ಇಹಲೋಕ ತ್ಯಜಿಸಿದ ‘ಮಿಸ್​​ ಬೆಂಗಳೂರು’ ನಟಿ ಜಯಂತಿ ವೈಯಕ್ತಿಕ ಜೀವನ ಹೇಗಿತ್ತು?

ಇಹಲೋಕ ತ್ಯಜಿಸಿದ ‘ಮಿಸ್​​ ಬೆಂಗಳೂರು’ ನಟಿ ಜಯಂತಿ ವೈಯಕ್ತಿಕ ಜೀವನ ಹೇಗಿತ್ತು?

ಬೆಂಗಳೂರು: ಅಭಿನಯ ಶಾರದೆ ಎಂದು ಖ್ಯಾತಿ ಪಡೆದಿದ್ದ ಪಂಚ ಭಾಷಾ ತಾರೆ, ಹಿರಿಯ ನಟಿ ಜಯಂತಿ ಅವರು ಇಂದು ಇಹಲೋಕವನ್ನು ತ್ಯಜಿಸಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟನರೊಂದಿಗೆ ಅಭಿನಯಿಸಿದ ಹೆಗ್ಗಳಿಕೆಯನ್ನು ಜಯಂತಿ ಅವರು ಪಡೆದುಕೊಂಡಿದ್ದರು.

ಜಯಂತಿ ಅವರ ವೈಯಕ್ತಿಕ ಜೀವನವನ್ನು ನೋಡುವುದಾದರೆ.. 1945ರ ಜನವರಿ 6 ರಂದು ಜನಿಸಿದ್ದ ಜಯಂತಿ ಅವರ ಮೂಲ ಹೆಸರು ಕಮಲ ಕುಮಾರಿ. ಚಿತ್ರರಂಗಕ್ಕೆ ಪ್ರವೇಶ ಮಾಡಿದ ಬಳಿಕ ಅವರು ಹೆಸರನ್ನು ಬದಲಿಸಿಕೊಂಡು ಜಯಂತಿ ಎಂದೇ ಪರಿಚಯವಾಗಿದ್ದರು.

ಅಂದಿನ ಬ್ರಿಟಿಷ್ ಇಂಡಿಯಾದ ಮಡ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ಈಗಿನ ಕರ್ನಾಟಕದ ಬಳ್ಳಾರಿಯಲ್ಲಿ ಬಾಲಸುಬ್ರಮಣ್ಯಂ ಹಾಗೂ ಸಂತಾನ ಲಕ್ಷ್ಮಿ ದಂಪತಿಯ ಐದು ಮಕ್ಕಳಲ್ಲಿ ಮೊದಲಯವರು. ತಂದೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಜಯಂತಿ ಅವರಿಗೆ ಇಬ್ಬರು ತಂಗಿ ಹಾಗೂ ಇಬ್ಬರು ತಮ್ಮಂದಿರಿದ್ದರು.

blank

ಜಯಂತಿಯವರ ಬಾಲ್ಯ ಅಂತಾ ಸುಖಕರವಾಗೇನೂ ಇರಲಿಲ್ಲ, ಇವರು ಚಿಕ್ಕವರಿದ್ದಾಗಲೇ ಪೋಷಕರು ದೂರಾಗಿ ಜಯಂತಿಯವರನ್ನ ಅವರ ತಾಯಿ ಮಡ್ರಾಸ್​ಗೆ ಕರೆದುಕೊಂಡು ಹೋಗ್ತಾರೆ. ಅವರ ತಾಯಿಗೆ ತಮ್ಮ ಮಗಳನ್ನ ಕ್ಲಾಸಿಕಲ್ ಡ್ಯಾನ್ಸರ್ ಮಾಡೋ ಹಂಬಲದಿಂದ ಚಂದ್ರಕಲಾ ಎಂಬುವವರ ನೃತ್ಯ ಶಾಲೆಗೆ ಸೇರ್ಪಡೆ ಮಾಡ್ತಾರೆ. ಇದೇ ಡ್ಯಾನ್ಸ್​ ಸ್ಕೂಲ್​ನಲ್ಲಿ ಇವರ ಗೆಳತಿಯಾಗಿದ್ದಿದ್ದು ಪ್ರಸಿದ್ಧ ತಮಿಳಿನ ನಟ ಮನೋರಮಾ.

ಸಿನಿಮಾ ಪ್ರಪಂಚಕ್ಕೆ ಪರಿಚಯವಾದ ಬಳಿಕ ಆಗಾಗ್ಲೇ ಮದುವೆಯಾಗಿ ನಾಲ್ಕು ಮಕ್ಕಳು ಇದ್ದ ಸಿನಿಮಾ ನಿರ್ದೇಶಕ, ನಟ ಪೆಕೆಟಿ ಶಿವರಾಂ ಅವರನ್ನು ವರಿಸಿದರು. ಆದರೆ ಇವರ ದಾಂಪತ್ಯ ಜೀವನ ಬಹಳ ಕಾಲ ಮುಂದುವರಿಯಲಿಲ್ಲ. 2006ರಲ್ಲಿ ಪೆಕೆಟಿ ಶಿವರಾಂ ಮರಣ ಹೊಂದಿದ್ದಾರೆ. ಜಯಂತಿಗೆ ಕೃಷ್ಣಕುಮಾರ್ ಎಂಬ ಪುತ್ರನಿದ್ದಾನೆ, ನಟಿ ಅನುಪ್ರಭಾಕರ್ ಮದುವೆಯಾಗಿದ್ರು. ಹತ್ತು ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದರು. ಜಯಂತಿ ಅವರು ಚಂದನ ಸಿನಿಮಾ ನಿರ್ಮಾಪಕ ಗಿರಿಬಾಬು ಅವರನ್ನು ಎರಡನೇ ಮದುವೆಯಾಗಿ ವಿಚ್ಛೇದನ ನೀಡಿದ್ದರು. ಆ ಬಳಿಕ ಕನ್ನಡ ನಟ, ತನಗಿಂತ ಕಡಿಮೆ ವಯಸ್ಸಿನ ರಾಜಶೇಖರ್ ಅವರೊಂದಿಗೆ ಮದುವೆಯಾಗಿದ್ದರೂ ಈ ಮದುವೆಯೂ ವಿಚ್ಛೇದನದೊಂದಿಗೆ ವಿಫಲವಾಗಿತ್ತು.

The post ಇಹಲೋಕ ತ್ಯಜಿಸಿದ ‘ಮಿಸ್​​ ಬೆಂಗಳೂರು’ ನಟಿ ಜಯಂತಿ ವೈಯಕ್ತಿಕ ಜೀವನ ಹೇಗಿತ್ತು? appeared first on News First Kannada.

Source: newsfirstlive.com

Source link