ರಾಜಮೌಳಿ ಮುಂದಿನ ಸಿನಿಮಾ ರೀವಿಲ್​​​; ಸೂಪರ್​ ಸ್ಟಾರ್​​ ಮಹೇಶ್​ ಬಾಬುಗೆ ಆ್ಯಕ್ಷನ್​ ಕಟ್

ರಾಜಮೌಳಿ ಮುಂದಿನ ಸಿನಿಮಾ ರೀವಿಲ್​​​; ಸೂಪರ್​ ಸ್ಟಾರ್​​ ಮಹೇಶ್​ ಬಾಬುಗೆ ಆ್ಯಕ್ಷನ್​ ಕಟ್

ಟಾಲಿವುಡ್​​ನ ಚಿತ್ರ ಬ್ರಹ್ಮ , ಸೋಲಿಲ್ಲದ ಸಿನಿ ಸೂತ್ರಧಾರ ಎಸ್​.ಎಸ್ ರಾಜಮೌಳಿ ಮೂರೊತ್ತು ಥ್ರಿಬಲ್ ಆರ್, ಥ್ರಿಬಲ್ ಆರ್ ಅಂತ ಕನವರಿಸುತ್ತಿದ್ದಾರೆ.. ಆದ್ರೆ ರಾಜಮೌಳಿ ಮುಂದಿನ ಸಿನಿಮಾದ ಬಗ್ಗೆ ಮಾತ್ರ ಟಾಲಿವುಡ್ ಮಾಯನಗರಿಯಲ್ಲಿ ಚರ್ಚೆ ಶುರುವಾಗಿದೆ.. ಈ ಬಾರಿ ಆ ಹೀರೋ ಜೊತೆ ರಾಜಮೌಳಿಗಾರು ಸಿನಿಮಾ ಮಾಡೋದು ಪಕ್ಕ ಎಂದು ಹೇಳಲಾಗುತ್ತಿದೆ.

ನಮ್ಮ ಸ್ಯಾಂಡಲ್​ವುಡ್​ನಲ್ಲಿ ಕೆಜಿಎಫ್ ಚಾಫ್ಟರ್ 2 , ಪಕ್ಕದ ಟಾಲಿವುಡ್​​ನಲ್ಲಿ ಥ್ರಿಬಲ್ ಆರ್​.. ಈ ಎರಡು ಸಿನಿಮಾಗಳ ಬಗ್ಗೆ ಈಗ ಭಾರತೀಯ ಚಿತ್ರರಂಗದಲ್ಲಿ ಕುತೂಹಲದ ಚರ್ಚೆ ನಡೆಯುತ್ತಲೇ ಇದೆ.. ಕೆಜಿಎಫ್ ಸಾರಥಿ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು ಅನ್ನೋದೆ ಕನ್ಫರ್ಮ್ ಆಯ್ತು.. ಆದ್ರೆ ಎಸ್​.ಎಸ್​.ರಾಜಮೌಳಿ ಮುಂದಿನ ಸಿನಿಮಾ ಯಾವುದು ಯಾರ ಜೊತೆ ಅನ್ನೋದೆ ಕುತೂಹಲದ ಕಾರ್ಮೋಡ..

blank

ರಣ ರೌದ್ರ ರುಧಿರ.. ರಾಜಮೌಳಿ ಕಲ್ಪನೆಯ 12ನೇ ಸಿನಿಮಾ.. ತನ್ನ ಸಿನಿಮಾದ ದಾಖಲೆಯ ಬೌಂಡರಿಯನ್ನ ತಾನೇ ದಾಟುತ್ತಾ ಮುನ್ನುಗೋ ಸ್ಟಾರ್ ಮೇಕರ್ ರಾಜಮೌಳಿ.. ಸದ್ಯ ಸ್ಟಾರ್ ಡೈರೆಕ್ಟರ್​​​ ಮೂರೊತ್ತು ಥ್ರಿಬಲ್ ಆರ್, ಥ್ರಿಬಲ್ ಆರ್ ಅಂತ ಕನವರಿಸುತ್ತಾ ಇದ್ದಾರೆ.. ತಾವು ಅಂದುಕೊಂಡುತ್ತೆ ಅಕ್ಟೋಬರ್ 13ನೇ ತಾರೀಖ್ ವಿಶ್ವಾದ್ಯಂತ ಪ್ರೇಕ್ಷಕರ ಮುಂದೆ ಥ್ರಿಬಲ್ ಆರ್ ಸಿನಿಮಾವನ್ನ ತಂದು ನಿಲ್ಲಿಸ ಬೇಕು ಮತ್ತೊಂದು ಗೆಲುವಿನ ದಾಖಲೆ ನಗಾರಿಯನ್ನ ಬಾರಿಸಬೇಕು ಅನ್ನೋ ಯೋಜನೆಯಲ್ಲಿ ರಾಜಮೌಳಿ ಇದ್ದಾರೆ.. ಈ ರೈಟ್​ ಟೈಮ್​​ನಲ್ಲೇ ರಾಜಮೌಳಿ ಮುಂದಿನ ಸಿನಿಮಾ ಯಾವುದು ಹಾಗೂ ಯಾರ ಜೊತೆ ಅನ್ನೋ ಪ್ರಶ್ನೆ ಟಾಲಿವುಡ್ ವಲಯದಲ್ಲಿ ಹಬ್ಬಿದೆ..

blank

ಯಾರ ಜೊತೆ ಎಸ್​​​​.ಎಸ್ ರಾಜಮೌಳಿ ಮುಂದಿನ ಸಿನಿಮಾ..?
ಆ ಹೀರೋ ಜೊತೆ ಸೇರಿ ಮೌಳಿ ಮಾಡ್ತಾರಾ ಹಂಗಾಮ..?

