ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದ ಕಟೀಲ್

ಮಂಗಳೂರು: ಕಾಂಗ್ರೆಸ್‍ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಆಸ್ಕರ್‍ ರನ್ನು ಕಂಡ ಬಳಿಕ ಕುಟುಂಬಿಕರ ಜೊತೆ ಮಾತನಾಡಿ ಧೈರ್ಯ ತುಂಬಿದ ನಳಿನ್ ಕುಮಾರ್ ಕಟೀಲ್ ಅವರು ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಆಸ್ಕರ್ ಒಬ್ಬ ಹಿರಿಯ ರಾಜಕೀಯ ಮುತ್ಸದ್ದಿ, ಸಜ್ಜನಿಕೆಯ ರಾಜಕಾರಣಕ್ಕೆ ಹೆಸರಾದವರು. ಆರೋಗ್ಯದಲ್ಲಿ ಕಂಡು ಬಂದ ಏರುಪೇರಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಧರ್ಮಸ್ಥಳದ ಪ್ರಸಾದ ನೀಡಿ ಆಸ್ಕರ್ ಫೆರ್ನಾಂಡಿಸ್ ಚೇತರಿಕೆಗೆ ಪ್ರಾರ್ಥಿಸಿದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ

ಆಸ್ಪತ್ರೆಗೆ ದಾಖಲಾದ ದಿನದಿಂದ ಇವತ್ತು ಅವರ ಆರೋಗ್ಯ ಸುಧಾರಿಸ್ತಾ ಇದೆ, ಶೀಘ್ರ ಗುಣಮುಖರಾಗಿ ಹೊರಗೆ ಬರಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ರಾಜ್ಯಸಭೆಯಲ್ಲಿ ಅವರ ಮಾರ್ಗದರ್ಶನ ಇನ್ನಷ್ಟು ಕಾಲ ಸಿಗಲಿ ಎಂದು ಬೇಡಿಕೊಳ್ಳುತ್ತೇವೆ. ವೈದ್ಯರ ಜೊತೆಗೂ ಮಾತನಾಡಿದ್ದೇವೆ, ಅವರ ಆರೋಗ್ಯ ಸುಧಾರಿಸುತ್ತಾ ಇದೆ ಎಂದಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

The post ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದ ಕಟೀಲ್ appeared first on Public TV.

Source: publictv.in

Source link