ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್

ವಾರ ಬಿಗ್ ಬಾಸ್ ಎಲಿಮಿನೇಶನ್‍ನಲ್ಲಿ ಫುಲ್ ಟ್ವಿಸ್ಟ್ ಇಟ್ಟಿದ್ದು, ಕಿಚ್ಚನ ಮಾತಿಗೆ ಮನೆ ಮಂದಿ ಎಲ್ಲ ಫುಲ್ ಶಾಕ್ ಆಗಿದ್ದಾರೆ. ಇಂದು ಎಲಿಮಿನೇಶನ್ ಆಗಿಲ್ಲ, ಆದರೆ ಈ ವಾರ ಎಲಿಮಿನೇಶನ್ ಆಗಲಿದ್ದಾರೆ. ಬಿಗ್ ಬಾಸ್ ಮನೆಯಿಂದ ನೇರವಾಗಿ ಮನೆಗೆ ಹೋಗುತ್ತಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಹೌದು ಈ ಭಾನುವಾರ ಒಬ್ಬರು ಮನೆ ಬಿಟ್ಟು ಹೋಗಲ್ಲ. ಆದರೆ ಈ ವಾರ ಮನೆ ಬಿಟ್ಟು ಹೊರ ಹೋಗುತ್ತಾರೆ. ಆದರೆ ಯಾವಾಗ, ಯಾರು ಎಲಿಮಿನೇಟ್ ಆಗುತ್ತಾರೆ ಗೊತ್ತಿಲ್ಲ. ಆದರೆ ಮುಂದಿನ ಶನಿವಾರ ನಾನು ಬರುವಷ್ಟರಲ್ಲಿ ಒಬ್ಬರು ಇರುವುದಿಲ್ಲ. ಹೀಗುವ ಕ್ಷಣ ಯಾವಾಗಬೇಕಾದರೂ ಬರಬಹುದು. ಆ ಕಂಟೆಸ್ಟೆಂಟಿನ ಸಮಯ ಈಗ ಸ್ಟಾರ್ಟ್ ಆಗುತ್ತದೆ ಎಂದು ಸುದೀಪ್ ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಮನೆ ಮಂದಿ ಫುಲ್ ಶಾಕ್ ಆಗಿದ್ದು, ಎಲ್ಲರೂ ಈ ಬಗ್ಗೆ ಯೋಚಿಸುತ್ತಿದ್ದಾರೆ.

ಪ್ರತಿ ಕ್ಷಣವನ್ನೂ ಉಪಯೋಗಿಸಿಕೊಳ್ಳಿ, ಈಗಿನಿಂದ ಪ್ರತಿ ಕ್ಷಣವನ್ನೂ ನಿಮ್ಮ ಕ್ಷಣವನ್ನಾಗಿಸಿಕೊಳ್ಳಿ. ಒಂದು ಬೇಜಾರಿದೆ, ವೇದಿಕೆ ಮೇಲೆ ನಾನು ನಿಮಗೆ ಸಿಗುವುದಿಲ್ಲ, ಆದರೆ ಮತ್ತೆ ಸಿಗೋಣ ಎಂದು ಹೇಳಿದ್ದಾರೆ.

ಬಳಿಕ ಸ್ಪರ್ಧಿಗಳು ಮಾತನಾಡಿದ್ದು, ಯಾರನ್ನು, ಯಾವಾಗಬೇಕಾದರೂ, ಹೇಗೆ ಬೇಕಾದರೂ ಕಳುಹಿಸಬಹುದು. ಅವರು ಹೋಗುವುದೇ ನಮಗೆ ಗೊತ್ತಾಗುವುದಿಲ್ಲವಲ್ಲ ಎಂದು ಶಾಕ್ ಆಗಿದ್ದಾರೆ. ಅಲ್ಲದೆ ಎಲ್ಲರೂ ಜೊತೆ ಜೊತೆಗೇ ಇರ್ರಪ್ಪ ಎಂದು ಪ್ರಶಾಂತ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದೇ ವೇಳೆ ಎಲ್ಲರೂ ನಾಮಿನೇಟ್ ಆದವರಿಗೆ ಗುಡ್ ಲಕ್ ಹೇಳಿದ್ದಾರೆ.

blank

ಅಲ್ಲದೆ ನಾನು ಎಲಿಮಿನೇಟ್ ಆಗುತ್ತೇನೆ, ಜರ್ನಿ ವಿಟಿ ನೋಡುತ್ತೇನೆ, ಸುದೀಪ್ ಸರ್ ಜೊತೆ ನಿಲ್ಲುತ್ತೇನೆ ಎಂದು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದೆ. ಹೀಗೆ ಎಗರಿಸಿಕೊಂಡು ಹೋದರೆ ಹೇಗೆ ಎಂದು ಶುಭಾ ಸಹ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ.

blank

ಅಂದಹಾಗೆ ಈ ವಾರ ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ, ಶಮಂತ್, ಪ್ರಶಾಂತ್ ಹಾಗೂ ಶುಭಾ ಪೂಂಜಾ ಅವರು ನಾಮಿನೇಟ್ ಆಗಿದ್ದು, ಇಂದು ಒಬ್ಬರು ಎಲಿಮಿನೇಟ್ ಆಗಬೇಕಿತ್ತು. ಆದರೆ ಈ ವಾರ ಮನೆಗೆ ಹೋಗುತ್ತಿದ್ದಾರೆ. ಯಾರು ಹೋಗುತ್ತಾರೆ ಕಾದು ನೋಡಬೇಕಿದೆ.

The post ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್ appeared first on Public TV.

Source: publictv.in

Source link