ಪ್ರೇಮದಾಸ ಅಂಗಳದಲ್ಲಿ ಭುವನೇಶ್ವರ್​ ಮಿಂಚು -ಲಂಕಾ ವಿರುದ್ಧ ಧವನ್ ಬಳಗಕ್ಕೆ 38 ರನ್​ಗಳ ಜಯ

ಪ್ರೇಮದಾಸ ಅಂಗಳದಲ್ಲಿ ಭುವನೇಶ್ವರ್​ ಮಿಂಚು -ಲಂಕಾ ವಿರುದ್ಧ ಧವನ್ ಬಳಗಕ್ಕೆ 38 ರನ್​ಗಳ ಜಯ

ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆ-20 ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ, ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಭುವನೇಶ್ವರ ಕುಮಾರ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಶ್ರೀಲಂಕಾವನ್ನ ಮಣಿಸಿದೆ. ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿಯೇ 38 ರನ್‌ಗಳಿಂದ ಭಾರತ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿತ್ತು. ಬ್ಯಾಟಿಂಗ್‌ಗೆ ಇಳಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 164 ರನ್ ಗಳಿಸಿತು. ಟಾಸ್​ ಸೋತು ಬ್ಯಾಟಿಂಗ್​ ಇಳಿದ ಭಾರತಕ್ಕೆ, ಸೂರ್ಯ ಕುಮಾರ್​ ಯಾದವ್​, ಶಿಖರ್​ ಧವನ್​ ಆಸರೆಯಾದ್ರು. ಡೆಬ್ಯೂ ಪಂದ್ಯದಲ್ಲೇ ಪೃಥ್ವಿ ಶಾ ಗೋಲ್ಡನ್​ ಡಕ್​ ಆದ್ರೆ, ಹಾರ್ದಿಕ್​ ಪಾಂಡ್ಯ ಮತ್ತೆ ನಿರಾಸೆ ಮೂಡಿಸಿದ್ರು. ಇನ್ನುಳಿದಂತೆ ಸಂಜು ಸ್ಯಾಮ್ಸನ್​, ಇಶಾನ್​ ಕಿಶನ್​ ತಂಡಕ್ಕೆ ಅಲ್ಪ ಕಾಣಿಕೆ ನೀಡಿದ್ರು. ಹೇಗಿತ್ತು ಟೀಮ್​ ಇಂಡಿಯಾ ಬ್ಯಾಟಿಂಗ್​ ಇಲ್ಲಿದೆ ನೋಡಿ ಹೈಲೆಟ್ಸ್​​.

ಗುರಿ ಬೆನ್ನಟ್ಟಿದ ಶ್ರೀಲಂಕಾ 18.3 ಓವರ್​ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 126 ರನ್​ ಗಳಿಸಿ ಟೀಂ ಇಂಡಿಯಾಕ್ಕೆ ಶರಣಾಯಿತು. 4 ವಿಕೆಟ್​​ ಕಬಳಿಸಿ ಭುವನೇಶ್ವರ ಕುಮಾರ್ ಗೆಲುವಿನ ರುವಾರಿಯಾದರೆ, ಪ್ರಮುಖ 2 ವಿಕೆಟ್​​ ಕಬಳಿಸಿ ದೀಪಕ್ ಚಹರ್ ಮಿಂಚಿದರು. ಟೀಂ ಇಂಡಿಯಾ ಪರ ಡೆಬ್ಯೂ ಟಿ20 ಪಂದ್ಯದಲ್ಲಿ ಪೃಥ್ವಿ ಗೋಲ್ಡನ್​ ಡಕ್​ ಒಳಗಾಗಿ ನಿರಾಸೆ ಮೂಡಿಸಿದರು.

The post ಪ್ರೇಮದಾಸ ಅಂಗಳದಲ್ಲಿ ಭುವನೇಶ್ವರ್​ ಮಿಂಚು -ಲಂಕಾ ವಿರುದ್ಧ ಧವನ್ ಬಳಗಕ್ಕೆ 38 ರನ್​ಗಳ ಜಯ appeared first on News First Kannada.

Source: newsfirstlive.com

Source link