ಜೊಲ್ಲೆ ಮೊಟ್ಟೆ ಡೀಲ್​ ಗಂಭೀರ ಪ್ರಕರಣ -ಸಚಿವರ ರಾಜೀನಾಮೆಗೆ ಹೆಚ್​​ಕೆ ಪಾಟೀಲ್ ಆಗ್ರಹ

ಜೊಲ್ಲೆ ಮೊಟ್ಟೆ ಡೀಲ್​ ಗಂಭೀರ ಪ್ರಕರಣ -ಸಚಿವರ ರಾಜೀನಾಮೆಗೆ ಹೆಚ್​​ಕೆ ಪಾಟೀಲ್ ಆಗ್ರಹ

ಗದಗ: ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್​ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಹೆಚ್​.ಕೆ. ಪಾಟೀಲ್​ ಪ್ರತಿಕ್ರಿಯಿಸಿದ್ದು ಮುಖ್ಯಮಂತ್ರಿಗಳು ತಕ್ಷಣ ಜೊಲ್ಲೆಯವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ನ್ಯೂಸ್​ಫಸ್ಟ್​ನ ರಹಸ್ಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸರ್ಕಾರದಲ್ಲಿ ಏನ್​ ನಡೆದಿದೆ ಎಂಬುದನ್ನು ನ್ಯೂಸ್​ಫಸ್ಟ್​ ಬಿಚ್ಚಿಟ್ಟಿದ್ದು ಅವರ ಈ ಕಾರ್ಯಕ್ಕೆ ಅಭಿನಂದನೆಯನ್ನು ಸಮರ್ಪಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಶಶಿಕಲಾ ಜೊಲ್ಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ -ಸತೀಶ್ ಜಾರಕಿಹೊಳಿ ಆಗ್ರಹ

ಈ ಒಂದು ಪ್ರಕರಣ ರಾಜ್ಯ ರಾಜಕಾರಣದಲ್ಲಿ ಅತ್ಯಂತ ಗಂಭೀರ ವಿಷಯವಾಗಿದೆ, ಆದ್ದರಿಂದ ಮುಖ್ಯಮಂತ್ರಿಗಳು ತಕ್ಷಣ ಜೊಲ್ಲೆಯವರ ರಾಜೀನಾಮೆ ಪಡೆದುಕೊಳ್ಳಬೇಕು, ಈ ಕುರಿತು ಮುಖ್ಯಮಂತ್ರಿಗಳಿಗೆ ನಾನು ಆಗ್ರಹ ಮಾಡ್ತಿನಿ ಎಂದಿದ್ದಾರೆ.

ನ್ಯೂಸ್ ಫಸ್ಟ್‌ ಪ್ರಸಾರ ಮಾಡಿದ ವರದಿಯನ್ನ ಯಾರೂ ಅಲ್ಲಗಳೆದಿಲ್ಲ, ಇದು ಫೇಕ್ ಅಂತ ಸರಕಾರ ಕೂಡ ಇಲ್ಲಿಯವರೆಗೆ ಹೇಳಿಲ್ಲ, ಮುಖ್ಯಮಂತ್ರಿಗಳು ಇದರ ನಿರಾಕರಣೆ ಮಾಡಿಲ್ಲ, ಇದರ ಅರ್ಥ ಸರಕಾರ ಭ್ರಷ್ಟಾಚಾರವನ್ನು ಒಪ್ಪಿದೆ ಅಂತ.

ಇದನ್ನೂ ಓದಿ: ಜೊಲ್ಲೆ ಮೊಟ್ಟೆ ಡೀಲ್: ‘ಮಹಿಳೆಯರಿಗೆ, ಮಕ್ಕಳಿಗೆ ಮಾಡಿದ ಅನ್ಯಾಯ’ ಎಂದ ಉಮಾಶ್ರೀ

ಹೀಗಾಗಿ ಈ ವಿಷಯಕ್ಕೆ ಈಗ ಬಹಳ ಮಹತ್ವ ಬಂದಿದೆ. ಪ್ರಜಾಪ್ರಭುತ್ವದಲ್ಲಿ ಏನ್ ಕ್ರಮ ಆಗಬೇಕು ಅದು ಆಗಲೇ ಬೇಕು ಹೀಗಾಗಿ ಶಶಿಕಲಾ ಜೊಲ್ಲೆಯವರು ಅವರು ರಾಜೀನಾಮೆ ಕೊಡುವುದು ಬಹಳ ಸೂಕ್ತ ಎಂದು ಹೇಳಿದ್ದಾರೆ.

The post ಜೊಲ್ಲೆ ಮೊಟ್ಟೆ ಡೀಲ್​ ಗಂಭೀರ ಪ್ರಕರಣ -ಸಚಿವರ ರಾಜೀನಾಮೆಗೆ ಹೆಚ್​​ಕೆ ಪಾಟೀಲ್ ಆಗ್ರಹ appeared first on News First Kannada.

Source: newsfirstlive.com

Source link