ಭುವಿಗೆ ವರವಾಗಲಿಲ್ಲ ಇಂಜುರಿ ರಿಪ್ಲೇಸ್​ಮೆಂಟ್ -ಮುಗೀತಾ ಭುವನೇಶ್ವರ್ ಟೆಸ್ಟ್ ಕರಿಯರ್?

ಭುವಿಗೆ ವರವಾಗಲಿಲ್ಲ ಇಂಜುರಿ ರಿಪ್ಲೇಸ್​ಮೆಂಟ್ -ಮುಗೀತಾ ಭುವನೇಶ್ವರ್ ಟೆಸ್ಟ್ ಕರಿಯರ್?

ಇಂಗ್ಲೆಂಡ್​​ನಲ್ಲಿ ಇಂಜುರಿ ಟೀಮ್​ ಇಂಡಿಯಾವನ್ನ ಭಾದಿಸಿದ ಬೆನ್ನಲ್ಲೇ, ಭುವನೇಶ್ವರ್ ಕುಮಾರ್​​ ಇಂಗ್ಲೆಂಡ್ ಪ್ಲೈಟ್​ ಏರ್ತಾರೆ ಎಂದೇ ಹೇಳಲಾಗ್ತಿತ್ತು. ಅದ್ರೆ, ಈ ವಿಚಾರದಲ್ಲಿ ಬಿಸಿಸಿಐ ಸ್ವಿಂಗ್ ಮಾಸ್ಟರ್​ಗೆ ಶಾಕ್ ನೀಡಿದೆ. ಇದು ಒಂದೆಡೆ ಟೀಮ್ ಇಂಡಿಯಾಕ್ಕೆ ಹಿನ್ನಡೆಯ ಜೊತೆಗೆ ಭುವಿ ಟೆಸ್ಟ್​ ಕರಿಯರ್ ಅನ್ನೋ​ ಅಂತತ್ರಕ್ಕೆ ಸಿಲುಕಿಸುವಂತೆ ಮಾಡಿದೆ.

ಕಳೆದೆರಡು ದಿನಗಳಿಂದ ಕ್ರಿಕೆಟ್​ ವಲಯದಲ್ಲಿ ಟೀಮ್ ಇಂಡಿಯಾದ ಇಂಜುರಿ ರಿಪ್ಲೇಸ್​ ಮೆಂಟ್​​ನದ್ದೇ ಚರ್ಚೆ.. ಯಾರ ಸ್ಥಾನಕ್ಕೆ ಯಾರಿಗೆ ಟಿಕೆಟ್​ ಸಿಗುತ್ತೆ..? ಇಂಗ್ಲೀಷ್ ಕಂಡೀಷನ್ಸ್​ ಯಾರು ಬೆಸ್ಟ್​..? ಎಂಬಿತ್ಯಾದಿ ಚರ್ಚೆಗಳೂ ಜೋರಾಗಿ ನಡೀತಿದ್ವು. ಈ ಚರ್ಚೆಯಲ್ಲಿ ಹೆಚ್ಚು ಸದ್ದು ಮಾಡಿದ್ದು, ಸ್ವಿಂಗ್​ ಮಾಸ್ಟರ್​ ಭುವನೇಶ್ವರ್ ಕುಮಾರ್ ಹೆಸರು..!

blank

ಹೌದು, ಇಂಗ್ಲೆಂಡ್ ಪ್ರವಾಸಕ್ಕೆ ತಂಡ ಪ್ರಕಟಿಸುವ ಮುಂಚೆಯಿಂದ ಚರ್ಚೆಯಲ್ಲಿದ್ದ ಹೆಸರು ಭುವನೇಶ್ವರ್ ಕುಮಾರ್​​ದು.. ಇದೀಗ ಇಂಜುರಿ ಬಳಿಕ ಬದಲಿ ಆಟಗಾರರ ಕೋಟಾದಲ್ಲಾದ್ರೂ ಭುವಿಗೆ ಸ್ಥಾನ ಫಿಕ್ಸ್​ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದ್ರೆ, ಈ ನಿರೀಕ್ಷೆ ಹುಸಿಯಾಗಲಿದೆ ಅನ್ನೋದು ಬಿಸಿಸಿಐ ಮೂಲದ ಮಾಹಿತಿಯಾಗಿದೆ. ಇದು ಭುವನೇಶ್ವರ್ ಕುಮಾರ್ ಟೆಸ್ಟ್​ ಕ್ರಿಕೆಟ್ ಭವಿಷ್ಯಕ್ಕೆ ಕುತ್ತನ್ನೂ ತಂದಿದೆ.

ಇಂಗ್ಲೆಂಡ್​​ನಲ್ಲಿ ಭುವಿ ಪ್ರದರ್ಶನ
ಪಂದ್ಯ 05
ರನ್ 247
ವಿಕೆಟ್ 19
ಬೆಸ್ಟ್ 6/82

ಇಂಗ್ಲೆಂಡ್​ಗೆ ಹಾರಲ್ಲ ಸ್ವಿಂಗ್ ಮಾಸ್ಟರ್ ಭುವನೇಶ್ವರ್..!
ಟಿ20 ವಿಶ್ವಕಪ್​ ಬಳಿಕವೇ ನಿರ್ಧಾರವಾಗಲಿದೆ ಟೆಸ್ಟ್ ಕರಿಯರ್..!

