ಕನ್ನಡ ಸಿನಿಮಾಗಳಿಗೆ ಮಾಡರ್ನ್ ಡ್ರೆಸ್​ಗಳ ಪರಿಚಯ ಮಾಡಿದ್ದೇ ಜಯಂತಿ

ಕನ್ನಡ ಸಿನಿಮಾಗಳಿಗೆ ಮಾಡರ್ನ್ ಡ್ರೆಸ್​ಗಳ ಪರಿಚಯ ಮಾಡಿದ್ದೇ ಜಯಂತಿ

ಕನ್ನಡ ಸಿನಿಮಾಗಳಿಗೆ ಮಾರ್ಡನ್ ಡ್ರೆಸ್ ಪರಿಚಯ ಮಾಡಿದ ಹೆಗ್ಗಳಿಕೆ ಜಯಂತಿಯವರಿಗೆ ಸೇರುತ್ತೆ. ಜೊತೆಗೆ ನಟಿಗೆ ಗ್ಲಾಮರ್ ಬೇಕು ಅನ್ನೋದು ಸಹ ಮೊದಲು ಜಯಂತಿ ಮೂಲಕವೇ ಹೊರಬಂದಿದ್ದು.

ಅವರು ಮೊದಲು ಬೋಲ್ಡ್ ಪಾತ್ರದಲ್ಲಿ ನಟಿಸಿದ್ದು 1965ರಲ್ಲಿ ತೆರೆಕಂಡ ಮಿಸ್ ಲೀಲಾವತಿ ಸಿನಿಮಾದಲ್ಲಿ. ಇದರಲ್ಲಿನ ಇವರ ಬೋಲ್ಡ್ ಪಾತ್ರ ಮತ್ತು ಸಿನಿಮಾದಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ವೆಸ್ಟರ್ನ್​ ಲುಕ್ ಉಡುಗೆಗಳಾದ ಟಿ-ಶರ್ಟ್​, ಸ್ಕರ್ಟ್​, ನೈಟಿ ಅಷ್ಟೇ ಅಲ್ಲ ಸ್ವಿಮ್ ಸೂಟ್ ಸಹ ಧರಿಸಿದ್ದರು. ಸಿನಿಮಾ ಭರ್ಜರಿ ಪ್ರದರ್ಶನವನ್ನು ಕಂಡಿತು. ಅಮೋಘ ಅಭಿನಯಕ್ಕೆ ಜಯಂತಿ ಇದೇ ಸಿನಿಮಾಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡರು. ಈ ವೇಳೆ ಮಾಹಿತಿ ಮತ್ತು ಪ್ರಸಾರ ಸಚಿವೆಯಾಗಿದ್ದ ಇಂದಿರಾ ಗಾಂಧಿ ಜಯಂತಿಯವರನ್ನು ಕರೆದು ಮುತ್ತಿಟ್ಟು ವಿಶ್ ಮಾಡಿದ್ರಂತೆ.

ಇನ್ನು, 1962ರಿಂದ 1979ರ ವರೆಗೂ ತಮಿಳು ಸಿನಿಮಾದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದ ಜಯಂತಿ ಜೆಮಿನಿ ಗಣೇಶನ್, ಎಂ.ಜಿ. ರಾಮಚಂದ್ರನ್, ಮುಹುರಮ್ ಮತ್ತು ಜಯಶಂಕರ್ ರಂತಹ ಮಹಾನ್ ದಿಗ್ಗಜರ ಜೊತೆ ನಟಿಸಿ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದ್ದರು. ಇನ್ನು ಕೆ. ಬಾಲಚಂದ್ರರ ಸಾಕಷ್ಟು ಸಿನಿಮಾಗಳಲ್ಲೂ ನಟನೆ ಮಾಡಿದ್ದಾರೆ.

The post ಕನ್ನಡ ಸಿನಿಮಾಗಳಿಗೆ ಮಾಡರ್ನ್ ಡ್ರೆಸ್​ಗಳ ಪರಿಚಯ ಮಾಡಿದ್ದೇ ಜಯಂತಿ appeared first on News First Kannada.

Source: newsfirstlive.com

Source link