ಬಿಜೆಪಿ ಅಧಿಕಾರಕ್ಕೆ ಬಂದು ಇವತ್ತಿಗೆ 2 ವರ್ಷ -ಒಂದ್ಕಡೆ ಸಾಧನಾ ಸಂಭ್ರಮ, ಮತ್ತೊಂದ್ಕಡೆ ಟೆನ್ಶನ್

ಬಿಜೆಪಿ ಅಧಿಕಾರಕ್ಕೆ ಬಂದು ಇವತ್ತಿಗೆ 2 ವರ್ಷ -ಒಂದ್ಕಡೆ ಸಾಧನಾ ಸಂಭ್ರಮ, ಮತ್ತೊಂದ್ಕಡೆ ಟೆನ್ಶನ್

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಇವತ್ತಿಗೆ 2 ವರ್ಷ ಪೂರೈಸಿದೆ. ನಾಯಕತ್ವ ಬದಲಾವಣೆ ಬಿಕ್ಕಟ್ಟು ನಡುವೆಯೇ ಬಿಎಸ್​ವೈ ಸರ್ಕಾರದ ವತಿಯಿಂದ ಇಂದು ಸಾಧನಾ ಸಮಾವೇಶ ಆಯೋಜನೆ ಆಗಿದೆ.

ನೆರೆ ಹಾಗೂ ಕೊರೊನಾ ಹೀಗೆ ಸಾಲು ಸವಾಲುಗಳ ಮಧ್ಯೆ ಸರ್ಕಾರ 2 ವರ್ಷ ಪೂರೈಸಿದ್ದು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಸಾಧನ ಸಮಾವೇಶದ ಕಾರ್ಯಕ್ರಮಕ್ಕೆ ವಿಪಕ್ಷದವರನ್ನೂ ಆಹ್ವಾನಿಸಲಾಗಿದೆ. ಅಲ್ಲದೆ ಈ ಸಮಾವೇಶದ ಬಳಿಕವೇ ಬದಲಾವಣೆಯ ಚಿತ್ರಣ ತಿಳಿಯಲಿದೆ. ಹಾಗಾಗಿ ಎಲ್ಲರ ಚಿತ್ತ, ಈ ಸಮಾವೇಶದ ಮೇಲೆ ನೆಟ್ಟಿದೆ.

blank

ಸಮಾವೇಶದಲ್ಲಿ ತಮ್ಮ ಸಾಧನೆಗಳನ್ನ ಹೇಳಿಕೊಂಡು ನಿರ್ಗಮನದತ್ತ ಸಿಎಂ ಹೆಜ್ಜೆ ಹಾಕ್ತಾರ ಅನ್ನೋ ಕುತೂಹಲ ಮನೆ ಮಾಡಿದೆ. ಇಡೀ ರಾಜ್ಯದ ವಿದ್ಯಮಾನಗಳು ಬಿಜೆಪಿ ಹೈಕಮಾಂಡ್​​ನತ್ತ ಚಿತ್ತ ನೆಟ್ಟು ಕುಳಿತಿವೆ. ವರಿಷ್ಠರ ಅದೊಂದು ಸಂದೇಶಕ್ಕಾಗಿ ಬಕಪಕ್ಷಿಯಂತೆ ಕಾಯಲಾಗ್ತಿದೆ. ಯಡಿಯೂರಪ್ಪ ಕೂಡಾ ಅದೇ ಸಂದೇಶಕ್ಕಾಗಿ ಕಾಯ್ತಿದ್ದಾರೆ. ಆದ್ರೆ ಹೈಕಮಾಂಡ್ ಸಂದೇಶ ಸಸ್ಪೆನ್ಸ್ ಮಾತ್ರ ಹಾಗೇ ಇದೆ. ಹೈಕಮಾಂಡ್ ಸಂದೇಶ ಏನಾಗಿರಲಿದೆ ಅನ್ನೋದು ಸೀಕ್ರೆಟ್ ಆಗಿಯೇ ಉಳಿದಿದೆ. ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡೋಕೆ ರೆಡಿಯಾಗಿದ್ದೀನಿ ಅಂತ ಹೇಳಿದ್ರೂ ಹೈಕಮಾಂಡ್ ಸಂದೇಶ ಮಾತ್ರ ನಿಗೂಢವಾಗಿದೆ. ಹೀಗಾಗಿ ಮಧ್ಯಾಹ್ನದೊತ್ತಿಗೆ ಸ್ಪಷ್ಟ ಚಿತ್ರ ಹೊರ ಬೀಳುವ ಸಾಧ್ಯತೆ ಇದೆ.

blank

ಉಳಿದಂತೆ ಸಾಧನ ಸಮಾವೇಶದಲ್ಲಿ ಕಳೆದ ಎರಡು ವರ್ಷದಲ್ಲಿ ಬಿಜೆಪಿ ಮಾಡಿರುವ ಸಾಧನೆಗಳ ಕಿರುಹೊತ್ತಿಗೆ ಬಿಡುಗಡೆ. ಕಳೆದೆರಡು ವರ್ಷಗಳಲ್ಲಿ ಎದುರಿಸಿದ ಸವಾಲುಗಳು, ಮುಂದೆ ಅಭಿವೃದ್ಧಿ ಪಥದತ್ತ ರಾಜ್ಯವನ್ನು ಕೊಂಡ್ಯೊಯ್ಯಲು ಹಾಕಿಕೊಂಡಿರುವ ರೂಪುರೇಷೆ ಸೇರಿದಂತೆ ಹಲವು ವಿಚಾರಗಳನ್ನು ಕಿರುಹೊತ್ತಿಗೆ ಒಳಗೊಂಡಿದ್ದು, ಕೋವಿಡ್-19 ಮೊದಲ ಆಲೆ ಹಾಗೂ ಎರಡನೇ ಆಲೆಯನ್ನು ಎದುರಿಸಿದ ರೀತಿ, ಮೂರ‌ನೇ ಆಲೆಯ ಪೂರ್ವಸಿದ್ಧತೆ. ಲಸಿಕೆ ಅಭಿಯಾನ, ವಿಷನ್ ಬೆಂಗಳೂರು – 2022, ಪ್ರವಾಹ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಕಿರುಹೊತ್ತಿಗೆಯಲ್ಲಿ ಮಾಹಿತಿ ನೀಡಲಾಗುತ್ತದೆ.

The post ಬಿಜೆಪಿ ಅಧಿಕಾರಕ್ಕೆ ಬಂದು ಇವತ್ತಿಗೆ 2 ವರ್ಷ -ಒಂದ್ಕಡೆ ಸಾಧನಾ ಸಂಭ್ರಮ, ಮತ್ತೊಂದ್ಕಡೆ ಟೆನ್ಶನ್ appeared first on News First Kannada.

Source: newsfirstlive.com

Source link