ಬಿಎಸ್​ವೈ ಬದಲಾವಣೆ ವಿಚಾರಕ್ಕೆ ಇಂದೇ ಕ್ಲೈಮ್ಯಾಕ್ಸ್ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್

ಬಿಎಸ್​ವೈ ಬದಲಾವಣೆ ವಿಚಾರಕ್ಕೆ ಇಂದೇ ಕ್ಲೈಮ್ಯಾಕ್ಸ್ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್

01. ಬಿಎಸ್​ವೈ ಬದಲಾವಣೆ ವಿಚಾರಕ್ಕೆ ಇಂದೇ ಕ್ಲೈಮ್ಯಾಕ್ಸ್

blank

ಬಿಎಸ್​ವೈ ಬದಲಾವಣೆಗೆ ವಿಚಾರಕ್ಕೆ ಇಂದೇ ಕ್ಲೈಮ್ಯಾಕ್ಸ್. ಇಡೀ ರಾಜ್ಯದ ವಿದ್ಯಮಾನಗಳು ಬಿಜೆಪಿ ಹೈಕಮಾಂಡ್​​ನತ್ತ ಚಿತ್ತ ನೆಟ್ಟು ಕುಳಿತಿವೆ. ವರಿಷ್ಠರ ಅದೊಂದು ಸಂದೇಶಕ್ಕಾಗಿ ಬಕಪಕ್ಷಿಯಂತೆ ಕಾಯಲಾಗ್ತಿದೆ.. ಯಡಿಯೂರಪ್ಪ ಕೂಡಾ ಅದೇ ಸಂದೇಶಕ್ಕಾಗಿ ಕಾಯ್ತಿದ್ದಾರೆ.. ಆದ್ರೆ ಹೈಕಮಾಂಡ್ ಸಂದೇಶ ಸಸ್ಪೆನ್ಸ್ ಮಾತ್ರ ಹಾಗೇ ಇದೆ. ಹೈಕಮಾಂಡ್ ಸಂದೇಶ ಏನಾಗಿರಲಿದೆ ಅನ್ನೋದು ಸೀಕ್ರೆಟ್ ಆಗಿಯೇ ಉಳಿದಿದೆ. ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡೋಕೆ ರೆಡಿಯಾಗಿದ್ದೀನಿ ಅಂತ ಹೇಳಿದ್ರೂ ಹೈಕಮಾಂಡ್ ಸಂದೇಶ ಮಾತ್ರ ನಿಗೂಢವಾಗಿದೆ. ಹೀಗಾಗಿ ಮಧ್ಯಾಹ್ನದೊತ್ತಿಗೆ ಸ್ಪಷ್ಟ ಚಿತ್ರ ಹೊರ ಬೀಳಲಿದೆ.

02. ಒಂದ್ಕಡೆ 2 ವರ್ಷದ ಸಾಧನಾ ಸಂಭ್ರಮ, ಮತ್ತೊಂದ್ಕಡೆ ಟೆನ್ಶನ್

blank

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಇವತ್ತಿಗೆ 2 ವರ್ಷ ಪೂರೈಸಿದೆ.. ನಾಯಕತ್ವ ಬದಲಾವಣೆ ಬಿಕ್ಕಟ್ಟು ಮಧ್ಯೆಯೇ ಬಿಎಸ್​ವೈ ಸರ್ಕಾರದ ವತಿಯಿಂದ ಇಂದು ಸಾಧನಾ ಸಮಾವೇಶ ಆಯೋಜನೆ ಆಗಿದೆ. ನೆರೆ, ಕೊರೊನಾ ಹೀಗೆ ಸಾಲು ಸವಾಲುಗಳ ಮಧ್ಯೆ ಸರ್ಕಾರ 2 ವರ್ಷ ಪೂರೈಸಿದ್ದು, ಇವತ್ತಿನ ಕಾರ್ಯಕ್ರಮಕ್ಕೆ ವಿಪಕ್ಷದವರನ್ನೂ ಆಹ್ವಾನಿಸಲಾಗಿದೆ. ಅಲ್ಲದೆ ಈ ಸಮಾವೇಶದ ಬಳಿಕವೇ ಬದಲಾವಣೆಯ ಚಿತ್ರಣ ತಿಳಿಯಲಿದೆ. ಹಾಗಾಗಿ ಎಲ್ಲರ ಚಿತ್ತ, ಈ ಸಮಾವೇಶದ ಮೇಲೆ ನೆಟ್ಟಿದೆ.ಸಮಾವೇಶದಲ್ಲಿ ತಮ್ಮ ಸಾಧನೆಗಳನ್ನ ಹೇಳಿಕೊಂಡು ನಿರ್ಗಮನದತ್ತ ಸಿಎಂ ಹೆಜ್ಜೆ ಹಾಕ್ತಾರ ಅನ್ನೋ ಕುತೂಹಲ ಮನೆ ಮಾಡಿದೆ.

