಕಾರ್ಮಿಕರ ಒಳಿತಿಗೆ ಇಲಾಖೆ ಜೊತೆಗೆ ನಮ್ಮ ಸಹಕಾರ ಸದಾಕಾಲ ಇರಲಿದೆ ಎಂದ್ರು.

The post ಕಾರ್ಮಿಕ ಇಲಾಖೆ, ಕಾರ್ಮಿಕ ಒಕ್ಕೂಟದಿಂದ 700 ಫುಡ್ ಕಿಟ್ ವಿತರಣೆ appeared first on News First Kannada.

Source: newsfirstlive.com

Source link