ಜೊಲ್ಲೆ ಮೊಟ್ಟೆ ಡೀಲ್​: ಸಚಿವೆ ಮತ್ತು ಶಾಸಕ ಪರಣ್ಣ ವಿರುದ್ಧ ಎಸಿಬಿಗೆ ದೂರು ದಾಖಲು

ಜೊಲ್ಲೆ ಮೊಟ್ಟೆ ಡೀಲ್​: ಸಚಿವೆ ಮತ್ತು ಶಾಸಕ ಪರಣ್ಣ ವಿರುದ್ಧ ಎಸಿಬಿಗೆ ದೂರು ದಾಖಲು

ಬೆಳಗಾವಿ: ಗರ್ಭಿಣಿಯರು ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ‘ಮಾತೃಪೂರ್ಣ’ ಯೋಜನೆಯಡಿಯಲ್ಲಿ ಮೊಟ್ಟೆ ವಿತರಿಸುವ ಟೆಂಡರ್​​​​ ಹಂಚಿಕೆಯಲ್ಲಿ ಕಿಕ್​​ಬ್ಯಾಕ್​ ಪಡೆಯಲು ಮುಂದಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ‘ಜೊಲ್ಲೆ ಮೊಟ್ಟೆ ಡೀಲ್’: ನ್ಯೂಸ್​ಫಸ್ಟ್ ಕಾರ್ಯಾಚರಣೆಗೆ ಮೆಚ್ಚುಗೆ.. ಸಚಿವೆಯ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ, ಸಚಿವೆ ಮತ್ತು ಶಾಸಕ ಪರಣ್ಣ ಮುನವಳ್ಳಿ ವಿರುದ್ದ ಎಸಿಬಿಗೆ ದೂರು ನೀಡಿದ್ದಾರೆ. ನ್ಯೂಸ್​ಫಸ್ಟ್​ ವರದಿ ಆಧರಿಸಿ ದೂರು ನೀಡಿರುವ ಅವರು ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಅಡಿಯಲ್ಲಿ ದೂರು ದಾಖಲೆಗೆ ಮನವಿ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವರನ್ನು ತಕ್ಷಣವೇ ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದ್ದಾರೆ.

The post ಜೊಲ್ಲೆ ಮೊಟ್ಟೆ ಡೀಲ್​: ಸಚಿವೆ ಮತ್ತು ಶಾಸಕ ಪರಣ್ಣ ವಿರುದ್ಧ ಎಸಿಬಿಗೆ ದೂರು ದಾಖಲು appeared first on News First Kannada.

Source: newsfirstlive.com

Source link