ಅಲ್ಲಾ ರೀ ನಾವು ಅಷ್ಟೂ ಡ್ಯಾನ್ಸ್ ಮಾಡಿಲ್ವಾ?

ಬಿಗ್ ಬಾಸ್ಕ್ ವೀಕೆಂಡ್‍ನಲ್ಲಿ ಸೂಪರ್ ಸಂಡೇ ವಿತ್ ಸುದೀಪ್ ಸಖತ್ ಎಂಟರ್‍ಟೈನಿಂಗ್ ಆಗಿರುತ್ತದೆ ಎಂಬುದು ತಿಳಿದಿರುವ ವಿಚಾರ. ಆದರೆ ಈ ವಾರ ಸ್ಪರ್ಧಿಗಳು ಸ್ವಲ್ಪ ಎಕ್ಸ್ಟ್ರಾ ಮನರಂಜನೆ ನೀಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಪ್ರಶಾಂತ್ ಸಂಬರಗಿ ಅವರ ಡ್ಯಾನ್ಸ್ ಹೆಚ್ಚು ಗಮನ ಸೆಳೆದಿದೆ.

ಹೌದು ಈ ಬಾರಿಯ ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್‍ನಲ್ಲಿ ಕಿಚ್ಚ ಸುದೀಪ್ ಪ್ರಶಾಂತ್ ಸಂಬರಗಿ ಅವರಿಗೆ ಡ್ಯಾನ್ಸ್ ಮಾಡಲು ತಿಳಿಸಿದ್ದು, ಶಮಂತ್ ಹಾಗೂ ವೈಷ್ಣವಿ ಅವರಿಗೆ ಹಾಡು ಹೇಳಲು ಸೂಚಿಸಿದ್ದರು. ಅದರಂತೆ ಪ್ರಶಾಂತ್ ನ್ಯಾಚುರಲ್ ಸ್ಟಾರ್ ಆಗಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಆದರೆ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2 ಸಿನಿಮಾದ ಸಾಂಗ್‍ಗೆ ಪ್ರಶಾಂತ್ ಸಂಬರಗಿ ಅವರು ಹಾಕಿರುವ ಸ್ಟೆಪ್ಸ್ ಕಂಡು ಸ್ವತಃ ಸುದೀಪ್ ಶಾಕ್ ಆಗಿದ್ದಾರೆ.

ಡ್ಯಾನ್ಸ್ ನೋಡಿದ ಕಿಚ್ಚ ಸುದೀಪ್, ಅಲ್ಲಾರಿ ನನಗೆ ಡ್ಯಾನ್ಸ್ ಮಾಡಲು ಅಷ್ಟೇನು ಬರಲ್ಲ. ಆದರೆ ಡ್ಯಾನ್ಸ್ ಮಾಡದೇನೆ ಹಾಡು ಮಾಡಿಲ್ಲ ರೀ ಎಂದು ಕೇಳಿದ್ದಾರೆ. ಆರಂಭದಲ್ಲಿ ಪ್ರಶಾಂತ್ ಅನಿಸುತಿದೆ ಯಾಕೋ ಇಂದು ಹಾಡಿಗೆ ಡ್ಯಾನ್ಸ್ ಮಾಡಿದ್ದು, ಇದನ್ನು ಕಂಡ ಸುದೀಪ್, ನೀವು ಹಾಡಿಗೆ ಡ್ಯಾನ್ಸ್ ಮಾಡುವ ಬದಲು ಮುಂದೆ ಏನು ಮಾಡಲಿ ಎಂದು ಯೋಚಿಸುತ್ತಿದ್ದಂಗೆ ಇತ್ತು ನಿಮ್ಮ ಡ್ಯಾನ್ಸ್ ಎಂದಿದ್ದಾರೆ.

blank

ಬಳಿಕ ಕೋಟಿಗೊಬ್ಬ 2 ಸಿನಿಮಾದ ಟೈಟಲ್ ಟ್ರ್ಯಾಕ್‍ಗೆ ಡ್ಯಾನ್ಸ್ ಮಾಡಿದ್ದು, ಇದನ್ನು ಕಂಡ ಕಿಚ್ಚ ಸುದೀಪ್ ಸ್ವತಃ ಶಾಕ್ ಆಗಿದ್ದಾರೆ. ನನಗೆ ಗೊತ್ತು ನಾನು ಅದ್ಭುತವಾಗಿ ಡ್ಯಾನ್ಸ್ ಅಂತೂ ಮಾಡಿಲ್ಲ, ಡ್ಯಾನ್ಸೇ ಇಲ್ದೇ ಇರೋ ರೀತಿ ಹಾಡನ್ನು ಮಾಡಿಲ್ಲ ರೀ ನಾನು. ಕೈ ಅಲ್ಲಾಡಿಸದ ಹಾಗೆ ಡ್ಯಾನ್ಸ್ ಮಾಡಿದಿರೆಲ್ರಿ ಎಂದು ಹೇಳಿದ್ದಾರೆ. ಈ ಮೂಲಕ ಈ ವಾರ ವೀಕ್ಷಕರನ್ನು ನಕ್ಕು ನಲಿಸಿದ್ದಾರೆ.

The post ಅಲ್ಲಾ ರೀ ನಾವು ಅಷ್ಟೂ ಡ್ಯಾನ್ಸ್ ಮಾಡಿಲ್ವಾ? appeared first on Public TV.

Source: publictv.in

Source link