ಕೋಡೂರಿ ಶ್ರೀಶೈಲಾ ಶ್ರೀ ರಾಜಮೌಳಿ.. ಟಾಲಿವುಡ್ ಸಿನಿ ಲೋಕ ಸೋಲಿಲ್ಲದ ಚಿತ್ರ ಬ್ರಹ್ಮ.. ತಾನೇನು ಅನ್ನೋದನ್ನ ಈಗಾಗಲೇ ಇಡೀ ಭಾರತೀಯ ಚಿತ್ರರಂಗಕ್ಕೆ ಸಾಬೀತು ಮಾಡಿ ತೋರಿಸಿರುವ ರಾಜಮೌಳಿ ತೆರೆಮರೆಯಲ್ಲೇ ಹೊಸ ಸಿನಿಮಾ ಕಥೆಯ ಕುಸರಿಯಲ್ಲಿ ತಲ್ಲಿನರಾಗಿದ್ದಾರಂತೆ.. ಜೂನಿಯರ್ ಎನ್​ಟಿಆರ್, ರಾಮ್ ಚರಣ್, ಪ್ರಭಾಸ್, ನಾಣಿ ಹಾಗೂ ನಮ್ಮ ಕನ್ನಡದ ನಟ ಸುದೀಪ್ ಸಿನಿಮಾಗಳನ್ನ ನಿರ್ದೇಶಿಸಿರೋ ರಾಜಮೌಳಿ ಈ ಬಾರಿ ಹಿಂದೆಂದೂ ಕೆಲಸ ಮಾಡದೇ ಇರೋ ಟಾಲಿವುಡ್ ಹೀರೋ ಜೊತೆ ಕೆಲಸ ಮಾಡಲು ಮುಂದಾಗಿದ್ದಾರಂತೆ.. ಹಾಗಾದ್ರೆ ಯಾರು ಆ ಹೀರೋ ಅನ್ನೋ ಪ್ರಶ್ನೆಗೆ ಉತ್ತರ ಮಹೇಶ್ ಬಾಬು..

ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ..?
ಬಾಂಡ್ ಶೈಲಿಯಲ್ಲಿ ಚಿತ್ರದಲ್ಲಿ ಮಹೇಶ್ ಬಾಬು..!

blank

ಟಾಲಿವುಡ್​​ನ ಪ್ರಿನ್ಸ್ ಮಹೇಶ್ ಬಾಬು 28ನೇ ಸಿನಿಮಾ ಹೊಸ್ತಿಲಿನಲ್ಲಿ ನಿಂತಿದ್ದಾರೆ.. ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿ ಇರೋ ಮಹೇಶ್ ಬಾಬು ಮುಂದೆ ತ್ರಿವಿಕ್ರಂ ಜೊತೆ ಸಿನಿಮಾ ಮಾಡ್ತಾರೆ ಅನ್ನೋ ಮಾಹಿತಿ ಇದೆ.. ತ್ರಿವಿಕ್ರಂ – ಮಹೇಶ್ ಬಾಬು ಸಿನಿಕಾಂಬೋದ ನಂತರ ರಾಜಮೌಳಿ ಅವರ ಸಿನಿಮಾದಲ್ಲಿ ಮಹೇಶ್ ಹೀರೋ ಆಗ್ತಾರೆ ಅನ್ನೋ ಮಾತುಗಳು ಈಗ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ..

blank

ಈ ಹಿಂದೆ ಬಾಬುಬಲಿ ಭಾಗ ಒಂದು ಬಂದಾಗ ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇತ್ತು.. ಆದ್ರೆ ಆಗಿರಲಿಲ್ಲ.. ಆದ್ರೆ ಈಗ ಮಹೇಶ್ ಬಾಬು ಮತ್ತು ರಾಜಮೌಳಿ ಫಸ್ಟ್ ಟೈಮ್ ಒಂದಾಗಿ ಸಿನಿಮಾ ಮಾಡ್ತಾರೆ ಜೇಮ್ಸ್ ಬಾಂಡ್ ರೇಂಜ್​​ನಲ್ಲಿ ಒಂದು ಸಿನಿಮಾ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿಬರಲಾರಂಭಿಸಿವೆ. ಲಾಕ್ ಡೌನ್ ಟೈಮ್​​ನಲ್ಲಿ ರಾಜಮೌಳಿ ಬಾಂಡ್ ಶೈಲಿಯ ಸಿನಿಮಾದ ಚಿತ್ರಕಥೆ ಮಾಡಿಕೊಂಡಿದ್ದಾರಂತೆ.. ಒಟ್ಟಿನಲ್ಲಿ ರಾಜಮೌಳಿ ಅವರ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿರೋದಂತು ಸತ್ಯ..

blank

The post ರಾಜಮೌಳಿ ಮುಂದಿನ ಸಿನಿಮಾ ರೀವಿಲ್​​​; ಸೂಪರ್​ ಸ್ಟಾರ್​​ ಮಹೇಶ್​ ಬಾಬುಗೆ ಆ್ಯಕ್ಷನ್​ ಕಟ್ appeared first on News First Kannada.

Source: newsfirstlive.com

Source link