ಮತ್ತೊಮ್ಮೆ ಹುಟ್ಟಿ ಬಾ ತಾಯಿ.. ಕನ್ನಡ ನೆಲದಲ್ಲಿ: ಉಮಾಶ್ರೀ ಕಂಬನಿ

ಬೆಂಗಳೂರು: ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನಕ್ಕೆ ಸ್ಯಾಂಡಲ್‍ವುಡ್‍ನ ಅನೇಕ ಕಲಾವಿದರು, ಗಣ್ಯರು ಕಂಬನಿ ಮೀಡಿದಿದ್ದಾರೆ. ಹಿರಿಯ ಕಲಾವಿದೆ ಉಮಾಶ್ರೀ ಅವರು ಜಯಂತಿ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಹಿರಿಯ ನಟಿ ಉಮಾಶ್ರೀ ಅವರು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ ಜಯಂತಿಯವರನ್ನು ನೆನೆದು ದುಃಖ ತೃಪ್ತರಾಗಿದ್ದಾರೆ. ಸಹೃದಯಿ, ಮಮತಾಮಯಿ ನಮ್ಮನ್ನು ಅಗಲಿದ್ದಾರೆ. ನನಗೆ ತುಂಬಾ ದುಃಖವಾಗುತ್ತಿದೆ. ಸಣ್ಣವರಿಂದ, ದೊಡ್ಡವರವರೆಗೂ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಕಲಾವಿದೆ. ಅವರ ಅಭಿನಯಕ್ಕೆ ಅವರೆ ಸಾಟಿಯಾಗಿದ್ದಾರೆ. ಕಮಲ ಕುಮಾರಿ ಎನ್ನವ ಹೆಸರು ಎಷ್ಟೊಂದು ಚಂದ ಇದೆ. ಅವರು ಕಷ್ಟಕಗಳು ಕಮಲದ ಹೂವು ಹೇಗೆ ಕೆಸರಿನಲ್ಲಿ ಅರಳುತ್ತದೆಯೋ ಹಾಗೇ ಇವರು ಕಷ್ಟಗಳ ಮಧ್ಯೆಗೆ ಬಂದವರಾಗಿದ್ದಾರೆ. ವಯಸ್ಸು ಆಗಿದ್ದರು ಅವರ ವರ್ಚಸ್ಸು ಕಡಿಮೆಯಾಗಿರಲಿಲ್ಲ. ಮತ್ತೊಮ್ಮೆ ಹುಟ್ಟಿ ಬಾ ತಾಯಿ… ಕನ್ನಡ ನೆಲದಲ್ಲಿ. ಕನ್ನಡದ ಆಸ್ತಿ ಅವರು ಹೀಗಾಗಿ ಅವರು ಮತ್ತೆ ಕಲಾವಿದೆಯಾಗಿ ಹುಟ್ಟಿಬರಬೇಕು ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ

ಸಿನಿಮಾಕ್ಕೆ ಬರಬೇಕು ಎಂದರೆ ತುಂಬಾ ಕಷ್ಟ ಇತ್ತು. ಡಾನ್ಸ್, ನಟನೆ, ಹಾವಭಾವ, ಧ್ವನಿಯಲ್ಲಿ ಏರಿಳಿತ ಇರಬೇಕಿತ್ತು. ಅವರು ಎಷ್ಟೊಂದು ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿದ್ದರು. ಅವರು ಎಷ್ಟೊಂದು ಧೈರ್ಯ ಇತ್ತು ಎಂದರೆ ಈಗ ಕಾಮನ್ ಆಗಿರುವ ಸ್ವಿಮ್ಮಿಂಗ್‍ಸೂಟ್‍ನ್ನು ಅವರು ಆಗಲೇ ಹಾಕಿದ್ದರು. ಅವರಿಂದ ಕಲಿಯಬೇಕಿದ್ದು ತುಂಬಾ ಇತ್ತು. ಗ್ರಂಥಾಲಯದಲ್ಲಿರುವ ದೊಡ್ಡ ಗ್ರಂಥವಾಗಿದ್ದಾರೆ. ಜಯಂತಿ ಅವರ ಅವರ ಮಗ ತಾಯಿಗೋಸ್ಕರನೆ ಬದುಕಿದ್ದರು. ಮಗನಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಈಗ ನಾನು ಟ್ರೋಲ್ ಆಗುತ್ತಿರಬಹುದು – ಅರವಿಂದ್, ಚಕ್ರವರ್ತಿ ಚರ್ಚೆ

blank

ಬನಶಂಕರಿಯ ಸ್ವಗ್ರಹದಲ್ಲಿ ಜಯಂತಿ ಅವರು ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಜಯಂತಿ ಅವರು ಬೆಳಗ್ಗೆ ಎದ್ದೇಳಲೇ ಇಲ್ಲ, ರಾತ್ರಿ ಹೇಗೆ ಈ ಘಟನೆ ಸಂಭವಿಸಿತು ಗೊತ್ತಿಲ್ಲ. ಬೆಳಗ್ಗೆ ಎದ್ದೇಳಿಸೋಕೆ ನೋಡಿದೆವು ನಮಗೆ ಆಗಲೇ ತಿಳಿದಿದ್ದು, ಹೃದಯಾಘಾತವಾಗಿರಬಹುದೇನೋ ಗೊತ್ತಿಲ್ಲ. ಮುಂದಿನ ಕಾರ್ಯಗಳ ಬಗ್ಗೆ ಈಗೇನೂ ಗೊತ್ತಾಗುತ್ತಿಲ್ಲ ಎಂದು ಜಯಂತಿ ಜಯಂತಿ ಪುತ್ರ ಕೃಷ್ಣ ಕುಮಾರ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

The post ಮತ್ತೊಮ್ಮೆ ಹುಟ್ಟಿ ಬಾ ತಾಯಿ.. ಕನ್ನಡ ನೆಲದಲ್ಲಿ: ಉಮಾಶ್ರೀ ಕಂಬನಿ appeared first on Public TV.

Source: publictv.in

Source link