ನಾಯಕತ್ವ ಬದಲಾವಣೆ; ನನಗೂ ಗೊಂದಲ ಇದೆ, ನಾಯಕರೇ ನಿರ್ಧಾರ ಮಾಡ್ತಾರೆ -ಈಶ್ವರಪ್ಪ

ನಾಯಕತ್ವ ಬದಲಾವಣೆ; ನನಗೂ ಗೊಂದಲ ಇದೆ, ನಾಯಕರೇ ನಿರ್ಧಾರ ಮಾಡ್ತಾರೆ -ಈಶ್ವರಪ್ಪ

ಬೆಂಗಳೂರು: ಇವತ್ತಿಗೆ ಬಿಜೆಪಿ ಸರ್ಕಾರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದು 2 ವರ್ಷದ ಆಗಿದೆ. ಜನರು ಕಳೆದ 2 ವರ್ಷದಲ್ಲಿ ಆಗಿರುವ ಅಭಿವೃದ್ಧಿಯನ್ನು ಗಮನಿಸಬೇಕು. ಎರಡೂ ವರ್ಷದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ನಮ್ಮ ಸರ್ಕಾರ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ತಿಳಿಸಿದ್ದಾರೆ.

ಸಿಎಂ ನಿವಾಸ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸರ್ಕಾರದಲ್ಲಿ ಸಣ್ಣ ಪುಟ್ಟ ಗೊದ್ದಲ ಇದೆ ಎಂಬುವುದನ್ನು ನಾವು ಒಪ್ಪುತ್ತೇನೆ. ಇದರ ಬಗ್ಗೆ ಸಿಎಂ ಬಿಎಸ್​​ವೈ ಹಾಗೂ ರಾಷ್ಟ್ರೀಯ ಹೈಕಮಾಂಡ್​ ನಾಯಕರು ಸೇರಿ ಒಟ್ಟಿಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಅವರಿಬ್ಬರಿಗೆ ಮಾತ್ರ ಗೊತ್ತು. ಏನು ನಿರ್ಧಾರ ತೆಗೆದುಕೊಳ್ತಾರೆ ಎನ್ನುವುದು ಅವರಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ರಾಜ್ಯದ ಜನರಿಗೆ ಮಾತ್ರ ಅಲ್ಲ ನನಗೂ ಗೊಂದಲ ಇದೆ. ಇದರ ಬಗ್ಗೆ ಇವತ್ತೇ ಚರ್ಚೆ ಮಾಡ್ತಾರಾ ಇಲ್ಲವಾ ಎನ್ನುವುದು ನನಗೂ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

The post ನಾಯಕತ್ವ ಬದಲಾವಣೆ; ನನಗೂ ಗೊಂದಲ ಇದೆ, ನಾಯಕರೇ ನಿರ್ಧಾರ ಮಾಡ್ತಾರೆ -ಈಶ್ವರಪ್ಪ appeared first on News First Kannada.

Source: newsfirstlive.com

Source link