ಬಿ.ಎಸ್.ಯಡಿಯೂರಪ್ಪ ನಮಗೆಲ್ಲ ಆದರ್ಶ -ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್

ಬಿ.ಎಸ್.ಯಡಿಯೂರಪ್ಪ ನಮಗೆಲ್ಲ ಆದರ್ಶ -ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್

ಬೆಂಗಳೂರು: ಸಿಎಂ ಬಿಎಸ್​ ಯಡಿಯೂರಪ್ಪ ನಮ್ಮಂತಹ ಕಾರ್ಯಕರ್ತರಿಗೆ ಆದರ್ಶ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಸಿಎಂ ಬಿಎಸ್​​ವೈಗೆ ಇಂದು ಅಥವಾ ನಾಳೆ ಹೈಕಮಾಂಡ್​​ನಿಂದ ಸಂದೇಶ ಬರುತ್ತೆ ಅನ್ನೋ ವಿಚಾರಕ್ಕೆ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಅವರು.. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಯಡಿಯೂರಪ್ಪ ಕಳೆದ 2 ವರ್ಷಗಳಿಂದ ಉತ್ತಮ ಆಡಳಿತ ಕೊಟ್ಟಿದ್ದಾರೆ. ಪ್ರವಾಹ, ಕೋವಿಡ್ ಪರಿಸ್ಥಿತಿ ಎಲ್ಲವನ್ನೂ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ ಎಂದರು.

ಆರ್ಥಿಕ ಹೊಡೆತದ ನಡುವೆಯೂ ಅವರು ಉತ್ತಮ ಸರ್ಕಾರವನ್ನ ನೀಡಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಅವರೊಬ್ಬ ನಮ್ಮಂತಹ ಕಾರ್ಯಕರ್ತರಿಗೆ ಆದರ್ಶ. ನಮ್ಮ ಪಾರ್ಟಿಯಲ್ಲಿರೋದು ಅದೇ ವಿಶೇಷ. ಅಧಿಕಾರಗೋಸ್ಕರ ನಾವು ಕೆಲಸ ಮಾಡಲ್ಲ ಎಂದರು.

The post ಬಿ.ಎಸ್.ಯಡಿಯೂರಪ್ಪ ನಮಗೆಲ್ಲ ಆದರ್ಶ -ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ appeared first on News First Kannada.

Source: newsfirstlive.com

Source link