03. ಹುದ್ದೆ ಉಳಿಸಿಕೊಳ್ಳಲು ಹೈಕಮಾಂಡ್ ಕದ ತಟ್ಟಿದ ಜೊಲ್ಲೆ

blank
ಮೊಟ್ಟೆ ಹಗರಣದ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿದ ಬೆನ್ನಲ್ಲೇ ಸಚಿವೆ ಶಶಿಕಲಾ ಜೊಲ್ಲೆಗೆ ತಮ್ಮ ಮಂತ್ರಿ ಸ್ಥಾನ ಕಳೆದುಕೊಳ್ಳೋ ಭೀತಿ ಶುರುವಾಗಿದೆ. ಹೀಗಾಗಿ ದೆಹಲಿಗೆ ಹಾರಿರೋ ಜೊಲ್ಲೆ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳೋಕೆ ಎಲ್ಲಿಲ್ಲದ ಸರ್ಕಸ್ ಮಾಡ್ತಿದ್ದಾರೆ. ಪತಿ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಬ ಜೋಲ್ಲೆ ಜೊತೆ ದೆಹಲಿಯಲ್ಲಿ ಬೀಡುಬಿಟ್ಟಿರೋ ಸಚಿವೆ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ವರಿಷ್ಠರ ದುಂಬಾಲು ಬಿದ್ದಿದ್ದಾರೆ.

4. ಇಂದಿನಿಂದ ಪದವಿ ಕಾಲೇಜುಗಳು ಪುನಾರಂಭ

blank
ಕೋವಿಡ್‌ ಕಾರಣ ಮುಚ್ಚಿದ್ದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳು ಇಂದಿನಿಂದ ಪುನರಾರಂಭಗೊಳ್ಳಲಿವೆ. 3 ತಿಂಗಳ ಬಳಿಕ ಪದವಿ ಕಾಲೇಜುಗಳು ತೆರೆಯುತ್ತಿದ್ದು, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇಬ್ಬರಿಗೂ ಸಾಕಷ್ಟು ನಿಯಮಗಳನ್ನು ರೂಪಿಸಲಾಗಿದೆ. ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿರಬೇಕು. ಕಾಲೇಜ್ ಎಂಟ್ರಿಯಲ್ಲೇ ವಿದ್ಯಾರ್ಥಿಗಳ ಲಸಿಕಾ ಪ್ರಮಾಣಪತ್ರ ಪರಿಶೀಲಿಸಿ ಪ್ರವೇಶ ನೀಡಲಾಗುತ್ತದೆ. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿರಬೇಕು. ಈ ಬಗ್ಗೆ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.

05. ಧಾರಾಕಾರ ಮಳೆಗೆ ತಗ್ಗುಪ್ರದೇಶಗಳಿಗೆ ನುಗ್ಗಿದ ನೀರು

blank
ಬೆಂಗಳೂರಿನಲ್ಲಿ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ಅಬ್ಬರದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಶಾಂತಿನಗರ, ವಿಲ್ಸನ್ ಗಾರ್ಡನ್ ನಲ್ಲಿ ಮಳೆರಾಯ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಭಾರೀ ಮಳೆಯಿಂದಾಗಿ ವಿಲ್ಸನ್​​ ಗಾರ್ಡನ್​ನ 10ನೇ ಕ್ರಾಸ್​ ರಸ್ತೆ ಕೆರೆಯಂತಾಗಿದೆ. ಹೀಗಾಗಿ ಪಿಡಬ್ಲ್ಯುಡಿ ಕ್ವಾಟ್ರರ್ಸ್​ನ ತಳಮಹಡಿಯ ಮನೆಗಳಿಗೆ ನೀರು ನುಗ್ಗಿದ್ದು, ಜನ ನೀರು ಹೊರಹಾಕಲು ಹರಸಾಹಸ ಪಡುವಂತಾಯಿತು. ಭಾರೀ ಮಳೆಯಿಂದ ದೊಮ್ಮಲೂರಿನ ಗೌತಮ್ ಕಾಲೋನಿಗೂ ನೀರು ನುಗ್ಗಿದೆ.. ಮಳೆಯ ಹೊಡೆತಕ್ಕೆ ಕಾಲೋನಿಯ ಒಂದು ಮನೆಯೇ ಸಂಪೂರ್ಣವಾಗಿ ಕುಸಿದುಬಿಟ್ಟಿದೆ.

