ಆ ತೆಲುಗು ನಟ ಜಯಂತಿಗೆ ಹೊಡೆದುಬಿಟ್ಟಿದ್ದರು..- ಜಯಂತಿ ಜೊತೆಗಿನ ಒಡನಾಟ ನೆನೆಸಿಕೊಂಡ ಲಕ್ಷ್ಮೀ

ಆ ತೆಲುಗು ನಟ ಜಯಂತಿಗೆ ಹೊಡೆದುಬಿಟ್ಟಿದ್ದರು..- ಜಯಂತಿ ಜೊತೆಗಿನ ಒಡನಾಟ ನೆನೆಸಿಕೊಂಡ ಲಕ್ಷ್ಮೀ

ಜಯಂತಿ ಅವರ ಸಾವಿನ ಬಗ್ಗೆ ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ ಹಿರಿಯ ನಟಿ ಲಕ್ಷ್ಮೀ ಜಯಂತಿ ಅವರ ಜೊತೆಗಿನ ಒಡನಾಟದ ಮೆಲುಕು ಹಾಕಿದರು. ಅವರು ಅಷ್ಟಾಗಿ ಖುಷಿಯಾಗಿರಲಿಲ್ಲ.. ಒಳಗೆ ಅಗಾಧವಾದ ದುಃಖವನ್ನ ಇಟ್ಟುಕೊಂಡಿದ್ದರು.. ಹೋಗುವಾಗಲೂ ಹೇಳದೇ ಹೊರಟುಹೋದರು ಎಂದು ನಟಿ ಲಕ್ಷ್ಮೀ ಬೇಸರ ವ್ಯಕ್ತಪಡಿಸಿದರು.

ಜಯಂತಿಗೆ ತಾಳ್ಮೆ ಹೆಚ್ಚಿತ್ತು.. ಎಂದಿಗೂ ಕೋಪ ಮಾಡಿಕೊಂಡವರಲ್ಲ.. ಈ ಹಿಂದೆ ಒಂದು ಘಟನೆ ನಡೆದಿತ್ತು..  ತೆಲುಗು ಸಿನಿಮಾದ ಶೂಟಿಂಗ್ ಒಂದನ್ನ ಮುಗಿಸಿ ಅವರು ಬೆಂಗಳೂರಿಗೆ ಬರ್ಬೇಕಿತ್ತು.. ಊಟದ ವೇಳೆ ಇಬ್ಬರೂ ಮೀಟ್ ಮಾಡಿದ್ವಿ.. ಇನ್ನೊಂದು ಸಿನಿಮಾ ಶೂಟ್​ಗೆ ಹೋಗಬೇಕು.. ಹೀರೋ ಕಮ್ ಪ್ರೊಡ್ಯೂಸರ್​ಗೆ ತುಂಬಾ ಕೋಪ ಏನು ಮಾಡೋದು ಎಂದರು.. ಅದು ಕ್ಲೈಮ್ಯಾಕ್ಸ್ ಶೂಟ್ ಅಲ್ವಾ.. ಇವರಿಗೆ ಹೇಳಿ ಹೊರಡಿ ಎಂದು ಹೇಳಿದ್ದೆ.. ನಾನು ಆತನ ಹೆಸರು ಹೇಳೋದಿಲ್ಲ.. ಕೆಲವು ಹೊತ್ತಿನಲ್ಲೇ ಒಬ್ಬರು ಬಂದು ಜಯಂತಿ ಅಮ್ಮನಿಗೆ ಹೊಡೆದುಬಿಟ್ಟಿದ್ದಾರೆ ಅಂತ ನನಗೆ ಹೇಳಿದ್ರು.. ನನಗಿಂತಲೂ ಚಿಕ್ಕವಯಸ್ಸಿನವನು ಅಂತ ಜಯಂತಿ ಅಮ್ಮ ಸುಮ್ಮನಾಗಿಬಿಟ್ಟರು.. ಜಯಂತಿ ಅವರು ಆರ್ಟಿಸ್ಟ್ ಆದಾಗ ಆತ ಇನ್ನೂ ಸಿನಿಮಾಗೆ ಬಂದಿರಲೇ ಇಲ್ಲ.. ನೀನ್ಯಾಕೆ ಅವರಿಗೆ ಬೈದೆ ಅಂತ ನನಗೇ ಹೇಳಿದರು.

The post ಆ ತೆಲುಗು ನಟ ಜಯಂತಿಗೆ ಹೊಡೆದುಬಿಟ್ಟಿದ್ದರು..- ಜಯಂತಿ ಜೊತೆಗಿನ ಒಡನಾಟ ನೆನೆಸಿಕೊಂಡ ಲಕ್ಷ್ಮೀ appeared first on News First Kannada.

Source: newsfirstlive.com

Source link