ಟ್ರಾಫಿಕ್​​ ಪೊಲೀಸ್​ ಮನೆಯಲ್ಲಿ ಚಿನ್ನದ ಶೌಚಾಲಯ; ಭವ್ಯ ಬಂಗಲೆ ಕಂಡು ದಂಗಾದ ಅಧಿಕಾರಿಗಳು

ಟ್ರಾಫಿಕ್​​ ಪೊಲೀಸ್​ ಮನೆಯಲ್ಲಿ ಚಿನ್ನದ ಶೌಚಾಲಯ; ಭವ್ಯ ಬಂಗಲೆ ಕಂಡು ದಂಗಾದ ಅಧಿಕಾರಿಗಳು

ರಷ್ಯಾ: ಭ್ರಷ್ಟಚಾರದ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ರಷ್ಯಾ ಟ್ರಾಫಿಕ್​​ ಪೊಲೀಸೋರ್ವನ ಭವ್ಯ ಬಂಗಲೆ ಕಂಡು ತನಿಖಾ ತಂಡ ಶಾಕ್​​ ಆಗಿದೆ. ಈ ಭ್ರಷ್ಟ ಟ್ರಾಫಿಕ್​​ ಪೊಲೀಸ್ ಅಕ್ರಮ ಸಂಪತ್ತಿನ ದರ್ಶನ ಆಗುತ್ತಿದ್ದಂತೆ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. ಇಂತಹದ್ದೊಂದು ಘಟನೆ ನಡೆದಿದ್ದು ಭಾರತದಲ್ಲಲ್ಲ, ಬದಲಿಗೆ ನಮ್ಮ ಪಕ್ಷದ ದೇಶ ದಕ್ಷಿಣ ಸ್ಟಾವ್ರೊಪೋಲ್ ಪ್ರದೇಶದಲ್ಲಿ.

ಹೌದು, ಇಲ್ಲಿನ ಸಂಚಾರ ಪೊಲೀಸ್ ಮುಖ್ಯಸ್ಥ ಕರ್ನಲ್ ಅಲೆಕ್ಸಿ ಸಫೊನೊವ್ ಎಂಬುವರ ವಿರುದ್ಧ ಭ್ರಷ್ಟಚಾರದ ಆರೋಪ ಕೇಳಿ ಬಂದಿತ್ತು. ಭ್ರಷ್ಟಚಾರದ ಆರೋಪ ಕೇಳಿ ಬಂದ ಕೂಡಲೇ ಪೊಲೀಸ್​​ ತನಿಖಾ ತಂಡವೊಂದು ಇವರ ಮನೆ ದಾಳಿ ನಡೆಸಿದೆ. ದಾಳಿ ವೇಳೆ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಮನೆಯಲ್ಲಿ ಐಷಾರಾಮಿ ವ್ಯವಸ್ಥೆ ಕಂಡು ತನಿಖಾ ತಂಡ ಬೆರಗಾಗಿದೆ ಎನ್ನಲಾಗಿದೆ.

ಇನ್ನು, ತನಿಖಾ ತಂಡಕ್ಕೆ ಈ ಐಷಾರಾಮಿ ಬಂಗಲೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನದ ಶೌಚಾಲಯ, ದುಬಾರಿ ಆಲಂಕಾರಿಕ ವಸ್ತುಗಳು ಪತ್ತೆಯಾಗಿವೆ. ಸದ್ಯ ಇವುಗಳನ್ನು ವಶಕ್ಕೆ ಪಡೆದಿರುವ ತನಿಖಾ ತಂಡ, ಪ್ರಕರಣ ಸಂಬಂಧ ಕರ್ನಲ್ ಅಲೆಕ್ಸಿ ಸಫೊನೊವ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದೆ.

The post ಟ್ರಾಫಿಕ್​​ ಪೊಲೀಸ್​ ಮನೆಯಲ್ಲಿ ಚಿನ್ನದ ಶೌಚಾಲಯ; ಭವ್ಯ ಬಂಗಲೆ ಕಂಡು ದಂಗಾದ ಅಧಿಕಾರಿಗಳು appeared first on News First Kannada.

Source: newsfirstlive.com

Source link