06. ಸೆಲ್ಫಿ ತೆಗೆದುಕೊಳ್ಳುವಾಗ ಗುಂಡು ಹಾರಿ ಸಾವು

blank

ಸಿಂಗಲ್ ಬ್ಯಾರಲ್ ಗನ್ ಹಿಡಿದು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಗುಂಡು ಹಾರಿ ಮಹಿಳೆ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಲಖನೌದಲ್ಲಿ ನಡೆದಿದೆ. 26 ವರ್ಷದ ನವ ವಿವಾಹಿತೆ ರಾಧಿಕಾ ಗುಪ್ತಾ, ತಮ್ಮ ಮಾವನ ಸಿಂಗಲ್ ಬ್ಯಾರಲ್ ಗನ್​ ಹಿಡಿದು ಸೆಲ್ಫಿ ತೆಗೆದುಕೊಳ್ಳುವಾಗ ಸೆಲ್ಫಿ ಕ್ಲಿಕ್ ಮಾಡುವ ಬದಲಾಗಿ ಗನ್​ನ ಟ್ರಿಗರ್ ಒತ್ತಿದ್ದಾಳೆ. ಪರಿಣಾಮ ಗುಂಡು ರಾಧಿಕಾ ಗಂಟಲು ಹೊಕ್ಕಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾಳೆ. ಸದ್ಯ ಪೊಲೀಸರು ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಅಂತ‌ ತನಿಖೆ ನಡೆಸುತ್ತಿದ್ದಾರೆ.

07. ಅಬ್ಬಾ ಅಂತೂ ‘ಬದುಕಿತು ಬಡಜೀವ’
ದೆಹಲಿಯ ಕ್ಯಾಂಟ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸುರಕ್ಷತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಪ್ರಯಾಣಿಕರೊಬ್ಬರ ಜೀವ ಉಳಿದಿದೆ. ಪ್ರಯಾಣಿಕರೊಬ್ಬರು ಆತುರದಿಂದ ಆಗಮಿಸಿ, ಚಲಿಸುವ ರೈಲು ಹತ್ತಲು ಪ್ರಯತ್ನಿಸಿದ್ದಾರೆ. ಆದ್ರೆ ಎರಡೂ ಕೈಯಲ್ಲಿ ಲಗೇಜ್​ ಇದ್ದ ಕಾರಣ ಜಾರಿ ರೈಲಿನಡಿ ಸಿಲುಕಿದ್ದಾರೆ. ತಕ್ಷಣ ಇದನ್ನು ಗಮನಿಸಿದ ಆರ್​ಪಿಎಫ್​​ ಕಾನ್ಸ್​ಟೆಬಲ್​ ರಾಜೀವ್, ರೈಲಿನಡಿ ಸಿಕ್ಕಿ ಬೀಳುತ್ತಿದ್ದ ಪ್ರಯಾಣಿಕನನ್ನು ಹಿಡಿದು ಎಳೆದಿದ್ದಾರೆ. ಈ ವೇಳೆ ಆರ್​ಪಿಎಫ್​ ಸಿಬ್ಬಂದಿ ರಾಜೀವ್ ಕೂಡ ಕೆಳಗೆ ಬಿದ್ದಿದ್ದಾರೆ. ಆದರೂ ಮತ್ತೆ ಮೇಲೆದ್ದು ಹೋಗಿ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಸಿಬ್ಬಂದಿ ತೋರಿದ ಧೈರ್ಯ ಮತ್ತು ಸಮಯ ಪ್ರಜ್ಞೆಗೆ ಪ್ರಯಾಣಿಕರು ಕೊಂಡಾಡಿದ್ದಾರೆ.

