ಇಂದು ಕ್ಲೈಮ್ಯಾಕ್ಸ್ – ಸಿಎಂ ಬಿಎಸ್‍ವೈ ಕಾರ್ಯಕ್ರಮಗಳು ಏನು?

ಬೆಂಗಳೂರು: ಸಿಎಂ ಯಡಿಯೂರಪ್ಪನವರಿಗೆ ಇಂದು ಬಿಗ್ ಬಿಗ್ ಡೇ ಆಗಿದ್ದು ರಾಜೀನಾಮೆ ಗೊಂದಲಕ್ಕೆ ಇಂದೇ ತೆರೆ ಬೀಳಲಿದೆ.

ಇಂದಿನ ಕಾರ್ಯಕ್ರಮಗಳು ಏನು?
ಬೆಳಗ್ಗೆ 9:50ರ ವೇಳೆಗೆ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಬಳಿಕ ಸರ್ಕಾರದ 2 ವರ್ಷ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಸಾಧನಾ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಕೈಪಿಡಿ ಬಿಡುಗಡೆಯಾಗಲಿದೆ. ಇದನ್ನೂ ಓದಿ : ಸಂದೇಶ ಬಂದಿಲ್ಲ, ಕಡೆ ಕ್ಷಣದವರೆಗೂ ಕೆಲಸ ಮಾಡ್ತೇನೆ: ಸಿಎಂ ಯಡಿಯೂರಪ್ಪ

ಈ ಸಮಾರಂಭ ಉದ್ದೇಶಿಸಿ ಸಿಎಂ ಮಹಾ ಭಾಷಣ ಮಾಡಲಿದ್ದಾರೆ. ಇದೇ ವಿದಾಯ ಭಾಷಣವಾಗುವ ಸಾಧ್ಯತೆಯಿದೆ. ಮಧ್ಯಾಹ್ನ 1 ಗಂಟೆ ಬಳಿಕ ಭೋಜನಕೂಟದಲ್ಲಿ ಸಿಎಂ ಭಾಗಿಯಾಗುತ್ತಾರೆ. ಮಧ್ಯಾಹ್ನ 1:30ಕ್ಕೆ ಕಾವೇರಿ ನಿವಾಸಕ್ಕೆ ಸಿಎಂ ವಾಪಸ್ ಆಗಲಿದ್ದಾರೆ.

ಕಾವೇರಿ ನಿವಾಸದಲ್ಲಿ ಮುಂದಿನ ನಡೆ ಬಗ್ಗೆ ಅಂತಿಮ ಚರ್ಚೆ, ಸಮಾಲೋಚನೆ ಮಾಡಿ ಮಧ್ಯಾಹ್ನ 3 ಗಂಟೆ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆಯಿದೆ. ರಾಜ್ಯಪಾಲರ ಭೇಟಿ ಮಾಡುವವರೆಗೂ ಹೈಕಮಾಂಡ್ ಸಂದೇಶಕ್ಕಾಗಿ ಸಿಎಂ ಕಾಯಲಿದ್ದಾರೆ.

The post ಇಂದು ಕ್ಲೈಮ್ಯಾಕ್ಸ್ – ಸಿಎಂ ಬಿಎಸ್‍ವೈ ಕಾರ್ಯಕ್ರಮಗಳು ಏನು? appeared first on Public TV.

Source: publictv.in

Source link