ಒನಕೆ ಓಬವ್ವನ ಪಾತ್ರವನ್ನ ಜಯಂತಿಯಲ್ಲದೇ ಮತ್ಯಾರಿಂದ ಮಾಡಲು ಸಾಧ್ಯವಿತ್ತು..?

ಒನಕೆ ಓಬವ್ವನ ಪಾತ್ರವನ್ನ ಜಯಂತಿಯಲ್ಲದೇ ಮತ್ಯಾರಿಂದ ಮಾಡಲು ಸಾಧ್ಯವಿತ್ತು..?

ಕನ್ನಡದ ಹಿರಿಯ ನಟಿ.. ಅಭಿನಯ ಶಾರದೆ ಎಂದೇ ಜನಪ್ರಿಯರಾಗಿದ್ದ ಜಯಂತಿ ಇಂದು ಕೊನೆಯುಸಿರೆಳೆದಿದ್ದಾರೆ. ಕನ್ನಡದ 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜಯಂತಿ ಪ್ರತಿಯೊಂದು ಸಿನಿಮಾದಲ್ಲೂ ತಮ್ಮ ಪಾತ್ರಕ್ಕೆ ಜೀವ ತುಂಬುವ ಮೂಲಕ ಎಂದಿಗೂ ನೆನಪಿನಲ್ಲುಳಿಯುವ ನಟಿಯಾಗಿದ್ದಾರೆ.

ನಾಗರಹಾವು ಸಿನಿಮಾದಲ್ಲಿ ಜಯಂತಿ ಒಂದೇ ಒಂದು ಹಾಡಿನಲ್ಲಿ ಹೀಗೆ ಬಂದು ಹಾಗೆ ಹೋಗುವ ಒನಕೆ ಓಬವ್ವನ ಪಾತ್ರದಲ್ಲಿ ನಟಿಸಿದ್ದರು. ಆದರೆ ಕೆಲವೇ ನಿಮಿಷಗಳ ಆ ಪಾತ್ರ ಕನ್ನಡ ಚಿತ್ರರಂಗದಲ್ಲೇ ಮರೆಯಲಾರದ ಪಾತ್ರವಾಗಿ ಉಳಿದಿದೆ. ಒನಕೆ ಹಿಡಿದು ರೋಷಾವೇಶದಿಂದ ನಿಂತು ಕೋಟೆಗೆ ಲಗ್ಗೆಯಿಡಲು ಕೋಟೆಯೊಳಗಿಂದ ಹೊರಗೆ ಇಣುಕುತ್ತಿದ್ದ ವೈರಿಗಳನ್ನ ಒಬ್ಬೊಬ್ಬರನ್ನಾಗಿ ಹೊಡೆದುರುಳಿಸುವ ದೃಶ್ಯದಲ್ಲಿ ಜಯಂತಿ ಅವರದ್ದು ಮೇರು ನಟನೆ.

ಒನಕೆ ಓಬವ್ವನ ಪಾತ್ರಕ್ಕೆ ಜಯಂತಿಯವರಲ್ಲದೇ ಮತ್ಯಾರಿಂದಲೂ ಜೀವ ತುಂಬಲು ಸಾಧ್ಯವಾಗುತ್ತಿರಲಿಲ್ಲ ಎನ್ನುವಷ್ಟರ ಮಟ್ಟಿಗೆ ಜಯಂತಿ ಆ ಪಾತ್ರವನ್ನ ನಿರ್ವಹಿಸಿದ್ದರು.

The post ಒನಕೆ ಓಬವ್ವನ ಪಾತ್ರವನ್ನ ಜಯಂತಿಯಲ್ಲದೇ ಮತ್ಯಾರಿಂದ ಮಾಡಲು ಸಾಧ್ಯವಿತ್ತು..? appeared first on News First Kannada.

Source: newsfirstlive.com

Source link