08. ಇಸ್ರೋದಿಂದ ಮತ್ತೆರಡು ಮಹತ್ವಾಕಾಂಕ್ಷಿ ಯೋಜನೆ

blank
ಗಗನಯಾತ್ರಿಗಳನ್ನು ಲೋ ಅರ್ಥ್ ಆರ್ಬಿಟ್​ಗೆ ಕೊಂಡೊಯ್ಯವ ಮೊದಲು ಎರಡು ಬಾಹ್ಯಾಕಾಶ ಯಾತ್ರೆಗಳನ್ನು ಆರಂಭಿಸುವ ಯೋಜನೆ ಇದೆ ಅಂತಾ ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ. ಗಗನಯಾತ್ರಿಗಳು ಅಂತಿಮವಾಗಿ ಬಾಹ್ಯಾಕಾಶದಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂಬ ಬಗ್ಗೆ ಅಂತಿಮ ತೀರ್ಮಾನವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ. ಭಾರತೀಯ ಗಗನಯಾತ್ರಿಗಳು ಕೇವಲ ಒಂದು ದಿನ ಬಾಹ್ಯಾಕಾಶದಲ್ಲಿ ಕಳೆಯಬಹುದು. ಗಗನಯಾತ್ರಿಗಳನ್ನು ಒಂದು ವಾರ ಬಾಹ್ಯಾಕಾಶದಲ್ಲಿ ಇಡುವ ಸಿದ್ಧತೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ ಅಂತಾ ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

09. ಬ್ರಿಟನ್​ನಲ್ಲಿ ಹೊಸ ತಳಿಯ 16 ಪ್ರಕರಣಗಳು ಪತ್ತೆ
ಬ್ರಿಟನ್​​​ನಲ್ಲಿ ಕೊರೊನಾ ವೈರಸ್ ಹೊಸ ತಳಿಯ 16 ಪ್ರಕರಣಗಳು ಪತ್ತೆಯಾಗಿವೆ. ವೈರಸ್​​ನ ಈ ತಳಿಯನ್ನು ಬಿ1.621 ಎಂದು ಗುರುತಿಸಲಾಗಿದೆ. ಈ ವೈರಸ್​ ತಳಿ ತೀವ್ರವಾಗಿ ಹರಡಲಿದೆ ಎಂಬುದಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಬ್ರಿಟನ್​ನಲ್ಲಿ ಹೊಸದಾಗಿ ಪತ್ತೆಯಾಗಿರುವ ಸಾರ್ಸ್​ನ ಕೋವಿಡ್​-2ರ ಬಿ1.621 ರೂಪಾಂತರ ತಳಿಯ ಪ್ರಕರಣಗಳು ವಿದೇಶದಿಂದ ಆಗಮಿಸಿದ ಪ್ರಯಾಣಿಕರಲ್ಲಿ ಕಂಡು ಬಂದಿದ್ದು, ಸ್ಥಳೀಯವಾಗಿ ಯಾವುದೇ ಕೇಸ್​ ದಾಖಲಾಗಿಲ್ಲ. ಕಳೆದ ಕೆಲವು ವಾರಗಳಲ್ಲಿ ಬ್ರಿಟನ್​​ನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಪತ್ತೆಯಾದರೂ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಬ್ರಿಟನ್​ನಲ್ಲಿ ಕೊರೊನಾ ವೈರಸ್​ ಪಾಸಿಟಿವಿಟಿ ರೇಟ್​ 1.2 ರಿಂದ 1.4 ರಷ್ಟಿದೆ.

10. ಶ್ರೀಲಂಕಾ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಭಾರತಕ್ಕೆ ಜಯ

blank

ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆ-20 ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ, ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಭುವನೇಶ್ವರ ಕುಮಾರ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಶ್ರೀಲಂಕಾವನ್ನ ಮಣಿಸಿದೆ. ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿಯೇ 38 ರನ್‌ಗಳಿಂದ ಭಾರತ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿತ್ತು. ಬ್ಯಾಟಿಂಗ್‌ಗೆ ಇಳಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 164 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ 18.3 ಓವರ್​ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 126 ರನ್​ ಗಳಿಸಿ ಟೀಂ ಇಂಡಿಯಾಕ್ಕೆ ಶರಣಾಯಿತು.

The post ಬಿಎಸ್​ವೈ ಬದಲಾವಣೆ ವಿಚಾರಕ್ಕೆ ಇಂದೇ ಕ್ಲೈಮ್ಯಾಕ್ಸ್ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್ appeared first on News First Kannada.

Source: newsfirstlive.com

Source link