ಯೆಸ್​, ಭುವನೇಶ್ವರ್​ ಕುಮಾರ್​ ಟೆಸ್ಟ್ ಭವಿಷ್ಯದ​​ ಬಗ್ಗೆ ಸುಳಿವು ನೀಡಿರುವ ಬಿಸಿಸಿಐ, ಭುವಿ ಟೆಸ್ಟ್ ಕರಿಯರ್​​ ಏನಿದ್ದರೂ ಟಿ20 ವಿಶ್ವಕಪ್​ ಬಳಿವೇ ಅಂತಿದೆ. ಅಷ್ಟೇ ಅಲ್ಲ.! ಮೂರ್ನಾಲ್ಕು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಆಡದ ಭುವಿಗೆ ಮತ್ತೆ ಟಿಕೆಟ್​ ಬೇಕಂದ್ರೆ, ಮಸ್ಟ್​ ಆ್ಯಂಡ್​ ಶುಡ್​ ಪ್ರಥಮ ದರ್ಜೆ ಪಂದ್ಯಗಳನ್ನ ಆಡಬೇಕಂತೆ. ಆ ಫಿಟ್​​ನೆಸ್​​​ನ ಆಧಾರದಲ್ಲಿ ಡಿಸೆಂಬರ್​​ನಲ್ಲಿ ನಡೆಯೋ ಸೌತ್ ಆಫ್ರಿಕಾ ವಿರುದ್ಧದ ಭುವನೇಶ್ವರ್​ಗೆ ಅವಕಾಶ ನೀಡೋದು ಬಿಸಿಸಿಐ ಪ್ಲಾನ್​.

blank

ಟೆಸ್ಟ್​ ಮಾದರಿಯಲ್ಲಿ ಭುವನೇಶ್ವರ್​
ಇನ್ನಿಂಗ್ಸ್​ 37
ವಿಕೆಟ್​​ 63
ಬೆಸ್ಟ್​​ 8/96
ಎಕಾನಮಿ 2.94

ಭುವಿ ಟೆಸ್ಟ್ ಕರಿಯರ್​ಗೆ ಮುಳ್ಳಾಗ್ತಿದೆಯಾ ಬಿಸಿಸಿಐ.?
ಹೌದು, ಇಂಗ್ಲೆಂಡ್ ಕಂಡೀಷನ್ಸ್​ನಲ್ಲಿ ಭುವನೇಶ್ವರ್, ಬೆಸ್ಟ್ ಚಾಯ್ಸ್ ಎಂಬುವುದರಲ್ಲಿ ಎರಡು ಮಾತಿಲ್ಲ. ತವರಿನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಸರಣಿ ಇದೀಗ ಲಂಕಾ ಪ್ರವಾಸದ ಎರಡರಲ್ಲೂ ಡಿಸೇಂಟ್​ ಸ್ಪೆಲ್​ ಹಾಕಿ ತಮ್ಮ ಫಿಟ್​​ನೆಸ್​ ಅನ್ನೋ ಭುವಿ ನಿರೂಪಿಸಿದ್ದಾರೆ. ಆದ್ರೂ, ಬಿಸಿಸಿಐ ಇಂಗ್ಲೆಂಡ್​ಗೆ ಟಿಕೆಟ್​ ನೀಡಲು ಹಿಂದೇಟು ಹಾಕ್ತಿದೆ. ಬಿಸಿಸಿಐನ ಈ ಕ್ರಮ ಇಂಗ್ಲೆಂಡ್​​ನಲ್ಲಿರೋ ಟೀಮ್ ಇಂಡಿಯಾಗೆ ಹಿನ್ನಡೆಯಾಗೋದ್ರೊಂದಿಗೆ, ಭುವನೇಶ್ವರ್ ಕುಮಾರ್ ಟೆಸ್ಟ್ ಕರಿಯರ್​ಗೂ ಮುಳುವಾಗಲಿದೆ. ಹೀಗೆ ಅವಕಾಶದ ಕೊರತೆ ಎದುರಾದ್ರೆ, ಪೈಪೋಟಿಯಯಲ್ಲಿ 31ರ ಭುವಿ ಕಳೆದುಹೋದ್ರೂ ಅಚ್ಚರಿಯಿಲ್ಲ.

The post ಭುವಿಗೆ ವರವಾಗಲಿಲ್ಲ ಇಂಜುರಿ ರಿಪ್ಲೇಸ್​ಮೆಂಟ್ -ಮುಗೀತಾ ಭುವನೇಶ್ವರ್ ಟೆಸ್ಟ್ ಕರಿಯರ್? appeared first on News First Kannada.

Source: newsfirstlive.com

Source link