ಶಶಿಕಲಾ ಜೊಲ್ಲೆ ಅವ್ರ ಬ್ಯಾಗ್ರೌಂಡ್​ ನೋಡಿದ್ರೆ ಗೊತ್ತಾಗುತ್ತೆ -ಹೆಚ್.ಸಿ ಬಾಲಕೃಷ್ಣ

ಶಶಿಕಲಾ ಜೊಲ್ಲೆ ಅವ್ರ ಬ್ಯಾಗ್ರೌಂಡ್​ ನೋಡಿದ್ರೆ ಗೊತ್ತಾಗುತ್ತೆ -ಹೆಚ್.ಸಿ ಬಾಲಕೃಷ್ಣ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಕಮಿಷನ್ ಡೀಲ್ ಪ್ರಕರಣ ಸಂಬಂಧ ಮಾಜಿ ಶಾಸಕ ಹೆಚ್. ಸಿ ಬಾಲಕೃಷ್ಣ ಪ್ರತಿಕ್ರಿಯಿಸಿ.. ಶಶಿಕಲಾ ಜೊಲ್ಲೆ ಕೆಲಸ ಮಾಡುವ ಇಲಾಖೆ ಬಡವರ ಇಲಾಖೆ. ಪೌಷ್ಠಿಕ ಸಮಸ್ಯೆ ಯಿಂದ ಬಳಲುತ್ತೀರೋ ಮಕ್ಕಳು ಹಾಗೂ ತಾಯಂದಿರನ್ನ ನೋಡಿಕೊಳ್ಳುವ ಇಲಾಖೆ. ಈ ಇಲಾಖೆ ಜವಾಬ್ದಾರಿ ಹೊತ್ತಿರುವ ಸಚಿವರು ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ಅದನ್ನ ಮೀರಿ ಅವರು ಮಾಡಿರುವ ಕೃತ್ಯ ತಲೆ ತಗ್ಗಿಸುವಂತದ್ದು. ಭ್ರಷ್ಟಾಚಾರ ಬಿಜೆಪಿ ಸರ್ಕಾರದಲ್ಲಿ ತಾಂಡವ ಆಡುತ್ತಿದೆ ಅನ್ನೋದಕ್ಕೆ ಇದೊಂದು ಉದಾಹರಣೆ. ಇದು ಯಾರಿಗೂ ಶೋಭೆ ತರುವುದಿಲ್ಲ. ಒಬ್ಬ ಹೆಣ್ಣು ಮಗಳಾಗಿ ಹೆಣ್ಣು ಮಕ್ಕಳಿಗೆ ನೀಡುವ ಯೋಜನೆಯಲ್ಲಿ ಈ ರೀತಿ ಕಮಿಷನ್ ತೆಗೆದುಕೊಳ್ಳೋದು ಗೌರವತರುವಂತದ್ದಲ್ಲ. ಅವರ ಬ್ಯಾಗ್ ಗ್ರೌಂಡ್ ನೋಡಿದ್ರೆ ಗೊತ್ತಾಗುತ್ತೆ.. ಅವರು ಸಿರಿವಂತ ಕುಟುಂಬದಿಂದ ಬಂದವರು. ಅವರಿಗೆ ಈ ರೀತಿ ದುಡ್ದು ಮಾಡುವ ಅವಶ್ಯಕತೆ ಕೂಡಾ ಇಲ್ಲ.

ಅವರ ಮೋಟಿವೇಷನ್ ಏನಿದ್ರೂ ಬಡವರಿಗೆ ಸೇವೆ ಮಾಡಬೇಕು ಅನ್ನೋದು ಇರಬೇಕಿತ್ತು. ಅವರ ಈ ಕೃತ್ಯವನ್ನ ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಭ್ರಷ್ಟಾಚಾರ ಮಾಡುವವರು ಯಾರು ಕೂಡಾ ರಾಜಕೀಯದಲ್ಲಿ ಇರಬಾರದು. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

The post ಶಶಿಕಲಾ ಜೊಲ್ಲೆ ಅವ್ರ ಬ್ಯಾಗ್ರೌಂಡ್​ ನೋಡಿದ್ರೆ ಗೊತ್ತಾಗುತ್ತೆ -ಹೆಚ್.ಸಿ ಬಾಲಕೃಷ್ಣ appeared first on News First Kannada.

Source: newsfirstlive.com

Source link