ಜಾಗತಿಕ ಮಟ್ಟದಲ್ಲಿ ಐತಿಹಾಸಿಕ ರಾಮಪ್ಪ ದೇವಸ್ಥಾನಕ್ಕೆ ಮನ್ನಣೆ; ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ

ಜಾಗತಿಕ ಮಟ್ಟದಲ್ಲಿ ಐತಿಹಾಸಿಕ ರಾಮಪ್ಪ ದೇವಸ್ಥಾನಕ್ಕೆ ಮನ್ನಣೆ; ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ

ಹೈದರಾಬಾದ್: ಜಾಗತಿಕ ಮಟ್ಟದಲ್ಲಿ ತೆಲಂಗಾಣದ ಐತಿಹಾಸಿಕ ರಾಮಪ್ಪ ದೇವಸ್ಥಾನಕ್ಕೆ ಮನ್ನಣೆ ಸಿಕ್ಕಿದೆ. ಯುನಿಸ್ಕೋ 44ನೇ ಅಧಿವೇಶನದಲ್ಲಿ ಈ ದೇವಸ್ಥಾವನ್ನು ವಿಶ್ವ ಪರಂಪರೆ ತಾಣವೆಂದು ಗುರುತಿಸಿದೆ. ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸಿದ ಬೆನ್ನಲ್ಲೇ ಟ್ವೀಟ್​​ ಮಾಡಿ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಅನುಭವ ಪಡೆಯಲು ಎಲ್ಲರೂ ರಾಮಪ್ಪ ದೇವಾಲಯಕ್ಕೆ ಭೇಟಿ ನೀಡಿ ಎಂದು ಮನವಿ ಮಾಡಿದರು.

ಚೀನಾದಲ್ಲಿ ನಡೆಸಿದ ವಿಶ್ವ ಪರಂಪರೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಮಪ್ಪ ದೇವಾಲಯವು ಭಾರತದ ಅತ್ಯುತ್ತಮ ಶಿಲ್ಪಕಲೆ ಎಂದು ಯೂನಿಸ್ಕೋ ಹೊಗಳಿದೆ. 12ನೇ ಶತಮಾನದ ಕಾಕತೀಯನ್ನರ ವಾಸ್ತುಶಿಲ್ಪದ ಅದ್ಭುತವನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಕೂಡಲೇ ಸೇರ್ಪಡೆ ಮಾಡುವುದಾಗಿ ಯೂನಿಸ್ಕೋ ಪ್ರಕಟಿಸಿದೆ.

ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡ ರಾಮಪ್ಪಾ ದೇವಸ್ಥಾನವು ತೆಲಂಗಾಣದ ಮುಲುಗು ಜಿಲ್ಲೆಯ ವೆಂಕಟಪುರ ಮಂಡಲದ ಪಾಲೆಂಪೆಟ್ ಎಂಬ ಗ್ರಾಮದಲ್ಲಿದೆ. ಇದು ಅಸಾಧಾರಣ ಶಿಲ್ಪಕಲೆ ಹೊಂದಿದೆ. ಕಾಕತೀಯ ರಾಜರ ಕಾಲದಲ್ಲಿ ಅಂದರೆ 1213ರಲ್ಲಿ ಪ್ರಸಿದ್ಧ ಶಿಲ್ಪಕಲೆ ರಾಮಪ್ಪರ ಕಲಾ ಕೌಶಲ್ಯದಡಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು.

The post ಜಾಗತಿಕ ಮಟ್ಟದಲ್ಲಿ ಐತಿಹಾಸಿಕ ರಾಮಪ್ಪ ದೇವಸ್ಥಾನಕ್ಕೆ ಮನ್ನಣೆ; ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ appeared first on News First Kannada.

Source: newsfirstlive.com

Source link