ನೆರೆ ಅಬ್ಬರಕ್ಕೆ ಕೊಚ್ಚಿಹೋದ ಪೊಲೀಸ್​ ಠಾಣೆಯ ದಾಖಲೆಗಳು..!

ನೆರೆ ಅಬ್ಬರಕ್ಕೆ ಕೊಚ್ಚಿಹೋದ ಪೊಲೀಸ್​ ಠಾಣೆಯ ದಾಖಲೆಗಳು..!

ಉತ್ತರ ಕನ್ನಡ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಎಲ್ಲಡೆ ಪ್ರವಾಹ ಭೀತಿ ಉಂಟಾಗಿದೆ. ಪರಿಣಾಮ ನೆರೆಯ ಅಬ್ಬರಕ್ಕೆ ಪೊಲೀಸ್​ ಠಾಣೆಯ ದಾಖಲೆಗಳು ಸಹಿತ ನೀರು ಪಾಲಾದ ಘಟನೆ ಕಾರವಾರ ತಾಲೂಕಿನ ಮಲ್ಲಾಪುರ ಠಾಣೆಯಲ್ಲಿ ನಡೆದಿದೆ.

blank

ಇದನ್ನೂ ಓದಿ: ಕದ್ರಾ ಡ್ಯಾಂನಿಂದ ಏಕಾಏಕಿ ನೀರು ಹೊರಬಿಟ್ಟ ಅಧಿಕಾರಿಗಳು; 18 ಮನೆಗಳು ನೆಲಸಮ

ಕದ್ರಾ ಜಲಾಶಯದಿಂದ ಏಕಾಏಕಿ ನೀರುಬಿಟ್ಟ ಹಿನ್ನೆಲೆ ನೀರು ಠಾಣೆಗೆ ನುಗ್ಗಿದೆ. ಠಾಣೆ ಭಾಗಶಃ ಜಲಾವೃತಗೊಂಡ ಹಿನ್ನೆಲೆಯಲ್ಲಿ ಎಲ್ಲಾ ಕಡತಗಳು ಜಲಾವೃತಗೊಂಡಿದೆ. ಠಾಣೆಯಲ್ಲಿದ್ದ ಯಂತ್ರೋಪಕರಣಗಳು ಸಹ ನೀರಲ್ಲಿ ಮುಳುಗಿ ಹಾನಿಗೊಂಡಿದೆ. ನೆರೆ ಪೂರ್ವ ತಯಾರಿ ಮಾಡಿಕೊಂಡಿದ್ದರಿಂದ ಹೆಚ್ಚಿನ ಹಾನಿ ತಪ್ಪಿದಂತಾಗಿದೆ.

blank

ಕಳೆದ ಬಾರಿಯಷ್ಟೇ ನೀರು ಬರುವ ನಿರೀಕ್ಷೆಯಲ್ಲಿ ದಾಖಲೆಗಳನ್ನ ಮೇಲ್ಮಟ್ಟದಲ್ಲಿ ಇರಿಸಿದ್ದರು. ಆದರೆ ಈ ಬಾರಿ ಕಳೆದ ಬಾರಿಗಿಂತ ಅಧಿಕ ಮಟ್ಟದಲ್ಲಿ ನೀರು ಬಂದ ಪರಿಣಾಮ ಠಾಣೆ ಜಲಾವೃತಗೊಂಡಿದೆ ಎನ್ನಲಾಗಿದೆ. ಸದ್ಯ ಪೊಲೀಸ್​ ಠಾಣೆಯನ್ನು ತಾತ್ಕಾಲಿಕವಾಗಿ ಕೈಗಾ ಟೌನ್‌ಶಿಪ್ ಕಟ್ಟದಲ್ಲಿ ಆರಂಭಿಸಲಾಗಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಭಾರೀ ಮಳೆ: ಜಲಾಶಯಗಳಿಂದ ನೀರು ಬಿಡುಗಡೆ

 

blank

The post ನೆರೆ ಅಬ್ಬರಕ್ಕೆ ಕೊಚ್ಚಿಹೋದ ಪೊಲೀಸ್​ ಠಾಣೆಯ ದಾಖಲೆಗಳು..! appeared first on News First Kannada.

Source: newsfirstlive.com

Source link