ಇಂಗ್ಲೆಂಡ್​ ಟೆಸ್ಟ್​ಗೂ ಮುನ್ನ ಟೆನ್ಶನ್ ಫ್ರೀ -ರಾಹುಲ್, ಜಡ್ಡುಗೆ ವರವಾಗುತ್ತಾ ಕೌಂಟಿ ವಿರುದ್ಧದ ಪರ್ಫಾಮೆನ್ಸ್?

ಇಂಗ್ಲೆಂಡ್​ ಟೆಸ್ಟ್​ಗೂ ಮುನ್ನ ಟೆನ್ಶನ್ ಫ್ರೀ -ರಾಹುಲ್, ಜಡ್ಡುಗೆ ವರವಾಗುತ್ತಾ ಕೌಂಟಿ ವಿರುದ್ಧದ ಪರ್ಫಾಮೆನ್ಸ್?

ಒಂದೆಡೆ ಬ್ಯಾಕ್ ಟು ಬ್ಯಾಕ್ ಇಂಜುರಿ ಟೀಮ್ ಇಂಡಿಯಾವನ್ನ ಆತಂಕಕ್ಕೆ ದೂಡುತ್ತಿದ್ರೆ, ಮತ್ತೊಂದೆಡೆ ಕೌಂಟಿ ಸೆಲೆಕ್ಟ್ ಇಲೆವೆನ್​ ವಿರುದ್ಧದ ಕೆಲ ಆಟಗಾರರು ನೀಡಿರುವ ಪ್ರದರ್ಶನದಿಂದ ತಂಡ ನಿಟ್ಟುಸಿರು ಬಿಡುವಂತೆ ಮಾಡಿದೆ. ಅಭ್ಯಾಸ ಪಂದ್ಯದಲ್ಲಿ ಯಾರೆಲ್ಲಾ ಪಾಸ್ ಆಗಿದ್ದಾರೆ.

blank

ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿ ಹತ್ತಿರವಾಗ್ತಿದ್ರೆ. ಇತ್ತ ಟೀಮ್ ಇಂಡಿಯಾದಲ್ಲಿ ಗಾಯಾಳುಗಳ ಪಟ್ಟಿ ಬೆಳೆಯುತ್ತಾ ಸಾಗ್ತಿದೆ. ಇದು ಸದ್ಯ ಟೀಮ್ ಇಂಡಿಯಾಕ್ಕೆ ಆರಂಭಿಕ ಹಿನ್ನಡೆಯಂತಾನೇ ಪರಿಗಣಿಸಿದರೂ, ಕೆಲ ಆಟಗಾರರು ಆಭ್ಯಾಸ ಪಂದ್ಯದಲ್ಲಿ ನೀಡಿದ ಪ್ರದರ್ಶನ ಟೀಮ್ ಮ್ಯಾನೇಜ್​​ಮೆಂಟ್​ ರಿಲ್ಯಾಕ್ಸ್​ಗೆ ಜಾರುವಂತೆ ಮಾಡಿದೆ.

ಕೆ.ಎಲ್.ರಾಹುಲ್, ಜಡೇಜಾ ಸೂಪರ್ ಶೋ..!
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸ್ಥಾನ ಗಿಟ್ಟಿಸಲು ರಾಹುಲ್​​ಗೆ ಅಭ್ಯಾಸ ಪಂದ್ಯದ ವೇದಿಕೆ ಮಹತ್ವದ್ದಾಗಿತ್ತು. ಇದು ರಾಹುಲ್​ಗೆ ಮಾತ್ರವಲ್ಲ. ಟೀಮ್ ಇಂಡಿಯಾಗೂ ಮುಖ್ಯವಾಗಿತ್ತು. ಯಾಕಂದ್ರೆ ಮಧ್ಯಮ ಕ್ರಮಾಂಕದಲ್ಲಿನ ಅಸ್ಥಿರ ಪ್ರದರ್ಶನ, ಇಂಗ್ಲೆಂಡ್ ವಿರುದ್ಧ ಕಾಡದಂತೆ ನೋಡಿಕೊಳ್ಳಬೇಕಿತ್ತು. ಇದೆಲ್ಲವನ್ನ ಮನಗಂಡಿದ್ದ ಕನ್ನಡಿಗ ರಾಹುಲ್, ಶತಕ ಸಿಡಿಸಿ ಮಿಂಚಿದ್ದಾರೆ.

