ಬಾಲಿವುಡ್ ನಟರ ಜೊತೆ ಧೋನಿ, ಶ್ರೇಯಸ್ ಅಯ್ಯರ್​ ಫುಟ್ಬಾಲ್ ಪ್ರಾಕ್ಟೀಸ್..!

ಬಾಲಿವುಡ್ ನಟರ ಜೊತೆ ಧೋನಿ, ಶ್ರೇಯಸ್ ಅಯ್ಯರ್​ ಫುಟ್ಬಾಲ್ ಪ್ರಾಕ್ಟೀಸ್..!

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ದಿನಗಳನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚಿಗಷ್ಟೆ ಕುಟುಂಬ ಸದಸ್ಯರ ಜೊತೆ ಶಿಮ್ಲಾ ಪ್ರವಾಸಕ್ಕೆ ತೆರಳಿ ಸುದ್ದಿಯಾಗಿದ್ದ ಧೋನಿ, ಈಗ ಐಪಿಎಲ್ ಆರಂಭಕ್ಕೂ ಮುನ್ನ ಪುಟ್ಬಾಲ್ ಆಡಿ ಗಮನ ಸೆಳೆದಿದ್ದಾರೆ. ಅಂದ್ಹಾಗೆ ಭಾರತದಲ್ಲಿ ಪುಟ್ಬಾಲ್ ಪ್ರಮೋಷನ್ ಮಾಡುವ ಸಲುವಾಗಿ, ಸೆಲಿಬ್ರಿಟಿಗಳ ಫುಟ್ಬಾಲ್ ಪಂದ್ಯಗಳನ್ನ ಆಯೋಜಿಸಲಾಗ್ತಿದೆ. ಈ ಪಂದ್ಯದಲ್ಲಿ ಸಂಗ್ರಹವಾಗುವ ಹಣವನ್ನ ಪುಟ್ಬಾಲ್ ಪ್ರಮೋಷನ್​ಗೆ ಬಳಸಲಿದೆ. ಆಲ್​ಸ್ಟಾರ್ಸ್ ಪುಟ್ಬಾಲ್ ಕ್ಲಬ್ ಪರ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿಯಲಿದ್ದಾರೆ. ಪಂದ್ಯಕ್ಕೆ ತಯಾರಿ ನಡೆಸಿಕೊಳ್ಳಲು ಧೋನಿ ಮುಂಬೈನ ಬಾಂದ್ರಾ ಮೈದಾನದಲ್ಲಿ ಅಭ್ಯಾಸದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್, ಬಾಲಿವುಡ್ ಸ್ಟಾರ್​ಗಳಾದ ರಣವೀರ್ ಸಿಂಗ್, ಸೈಫ್ ಆಲಿ ಖಾನ್ ಪುತ್ರ ಇಬ್ರಾಹಿಂ ಆಲಿ ಖಾನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

The post ಬಾಲಿವುಡ್ ನಟರ ಜೊತೆ ಧೋನಿ, ಶ್ರೇಯಸ್ ಅಯ್ಯರ್​ ಫುಟ್ಬಾಲ್ ಪ್ರಾಕ್ಟೀಸ್..! appeared first on News First Kannada.

Source: newsfirstlive.com

Source link