500ಕ್ಕೂ ಹೆಚ್ಚು ಕನ್ನಡ ಸಿನಿಮಾದಲ್ಲಿ ಮಿಂಚಿದ್ದ ಜಯಂತಿ- ಯಾವೆಲ್ಲಾ ಪ್ರಶಸ್ತಿ ಪಡೆದಿದ್ದರು..?

500ಕ್ಕೂ ಹೆಚ್ಚು ಕನ್ನಡ ಸಿನಿಮಾದಲ್ಲಿ ಮಿಂಚಿದ್ದ ಜಯಂತಿ- ಯಾವೆಲ್ಲಾ ಪ್ರಶಸ್ತಿ ಪಡೆದಿದ್ದರು..?

ಬೆಂಗಳೂರು: ಹಿರಿಯ ನಟಿ ಜಯಂತಿ ಅವರು ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಜೇನುಗೂಡು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಜಯಂತಿ ಅವರು ಸುಮಾರು 6 ಭಾಷೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ನಟನೆ ಮಾತ್ರವಲ್ಲದೇ ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದ ಜಯಂತಿ ಅವರು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದ್ದರು.

blank

ಜಯಂತಿ ಅವರು ತಮ್ಮ ಜೀವನದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, 1965ರ “ಮಿಸ್ ಲೀಲಾವತಿ” ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಎಡಕಲ್ಲು ಗುಡ್ಡದ ಮೇಲೆ (1973), ಮನಸ್ಸಿನಂತೆ ಮಾಂಗಲ್ಯ (1976), ಎರಡು ಮುಖ (1969), ಧರ್ಮ ದಾರಿ ತಪ್ಪಿತು (1981), ಮಸಣದ ಹೂವು (1985) ಚಿತ್ರಗಳಿಗೆ ಉತ್ತಮ ನಟಿ ಮತ್ತು ಆನಂದ್ (1986), ಟುವ್ವಿ ಟುವ್ವಿ ಟುವ್ವಿ (1998) ಚಿತ್ರಗಳ ಅಭಿನಯಕ್ಕಾಗಿ ಉತ್ತಮ ಪೋಷಕ ನಟಿ ಕರ್ನಾಟಕ ರಾಜ್ಯಪ್ರಶಸ್ತಿ ಗಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ ಸಿನಿಮಾಗಳಿಗೆ ಮಾಡರ್ನ್ ಡ್ರೆಸ್​ಗಳ ಪರಿಚಯ ಮಾಡಿದ್ದೇ ಜಯಂತಿ

blank

2005-06ನೇ ಸಾಲಿನ ಡಾಕ್ಟರ್ ರಾಜ್​ಕುಮಾರ್ ಅವಾರ್ಡ್​ ಸಹ ದೊರೆತಿದೆ. ಇನ್ನು, 1973ರಲ್ಲಿ ಎಡಕಲ್ಲು ಗುಡ್ಡದ ಮೇಲೆ ಮತ್ತು ತುಳಸಿ ಚಿತ್ರಗಳಿಗೆ ಬೆಸ್ಟ್ ಆ್ಯಕ್ಟ್ರೆಸ್ ಎಂದು ಎರಡು ಬಾರಿ ಫಿಲ್ಮ್​ಫೇರ್​ ಅವಾರ್ಡ್​ಗೂ ಭಾಜನರಾಗಿದ್ದಾರೆ.

ಇದನ್ನೂ ಓದಿ: ಆ ತೆಲುಗು ನಟ ಜಯಂತಿಗೆ ಹೊಡೆದುಬಿಟ್ಟಿದ್ದರು..- ಜಯಂತಿ ಜೊತೆಗಿನ ಒಡನಾಟ ನೆನೆಸಿಕೊಂಡ ಲಕ್ಷ್ಮೀ

blank

ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ಕಾಮತೃಷೆಯಿಂದ ಬಳಲುವ ಹೆಣ್ಣಾಗಿ ಮೊದಲ ಬಾರಿಗೆ ವಿಶಿಷ್ಟ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ಅಂತಲೂ ಕರೆಯಲ್ಪಡುತ್ತಾರೆ. ಅಭಿನಯ ಶಾರದೆ ಎಂಬ ಬಿರುದು ಕನ್ನಡ ಸಿನಿಮಾ ಇಂಡಸ್ಟ್ರಿ ಇವರ ಅಭಿನಯಕ್ಕೆ ಕೊಟ್ಟ ಗೌರವವಾಗಿದೆ.

ಇದನ್ನೂ ಓದಿ: ಅಭಿನಯ ಶಾರದೆ ಜಯಂತಿ ನಿಧನಕ್ಕೆ ಸಿಎಂ ಸೇರಿದಂತೆ ಗಣ್ಯರ ಸಂತಾಪ

blank

The post 500ಕ್ಕೂ ಹೆಚ್ಚು ಕನ್ನಡ ಸಿನಿಮಾದಲ್ಲಿ ಮಿಂಚಿದ್ದ ಜಯಂತಿ- ಯಾವೆಲ್ಲಾ ಪ್ರಶಸ್ತಿ ಪಡೆದಿದ್ದರು..? appeared first on News First Kannada.

Source: newsfirstlive.com

Source link