blank

ರಾಹುಲ್​ಗೆ ಮಾತ್ರವಲ್ಲ, ಇಂಗ್ಲೆಂಡ್​​​​​​​ ಕಂಡೀಷನ್ಸ್​ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು, ಜಡೇಜಾಗೂ ಸ್ಪಲ್ಪ ಕಷ್ಟವೇ ಇತ್ತು. ಆದ್ರೀಗ ರಿಯಲ್ ಟೆಸ್ಟ್​ಗೂ ಮುನ್ನ ನಡೆದ ಪರೀಕ್ಷೆಯಲ್ಲಿ ಕ್ರಮವಾಗಿ 75 ಹಾಗೂ 51 ರನ್​ ಸಿಡಿಸಿ, ರಿಯಲ್ ಟೆಸ್ಟ್​ಗೆ ರೆಡಿ ಅಂತಿದ್ದಾರೆ.

ಭರವಸೆ ಮೂಡಿಸಿದ ಅಗರ್ವಾಲ್, ವಿಹಾರಿ, ಉಮೇಶ್!
ಗಿಲ್ ಇಂಜುರಿಯಿಂದ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲು ರೆಡಿಯಾಗಿರುವ ಮಯಾಂಕ್, ಅಭ್ಯಾಸ ಪಂದ್ಯದಲ್ಲಿ ಗಮನ ಸೆಳೆದಿದ್ದಾರೆ. ಇನ್ನು ಕಿವೀಸ್ ವಿರುದ್ಧ ನಡೆದ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಬೆಂಚ್ ಕಾದಿದ್ದ ಹನುಮ ವಿಹಾರಿ, ಮಧ್ಯಮ ಕ್ರಮಾಂಕದ ಜವಾಬ್ದಾರಿ ಹೊರಲು ಸಜ್ಜಾಗಿ ನಿಂತಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಉಮೇಶ್​ ಯಾದವ್ 3 ವಿಕೆಟ್, ಸಿರಾಜ್ 2 ವಿಕೆಟ್ ಕಬಳಿಸಿ ಮಿಂಚಿದರೆ, ಬೂಮ್ರಾ ವಿಕೆಟ್​ಗಾಗಿ ಪರದಾಟ ನಡೆಸಿದ್ದಾರೆ. ಬ್ಯಾಟಿಂಗ್​​ನಲ್ಲಿ ಹಿಟ್​ಮ್ಯಾನ್ ರೋಹಿತ್​​​​​, ಪೂಜಾರ ವೈಫಲ್ಯ ತುಸು ಚಿಂತೆಗೀಡು ಮಾಡಿದೆ. ಒಟ್ಟಿನಲ್ಲಿ ಟೆಸ್ಟ್ ಸರಣಿಗೂ ಮುನ್ನ ನಡೆದ ಆಟಗಾರರ ಸತ್ವಪರೀಕ್ಷೆಯಲ್ಲಿ, ಕೆಲ ಆಟಗಾರರ ಪ್ರದರ್ಶನ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ರೆ, ಇನ್ನೂ ಕೆಲವರು ಫಾರ್ಮ್​ಗೆ ಮರಳಲು ಪರದಾಟ ನಡೆಸ್ತಿರೋದಂತೂ ಸುಳ್ಳಲ್ಲ.

The post ಇಂಗ್ಲೆಂಡ್​ ಟೆಸ್ಟ್​ಗೂ ಮುನ್ನ ಟೆನ್ಶನ್ ಫ್ರೀ -ರಾಹುಲ್, ಜಡ್ಡುಗೆ ವರವಾಗುತ್ತಾ ಕೌಂಟಿ ವಿರುದ್ಧದ ಪರ್ಫಾಮೆನ್ಸ್? appeared first on News First Kannada.

Source: newsfirstlive.com

Source link