ತೆರೆಯ ಮೇಲೆ ಮ್ಯಾಜಿಕ್ ಮಾಡ್ತಿತ್ತು ರಾಜ್​ಕುಮಾರ್- ಜಯಂತಿ ಜೋಡಿ

ತೆರೆಯ ಮೇಲೆ ಮ್ಯಾಜಿಕ್ ಮಾಡ್ತಿತ್ತು ರಾಜ್​ಕುಮಾರ್- ಜಯಂತಿ ಜೋಡಿ

1968ರಲ್ಲಿ ತೆರೆಕಂಡ ವೈ. ಆರ್. ಸ್ವಾಮಿ ನಿರ್ದೇಶನದ ಜೇನುಗೂಡು ಚಿತ್ರದ ಮೂಲಕ ಜಯಂತಿ ಪೂರ್ಣಪ್ರಮಾಣದ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು. ವೈ. ಆರ್. ಸ್ವಾಮಿ ಡ್ಯಾನ್ಸ್ ರಿಹರ್ಸಲ್ ಮಾಡುವಾಗ ಜಯಂತಿಯವರನ್ನು ಕಂಡು ತಮ್ಮ ಸಿನಿಮಾದಲ್ಲಿ ಚಾನ್ಸ್ ಕೊಟ್ಟಿದ್ದರು. ಅವರೇ ಕಮಲಕುಮಾರಿಗೆ ಜಯಂತಿ ಎಂದು ನಾಮಕಾರಣವನ್ನು ಮಾಡಿದ್ದರು.. ನಂತರ ಆಗಿದ್ದೆಲ್ಲಾ ಇತಿಹಾಸ.

ಕನ್ನಡದ ಮೇರುನಟ ಡಾ. ರಾಜ್​ಕುಮಾರ್​ರೊಂದಿಗೆ 30ಕ್ಕೂ ಹೆಚ್ಚು ಸಿನಿಮಾದಲ್ಲಿ ಜಯಂತಿ ಅಭಿನಯಿಸಿದ್ದಾರೆ. ರಾಜ್​ಕುಮಾರ್ ಜೋಡಿಯ ಸಿನಿಮಾಗಳು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದವು.. ಈ ಜೋಡಿಯ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ರಾಜ್ ಮತ್ತು ಜಯಂತಿ ಜೋಡಿ ಮೊದಲ ಬಾರಿ ಕಾಣಿಸಿಕೊಂಡ ಚಿತ್ರ ಚಂದವಳ್ಳಿಯ ತೋಟ. ಇವರ ಜೋಡಿ ಪ್ರಸಿದ್ಧಿಯನ್ನು ಪಡೆದುಕೊಂಡಿತು. ಡಾಕ್ಟರ್ ರಾಜ್​ ಕುಮಾರ್ ಅಪಹರಣವಾದಾಗಲೂ ರಾಜ್ ಕುಟುಂಬದ ಪರ, ಅಭಿಮಾನಿಗಳಿಗೆ ಸಾಂತ್ವನ ಹೇಳಿ ಗಲಾಟೆ ನಿಭಾಯಿಸುವಲ್ಲಿಯೂ ಜಯಂತಿ ಅವರು ಕೆಲಸ ಮಾಡಿದ್ರು.

The post ತೆರೆಯ ಮೇಲೆ ಮ್ಯಾಜಿಕ್ ಮಾಡ್ತಿತ್ತು ರಾಜ್​ಕುಮಾರ್- ಜಯಂತಿ ಜೋಡಿ appeared first on News First Kannada.

Source: newsfirstlive.com

Source link