ಯೋಗರಾಜ್ ಭಟ್ಟರ ಟೀಮ್​ ಸೇರಿಕೊಂಡ ‘ಕೌರವ’

ಯೋಗರಾಜ್ ಭಟ್ಟರ ಟೀಮ್​ ಸೇರಿಕೊಂಡ ‘ಕೌರವ’

ಸ್ಯಾಂಡಲ್​ವುಡ್​​ನ ವಿಕಟ ಕವಿ, ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ಗುರು ಪ್ರೌರ್ಣಿಮೆಯ ದಿನ ಒಂದೊಳ್ಳೆ ಕೆಲಸ ಮಾಡಿದ್ದಾರೆ.. ಭಟ್ಟರ ಜೊತೆಗೆ ಅವರ ಬಳಗವೂ ಸೇರಿದೆ ಜೊತೆಗೆ ಫಸ್ಟ್ ಟೈಮ್ ಸಚಿವರಾದ ಬಿ.ಸಿ.ಪಾಟೀಲ್ ಕೂಡ ಸೇರಿದ್ದಾರೆ..

ಮೊನ್ ಮೊನ್ನೆ ಫಾರೀನಲ್ಲಿ ಎರಡನೇ ಗಾಳಿಪಟದ ಶೂಟಿಂಗ್​ ಮುಗಿಸಿ ಸದ್ದು ಮಾಡಿದ್ದರು ಯೋಗರಾಜ್ ಭಟ್.. ಗಾಳಿಪಟ-2 ಸಿನಿಮಾದ ಜೊತೆ ಜೊತೆಗೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೆಷನಲ್ಲಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ ಯೋಗರಾಜ್ ಭಟ್​​.. ಆದ್ರೆ ಈ ಗ್ಯಾಪ್​​​​​​ನಲ್ಲೇ ಮತ್ತೊಂದು ಹೊಸ ಸಿನಿಮಾ ಸುಳಿವನ್ನ ಕೊಟ್ಟಿದ್ದಾರೆ ಸ್ಯಾಂಡಲ್​​ವುಡ್ ವಿಕಟ ಕವಿ..

blank

ಯೋಗರಾಜ್ ಭಟ್ಟರದ್ದು ಒಂದು ಸಿನಿ ಗ್ಯಾಂಗ್ ಇದೆ.. ದುನಿಯಾ ಸೂರಿ, ಮಾಸ್ತಿ, ವಿಕಾಸ್, ಹರಿಕೃಷ್ಣ ಇವೆರಲ್ಲ ಕಾಯಂ ಭಟ್ಟರ ಸಿನಿ ಬಳಗದವರು.. ಏನಾದೊಂದ್ರು ಸಿನಿಮಾ ಕಥೆ ಕವಿತೆಯನ್ನ ಕೆತ್ತೋದೆ ಇವ್ರು ಸಿನಿ ಕೆಲಸ.. ಗುರು ಪ್ರೌಣಿಮೆಯ ದಿನ ಯೋಗರಾಜ್ ಭಟ್ ಸಿನಿಗ್ಯಾಂಗ್ ಹೊಸ ಸಿನಿ ಕೆಲಸಕ್ಕೆ ಮುಂದಾಗಿ ಅಡಿಬರವನ್ನ ಬರೆದಿದೆ.. ಯೋಗರಾಜ್ ಭಟ್ ಜೊತೆ ದುನಿಯಾ ಸೂರಿ, ನಟ ವಿಕಾಸ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸುಧಿರ್ ಸೇರಿದಂತೆ ಮುಂತಾದವರು ಸೇರಿದ್ದಾರೆ..

blank

ಈ ಸಿನಿಗ್ಯಾಂಗ್ ಜೊತೆಗೆ ಫಸ್ಟ್ ಟೈಮ್ ಮಾಜಿ ಪೊಲೀಸ್ ಅಧಿಕಾರಿ, ನಟ ನಿರ್ಮಾಪಕ ಹಾಗೂ ರಾಜ್ಯ ಸರ್ಕಾರ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೇರಿದ್ದಾರೆ.. ನಾವೆಲ್ಲ ಸೇರಿ ಒಂದು ಸಿನಿಮಾ ಮಾಡ್ತಿವಿ ಶೀಘ್ರದಲ್ಲೇ ಸಿಹಿ ಸಹಿ ಸಿನಿಮಾ ಸುದ್ದಿ ಕೊಡಲಿದ್ದೇವೆ ಎಂದು ಚಿತ್ರಪ್ರೇಮಿಗಳಿಗೆ ಯೋಗರಾಜ್ ಭಟ್ ತಿಳಿಸಿದ್ದಾರೆ..

ರಾಜ್ಯದ ಕೃಷಿ ಮಂತ್ರಿಗಳು ಸನ್ಮಾನ್ಯ ಶ್ರೀ ಬಿ.ಸಿ.ಪಾಟೀಲ್ ಅವರ ಜೊತೆ.. ಸೂರಿ, ಹರಿಕೃಷ್ಣ, ವಿಕಾಸ್, ಸುಧೀರ್… ಒಂದು ಅದ್ಭುತ ಸಿನಿಮಾ ಲೈನ್ ಅಪ್ ಆಯ್ತು.. ಸ್ನೇಹಿತರೆಲ್ಲರ ಮುದ್ದಾಟ ಗುದ್ದಾಟ ಹಾಗು ಸಪೋರ್ಟ್ ಜೊತೆ ನಿರ್ದೇಶನ ನನ್ನದು.. ನಟನವರ್ಗ ಅದ್ಭುತ ಆದ್ರೆ ಇವತ್ತು ಹೇಳಂಗಿಲ್ಲ.. ಶೀಘ್ರದಲ್ಲೇ ಬಾಕಿ ಸುದ್ದಿ.. ನನ್ನೆಲ್ಲಾ ಗುರುಗಳಾದ ನನ್ನ ಗೆಳೆಯರಿಗೆ ಗುರು ಪೂರ್ಣಿಮಾ ಶುಭಾಶಯಗಳು ಎಂದಿದ್ದಾರೆ ಯೋಗರಾಜ್​​ ಭಟ್.

blank

ಯೋಗರಾಜ್ ಭಟ್ ತನ್ನ ಸ್ನೇಹ ಬಳಗದ ಜೊತೆ ಸೇರಿ ಬಿ.ಸಿ.ಪಾಟೀಲ್ ನಿರ್ಮಾಣದಲ್ಲಿ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ.. ಇನೇನು ಕೆಲವೇ ದಿನಗಳಲ್ಲಿ ಈ ಬಗ್ಗೆ ಹೊಸ್ ಹೊಸ ಸಮಾಚಾರವನ್ನ ಸ್ವತಃ ಯೋಗರಾಜ್ ಭಟ್ಟರೇ ನೀಡಲಿದ್ದಾರೆ, ಕಾಯುತ್ತಿರೀ ಚಿತ್ರಪ್ರೇಮಿಗಳೇ.

The post ಯೋಗರಾಜ್ ಭಟ್ಟರ ಟೀಮ್​ ಸೇರಿಕೊಂಡ ‘ಕೌರವ’ appeared first on News First Kannada.

Source: newsfirstlive.com

Source link