ನನ್ನ ಮದುವೆ ಹಾಳು ಮಾಡೋದಕ್ಕೆ ಶುಭಾನೇ ಸಾಕು: ಮಂಜು

ಬಿಗ್‍ಬಾಸ್ ಮನೆಯಲ್ಲಿ ಮಂಜು ಮದುವೆ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಮದುವೆ ಬಗ್ಗೆ ಸಾಕಷ್ಟು ಕನಸು, ಆಸೆಗಳನ್ನು ಹೊಂದಿರುವ ಮಂಜು ಮದುವೆಯಾಗಲು ತಯಾರಾಗಿದ್ದರೆ. ಆದರೆ ನನ್ನ ಮದುವೆಯನ್ನು ಶುಭಾನೇ ಕೇಡಿಸಿಬಿಡುತ್ತಾರೆ ಎಂದು ಸುದೀಪ್ ಜೊತೆ ಮಂಜು ಹೇಳಿಕೊಂಡಿದ್ದಾರೆ.

ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಮಂಜು ನಾನು ಹೆಣ್ಣು ನೋಡವ ಶಾಸ್ತ್ರಕ್ಕೆ ಯಾರನ್ನು ಕರೆದುಕೊಂಡು ಹೋದರೂ ಶುಭಾ ಪೂಂಜಾರನ್ನು ಮಾತ್ರ ಕರೆದುಕೊಂಡು ಹೋಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಸುದೀಪ್ ಕಾರಣವೇನು ಎಂದಾಗ ನಾನು ಹೆಣ್ಣು ನೋಡವ ಶಾಸ್ತ್ರಕ್ಕೆ ಶುಭಾ ಕರೆದುಕೊಂಡು ಹೋದರೆ ಇವರೇ ಹಾಳು ಮಾಡಿಬಿಡುತ್ತಾರೆ.

ಹುಡುಗಿ ಮುಂದೆ ಬೇಡ ಹುಡುಗ ಸರಿ ಇಲ್ಲ. ಡಬ್ಬ ನನ್ನ ಮಗ, ಚಂಪೂ, ಹಲ್ಲುಬ್ಬ, ತುರೆಮಣೆ, ನೀನೇನೋ ಒಳ್ಳೆ ಚಿಂಪಾಂಜಿ ತರ ಇದ್ಯಾ? ನೀನು ಯಾವ ಸೀಮೆ ಅದೋ ಅಂತಾರೆ. ಇಷ್ಟು ಹುಡುಗಿ ಮುಂದೆ ಹೇಳಿದರೆ ಸಾಕು ಹುಡುಗಿ ರಿಜೆಕ್ಟ್ ಮಾಡಿ ಬಿಡುತ್ತಾಳೆ. ಇದರ ಬದಲಿಗೆ ಹುಡುಗ ಚೆನ್ನಾಗಿದ್ದಾನೆ ಎಂದರೆ ಒಕೆ. ಆದರೆ ಇವನೊಬ್ಬ ದರಿದ್ರಾನನ್ನ ಮಗ, ಇವನು ಸ್ನಾನ ಮಾಡಲ್ಲ, ಹಲ್ಲುಜ್ಜಲ್ಲ, ಸೊಟ್ಟ ನನ್ನ ಮಗ ಅಂತ ಏನೇನೋ ಬೈತಾರೆ ಎಂದು ಮಂಜು ಆರೋಪಿಸುತ್ತಾರೆ.

blank

ಈ ವೇಳೆ ಸುದೀಪ್ ಹುಡುಗಿ ಕೂಡ ನಾನು ಹಲ್ಲು ಹುಜ್ಜುವುದಿಲ್ಲ ಎಂದರೆ ಹೇಗೆ ಇರುತ್ತದೆ ಒಮ್ಮೆ ನೆನಪಿಸಿಕೊಳ್ಳಿ. ಹಾಗೇ ಹೇಳಿದ ತಕ್ಷಣ ಅಲ್ಲಿಂದ ಎದ್ದು ಹೋಡಿ ಹೋಗುವವರೇ ಮೊದಲು ನೀವು ಮಂಜು ಅವರೇ ಎಂದು ಅಣುಕಿಸುತ್ತಾರೆ. ಇನ್ನೂ ಚಕ್ರವರ್ತಿಯವರು ಬರುತ್ತೀನಿ ಅಂದ್ರು ಅವರನ್ನು ಬೇಡ ಅಂದ್ರಿ ಯಾಕೆ ಎಂದು ಕೇಳುತ್ತಾರೆ.

blank

ಆಗ ಮಂಜು ಅವರಿಗೂ ನನಗೂ ಪ್ರೀತಿ ವಿಶ್ವಾಸ ಜಾಸ್ತಿ ಇದೆ. ಹಾಗಾಗಿ ಅವರನ್ನು ಡೈರೆಕ್ಟ್ ಮದುವೆಗೆ ಬನ್ನಿ ಎಂದು ಹೇಳಿದ್ದೇನೆ ಎನ್ನುತ್ತಾರೆ. ಈ ವೇಳೆ ಸುದೀಪ್ ಸೆರಿದಂತೆ ಮನೆಮಂದಿಯೆಲ್ಲಾ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇದನ್ನೂ ಓದಿ : ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್

The post ನನ್ನ ಮದುವೆ ಹಾಳು ಮಾಡೋದಕ್ಕೆ ಶುಭಾನೇ ಸಾಕು: ಮಂಜು appeared first on Public TV.

Source: publictv.in

Source link